LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ದಲಿತ ಚಳವಳಿಯ ಅಂತರಾಳದ ನೋವು ಕಾಲಡಿಯ ಕಣ್ಣು-ಡಾ.ಶಿವಪ್ರಸಾದ್

ಕೋಲಾರ: ಅವರಿಗಾಗಿ ಬದುಕುವರು ಅವರೇ ಆಗಿರುತ್ತಾರೆ, ಇತರರಿಗಾಗಿ ಬದುಕುವವರು ಇತಿಹಾಸವಾಗುತ್ತಾರೆ. ದಲಿತ ಚಳವಳಿಯಲ್ಲಿ ಇತರರಿಗಾಗಿ ಹೋರಾಟ ನಡೆಸಿದ ಮಂಚೂಣಿ ನಾಯಕ ಸಿ.ಎಂ.ಮುನಿಯಪ್ಪ ಕಾಲಡಿಯ ಕಣ್ಣು ಕೃತಿಯ ಮೂಲಕ ತಮ್ಮ ಅನುಭವಗಳನ್ನು ಕಣ್ಣಿಗೆ ಕಟ್ಟಿದಂತೆ ಬರೆದು ವರ್ಣಿಸಲು ಸಾಧ್ಯವಿಲ್ಲದ ಚಳವಳಿಯನ್ನು ಅಕ್ಷರ ರೂಪದಲ್ಲಿ ಅನಾವರಣಗೊಳಿಸಿದ್ದಾರೆಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅಭಿಪ್ರಾಯಪಟ್ಟರು.ಕೋಲಾರದಲ್ಲಿ ಸೋಮವಾರ ದಲಿತ ಯುವ ಜಾಗೃತಿ ಸಮಿತಿ ಆಯೋಜಿಸಿದ್ದ ದಲಿತ ಹಿರಿಯ ಹೋರಾಟಗಾರ ಡಾ.ಸಿ.ಎಂ.ಮುನಿಯಪ್ಪರ ಕಾಲಡಿಯ ಕಣ್ಣು ಪುಸ್ತಕ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶೋಷಣೆಗೊಳಗಾದವರು ಪೊಲೀಸ್ ಠಾಣೆಗೆ ಹೋದರೆ, ನ್ಯಾಯಾಲಯ ಮೆಟ್ಟಿಲು ಹತ್ತಿದರೆ ನ್ಯಾಯ ಸಿಗುತ್ತದೆಯೇ ಎಂಬ ಅನುಮಾನದ ಕಾಲಘಟ್ಟದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯು ದಮನಿತರಿಗೆ ನ್ಯಾಯ ಕೊಡಿಸುತ್ತದೆ ಎಂಬ ನಂಬಿಕೆ ಹುಟ್ಟಿಸಿತ್ತು.ಹಸಿವನ್ನು ಆಲಂಗಿಸಿಕೊAಡು, ಕಾರುಣ್ಯವನ್ನು ಕಣ್ಣಿಗೊತ್ತಿಕೊಂಡು, ಇದ್ದವರು ಬಿಟ್ಟು ಕೊಟ್ಟು, ಸಿಕ್ಕಿದ್ದನ್ನು ತಿರಸ್ಕರಿಸಿ, ಅವಕಾಶಗಳನ್ನು ನಿರಾಕರಿಸಿದ ತ್ಯಾಗದ ತವರುಮನೆಯಂತಿದ್ದ ದಲಿತ ಚಳವಳಿಯ ಅಂತರಾಳದ ನೋವಿನ ಕಥೆ ಕಾಲಡಿಯ ಕಣ್ಣಿನಲ್ಲಿ ದಾಖಲಾಗಿದೆಯೆಂದು ಹೇಳಿದರು. ದಲಿತ ಚಳವಳಿಯು ಸ್ವಾತಂತ್ರ‍್ಯ ಚಳವಳಿಗಿಂತಲೂ ಮಿಗಿಲಾದ ಚಳವಳಿಯಾಗಿತ್ತು ಎಂದು ವಿವರಿಸಿದ ಅವರು, ಮುಂಬರುವ ಕಾಲಕ್ಕೆ ಮಾರ್ಗದರ್ಶನವಾಗಿರುವ, ನವರಸ ಗಳನ್ನೊಳಗೊಂಡ ಕೈಪಿಡಿಯಾಗಿರುವ ಕಾಲಡಿಯ ಕಣ್ಣು ಕೃತಿಯನ್ನು ಸಿ.ಎಂ ನಾಡಿಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಆತಂಕವನ್ನು ಆನಂದ ಎಂದುಕೊಳ್ಳುತ್ತಿರುವ ಪೀಳಿಗೆಯನ್ನು ಸತ್ಯ ಮತ್ತು ಪ್ರೀತಿಯ ಕಡೆ ಸೆಳೆಯುವ ಭೂಮಿ ತೂಕದ, ಆಕಾಶದಷ್ಟು ಅಗಲದ ದೇಶವನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಈ ಕೃತಿಯು ಪ್ರೇರೇಪಿಸುತ್ತದೆ, ಈ ಕೃತಿ ಕುರಿತು ಹೆಚ್ಚು ಸಂವಾದಗಳು ನಡೆಯಬೇಕು ಎಂದರು. ಕೃತಿ ಕುರಿತಂತೆ ಡಯಟ್ ತಾಂತ್ರಿಕ ಸಹಾಯಕ ಡಾ.ಎಂ.ನಾರಾಯಣಸ್ವಾಮಿ ಮಾತನಾಡಿ ಕಾಲಡಿಯ ಕಣ್ಣು ಕೃತಿಕಾರರ ಸ್ವಪ್ರಜ್ಞೆಯನ್ನಲ್ಲದೆ ಸಮಷ್ಠಿಯ ಪ್ರಜ್ಞೆಯಲ್ಲಿ ಮೂಡಿ ಬಂದಿದೆ, ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ದಲಿತ ಚಳವಳಿ ಸಾಗಿ ಬಂದಿದ್ದನ್ನು ಪ್ರತಿಪಾದಿಸುತ್ತದೆ, ಸಮುದಾಯಿಕ ಸಂವೇದನೆಯನ್ನು ಕೃತಿಯು ಮೂಡಿಸುತ್ತದೆ, ಕೋಲಾರ ಜಿಲ್ಲೆಯ ಭಾಷಾ ಸೊಗಡನ್ನು ಬಳಸಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೋಲಾರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ ಚಳವಳಿಯನ್ನೇ ಉಸಿರಾಡುತ್ತಾ ಚಳವಳಿಯಲ್ಲಿಯೇ ಜೀವಿಸುತ್ತಿರುವ ಚಳವಳಿಯ ನೆನಪುಗಳ ಹಸಿರನ್ನು ಕಾಪಾಡಿಕೊಂಡಿರುವ ಸಿ.ಎಂ.ಮುನಿಯಪ್ಪರಿAದ ಮಾತ್ರವೇ ಇಂತದ್ದೊAದು ಕೃತಿ ಹೊರ ಬರಲು ಸಾಧ್ಯವಿದೆ. ಇದೇ ಕಾರಣಕ್ಕೆ ಕೃತಿಯು ಕೇವಲ ಆತ್ಮಕಥನವಾಗದೆ ದಲಿತ ಲೋಕ ಕಥನವಾಗಿ ಹೊರಹೊಮ್ಮಿದೆ. ಕೃತಿ ಕುರಿತು ಸಾಕಷ್ಟು ಚರ್ಚೆಗಳು ನಾಡಿನಾದ್ಯಂತ ಆಗಬೇಕಿದ್ದು, ಮೊಟ್ಟ ಮೊದಲ ಕಾರ್ಯಕ್ರಮವನ್ನು ಆಯೋಜಿಸಿರುವ ದಲಿತ ಜಾಗೃತಿ ಸಮಿತಿ ಕಾರ್ಯ ಶ್ಲಾಘನೀಯವಾಗಿದೆ. ಕೃತಿಯು ಶೀಘ್ರ ಇಂಗ್ಲೀಷ್, ಹಿಂದಿ, ಮರಾಠಿ, ತೆಲುಗು, ತಮಿಳು ಭಾಷೆಗಳಿಗೂ ತರ್ಜುಮೆಯಾಗಿ ದೇಶವ್ಯಾಪಿ ತಲುಪಿ ಚರ್ಚೆಗೊಳಪಡಬೇಕಿದೆ ಎಂದು ಅಭಿಪ್ರಾಯಪಟ್ಟರು.ಮಾಲೂರಿನ ದೊಡ್ಡಿ ಮುನಿಯಪ್ಪ ಮಾತನಾಡಿ ಚಳವಳಿಯು ಸಾವಿರಾರು ಕುಟುಂಬಗಳಲ್ಲಿ ಆತ್ಮಾಭಿಮಾನವನ್ನು ಮೂಡಿಸಿದೆ, ಚಳವಲಿಯ ಸಾರಥ್ಯವಹಿಸಿದ್ದವರ ಪೈಕಿ ಪ್ರಮುಖರಾದ ಸಿ.ಎಂ.ಮುನಿಯಪ್ಪರ ಆತ್ಮಚರಿತ್ರೆ ಪ್ರಕಟಗೊಂಡಿರುವುದು ಚಳವಳಿಯ ದಿನಗಳ ದಾಖಲೀಕರಣವೂ ಆಗಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಿಗೆ ಕೃತಿಯನ್ನು ಸೀಪೂರ್ ದೇವರಾಜ್, ತೊಂಡಾಲ ಬಿ.ನಾರಾಯಣಸ್ವಾಮಿ, ಸೀಪೂರು ಶ್ರೀನಿವಾಸ್, ಎಚ್.ಮುನಿಚೌಡಪ್ಪ ವಿತರಿಸಿದರು. ಕಾರ್ಯಕ್ರಮದಲ್ಲಿ ಸಿ.ವಿ.ನಾಗರಾಜ್, ಸುಬ್ರಮಣಿ, ಕಿತ್ತಂಡೂರು ಕಾಮಾಕ್ಷಮ್ಮ ಪಾಲ್ಗೊಂಡಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು