LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Davanagere

ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ: ಚುನಾವಣಾಧಿಕಾರಿ

ದಾವಣಗೆರೆ: ನಂ-107 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾನ್ಯ ಶಾಮನೂರು ಶಿವಶಂಕರಪ್ಪ ಇವರು ದಿನಾಂಕ: 14-12-2025 ರಂದು ಮರಣ ಹೊಂದಿರುವುದರಿAದ ತೆರವಾದ ಸ್ಥಾನಕ್ಕೆ ಮಾನ್ಯ ಮುಖ್ಯ ಚುನಾವಣಾ ಆಯುಕ್ತರು, ನವದೆಹಲಿ ಇವರು ದಿನಾಂಕ: 15-03-2026 ರಂದು ಉಪ ಚುನಾವಣೆ ವೇಳಾಪಟ್ಟಿಯನ್ನು ಹೊರಡಿಸಿರುತ್ತಾರೆ. ಪ್ರಸ್ತುತ ಈ ಚುನಾವಣಾ ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳು ಸ್ಪರ್ಧಿಸಿರುತ್ತಾರೆ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಚುನಾವಣಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದ್ದಾರೆ.
ಮತದಾರರ ವಿವರಗಳು : ನಂ-107 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1,13,399 ಪುರುಷರು , 1,17,690 ಮಹಿಳೆಯರು ಹಾಗೂ 43 ಇತರರು ಹೀಗೆ ಒಟ್ಟು 2,31,072 ಸಾಮಾನ್ಯ ಮತದಾರಿದ್ದಾರೆ, ಇವರಲ್ಲಿ 1,494-ಪುರುಷರು, 1,376-ಮಹಿಳೆಯರು ಹೀಗೆ ಒಟ್ಟು 2,870 ಯುವ ಮತದಾರರು, 1,375 ಪುರುಷರು , 1,137-ಮಹಿಳೆಯರು ಹೀಗೆ ಒಟ್ಟು 2,512 ವಿಕಲಚೇತನ ಮತದಾರರು , 891 ಪುರುಷರು 1,083-ಮಹಿಳೆಯರು ಹೀಗೆ ಒಟ್ಟು 1974 ಮತದಾರರು 85+ ವರ್ಷ ಮೇಲ್ಪಟ್ಟವರು , 8 ಪುರುಷರು , 20-ಮಹಿಳೆಯರು ಹೀಗೆ ಒಟ್ಟು 28 ಮತದಾರರು 100+ ವರ್ಷ ಮೇಲ್ಪಟ್ಟವರು ಮತ್ತು 34 ಪುರುಷರು , 1 ಮಹಿಳೆಯರು ಹೀಗೆ ಒಟ್ಟು 35 ಸೇವಾ ಮತದಾರರು ಇದ್ದಾರೆ.
ಮತಗಟ್ಟೆ ಮತ್ತು ಇವಿಎಂ ವಿವರ
ಒಟ್ಟು ಮತಗಟ್ಟೆಗಳು: 284 (ನಗರ: 234, ಗ್ರಾಮೀಣ: 50). ಒಟ್ಟು ಮತಗಟ್ಟೆ ಕೇಂದ್ರಗಳು: 136.
ಇವಿಎಂ ವಿವರ: 568, CU: 284, VVPAT: 284. ಮೀಸಲು : BU: 169, CU: 70, VVPAT: 100.
ಚುನಾವಣಾ ಸಿಬ್ಬಂದಿ ಮತ್ತು ಭದ್ರತೆ: ಫ್ಲೈಯಿಂಗ್ ಸ್ಕ್ವಾಡ್: 08 ತಂಡಗಳು (24 ಅಧಿಕಾರಿಗಳು), ತಂಡ: 11 ತಂಡಗಳು (33 ಅಧಿಕಾರಿಗಳು).ಅಕೌಟಿಂಗ್ 1 ತಂಡ, ವಿವಿಟಿ 02 ತಂಡಗಳು, ವಿಎಸ್ ಟಿ 03 ತಂಡಗಳು, ಸೆಕ್ಟರ್ 27 ಅಧಿಕಾರಿಗಳು.
ಚೆಕ್ ಪೋಸ್ಟ್: ಚುನಾವಣಾ ಅಕ್ರಮ ತಡೆಯಲು ಒಟ್ಟು 11 ಚೆಕ್ ಪೋಸ್ಟ ್ಗಳನ್ನು ತೆರೆಯಲಾಗಿದೆ
ಚೆಕ್ ಪೋಸ್ಟ್ ವಿಳಾಸ 1. ಅಜಾದ್ ನಗರ -ಚೌಡಮ್ಮ ದೇವಸ್ಥಾನದ ಹತ್ತಿರ ಮಾಗನಹಳ್ಳಿ ರಸ್ತೆ 2.ಅಜಾದ್ ನಗರ ಬೇತೂರು ಹಳ್ಳ ಚೆಕ್ ಪೋಸ್ಟ್ 3.ಗಾಂಧಿನಗರ-ಶಿವಪುರ ಕೊಂಡಜ್ಜಿ ರಸ್ತೆ 4.ಗಾಂಧಿನಗರ -ಸಾಯಿ ಇಂಟರ್ ನ್ಯಾಷನಲ್ ಬಳಿ ಹರಿಹರ ರಸ್ತೆ 5.ಆರ್.ಎಂ.ಸಿ-ಬಾಡಾ ಕ್ರಾಸ್ 6.ಆರ್.ಎಂ.ಸಿ -ಗಾಣಗಿತ್ತಿಕಲ್ಲು (ಹಳೇ ಚಿಕ್ಕನಹಳ್ಳಿ ಚೆಕ್ ಪೋಸ್ಟ್) 7.ಕೆ.ಟಿ.ಜೆ ನಗರ -ಲೋಕಿಕೆರೆ ರಸ್ತೆ ಚೆಕ್ ಪೋಸ್ಟ್ 8.ಕೆ.ಟಿ.ಜೆ ನಗರ-ಭೂಮಿಕ ನಗರ ಚೆಕ್ ಪೋಸ್ಟ್ 9.ವಿದ್ಯಾ ನಗರ-ವಿದ್ಯಾನಗರ ಚೆಕ್ ಪೋಸ್ಟ್ 10.ವಿದ್ಯಾ ನಗರ -ಶಾಮನೂರು ರಸ್ತೆ ಚೆಕ್ ಪೋಸ್ಟ್ 11.ಹದಡಿ -ಕಾರಿಗನೂರು ಕ್ರಾಸ್, ಅಡ್ರೋಡ್ ಸೂಕ್ಷ್ಮ ಮತಗಟ್ಟೆಗಳು: 76 ಕ್ರಿಟಿಕಲ್ ಮತಗಟ್ಟೆಗಳು.
ವೆಬ್ ಕ್ಯಾಸ್ಟಿಂಗ್: ಎಲ್ಲಾ 284 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಮತದಾನ ಅಧಿಕಾರಿಗಳು ಮತ್ತು ಮೈಕ್ರೊ ಅಬ್ ಸರ್ ವರ್ ಗಳ ವಿವರ: 342 ಪಿ.ಆರ್.ಓ ಗಳು, 342 ಎ.ಪಿ.ಆರ್.ಓ ಗಳು , 681 ಪಿಓಗಳು ಮತ್ತು 60 ಮೈಕ್ರೊ ಅಬ್ ಸರ್ ವರ್ ಗಳು
ಪೊಲೀಸ್ ಇಲಾಖೆಯ ಸಿಬ್ಬಂದಿಗಳ ವಿವರ: 38 ಸಿ.ಎ.ಪಿ.ಎಫ್ ತಂಡಗಳು, 47 ಎ.ಎಸ್.ಐ ರವರು, 154 ಪ್ರೋ ಪಿ.ಎಸ್.ಐ ರವರು , 72 ಮುಖ್ಯಪೇದೆಗಳು, 284 ಪೇದೆಗಳು ಹಾಗೂ 212 ಹೋಂಗಾರ್ಡ್ ಗಳನ್ನು ನಿಯೋಜಿಸಲಾಗಿದೆ.
ಮತದಾನದ ಪ್ರಮುಖ ಮಾಹಿತಿ: ಮಸ್ಟರಿಂಗ್ ಕೇಂದ್ರ: ದಿನಾಂಕ: 08-04-2026 ರಂದು ಡಿ.ಆರ್.ಆರ್ ವಿದ್ಯಾಸಂಸ್ಥೆ, ಪಿ.ಬಿ ರಸ್ತೆ, ದಾವಣಗೆರೆ ಇಲ್ಲಿಂದ ಮತದಾನ ಸಾಮಗ್ರಿಗಳನ್ನು ವಿತರಿಸಲಾಗುವುದು.
ಮತದಾನದ ದಿನಾಂಕ: 09-04-2026. ಸಮಯ: ಬೆಳಿಗ್ಗೆ 7:00 ರಿಂದ ಸಂಜೆ 6:00 ಗಂಟೆಯವರೆಗೆ.
ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಚುನಾವಣಾಧಿಕಾರಿಗಳು, 107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಉಪವಿಭಾಗಾಧಿಕಾರಿಗಳು, ದಾವಣಗೆರೆ ಉಪ ವಿಭಾಗ ಸಂತೋಷ್ ಕುಮಾರ್, ಕೆ.ಎ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು