LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ಸಂವಿಧಾನದಿಂದ ಎಲ್ಲರಿಗೂ ಸಮಾನ ಅವಕಾಶ: ಪ್ರೊ.ಬಿ.ಕೆ.ರವಿ

ಕೋಲಾರ: ಭಾರತವು ಶ್ರೇಣೀಕೃತ ವರ್ಗ ಸಂಘರ್ಷ ಹಾಗೂ ಅವಕಾಶ ವಂಚಿತರ ನೋವು ಇರುವ ರಾಷ್ರ್ಟವಾಗಿದೆ. ಇಂತಹ ಸಮಾಜದಲ್ಲಿ ಸಮಾನತೆಯ ಚಿಂತನೆಯೊಂದಿಗೆ ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ಜಾರಿಯಾದ ನಂತರವೇ ನಮಗೆಲ್ಲರಿಗೂ ನಿಜವಾದ ಸ್ವಾತಂತ್ರ÷್ಯ ಲಭಿಸಿದೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಅಭಿಪ್ರಾಯಪಟ್ಟರು.ಗುರುವಾರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸುವರ್ಣಗಂಗೆ ಆವರಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ಅವರ 135ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂದು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಮತ್ತು ಕುಲಪತಿಯಾಗಿ ನಾನು ಇಲ್ಲಿ ಧೈರ್ಯವಾಗಿ ಮಾತನಾಡಲು ಸಂವಿಧಾನವೇ ಕಾರಣ. ಸಂವಿಧಾನದಿAದಾಗಿ ಎಲ್ಲರಿಗೂ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಮಾನ ಅವಕಾಶ ಲಭಿಸಿದೆ. ಯಾವುದೇ ಪ್ರಜೆ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಬಹುದಾದ ಸೌಂದರ್ಯ ನಮ್ಮ ಪ್ರಜಾಪ್ರಭುತ್ವಕ್ಕಿದೆ. ಆದರೆ, ಇಂದಿಗೂ ಮಹಿಳೆಯರು, ದಲಿತರು ಹಾಗೂ ನಿರ್ಗತಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಂತಿಲ್ಲ. ಸಮಸಮಾಜದ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಪ್ರಾತಿನಿಧ್ಯ ಸಿಗಬೇಕಿದೆ. ಮಹಿಳಾ ಮೀಸಲಾತಿ ಸಂಪೂರ್ಣವಾಗಿ ಸಾಕಾರಗೊಳ್ಳಬೇಕು. ಇಂದು ಹೆಣ್ಣು ಮಕ್ಕಳಿಗೆ ಸಿಕ್ಕಿರುವ ಎಲ್ಲಾ ಅವಕಾಶಗಳ ಹಿಂದೆ ಅಂಬೇಡ್ಕರ್ ಅವರ ಶ್ರಮವಿದೆ. ಕವಿ ಸಿದ್ದಲಿಂಗಯ್ಯನವರು ಹೇಳಿದಂತೆ, ಸಮಾಜದಲ್ಲಿ ಮಲಗಿದವರನ್ನು ಎಬ್ಬಿಸಿ ನಿಲ್ಲಿಸುವ ಕಾರ್ಯವಾಗಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರೊರೆಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು, ಆಗ ಮಾತ್ರ ನಿಮ್ಮ ಶಿಕ್ಷಣಕ್ಕೆ ಬೆಲೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಪ್ಪ ದಳವಾಯಿ ಮಾತನಾಡಿ, ನಮ್ಮ ನಡುವಿನ ಅಸಮಾನತೆಯನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡುವುದು ಅಂಬೇಡ್ಕರ್ ಜಯಂತಿಯ ನಿಜವಾದ ಆಶಯವಾಗಬೇಕು. ಅಸಮಾನತೆ ತೊಲಗಿಸಿದರೆ ನಾವು ಈ ದೇಶಕ್ಕೆ ನೀಡುವ ಅತಿದೊಡ್ಡ ಕೊಡುಗೆಯಾಗುತ್ತದೆ. ಅಂಬೇಡ್ಕರ್ ಅವರ ವಿದ್ವತ್ತನ್ನು ಜಗತ್ತು ಹೇಗೆ ಗೌರವಿಸುತ್ತದೆ ಎಂಬುದನ್ನು ಉದಾಹರಿಸಿದ ಅವರು, "ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯ ಸ್ಮಾರಕ ಬರಹದ ಮೇಲೆ ಇಂತಹ ಜಗತ್ಪ್ರಸಿದ್ಧ ಜ್ಞಾನಿಗೆ ನಾವು ವಿದ್ಯಾಭ್ಯಾಸ ನೀಡಿದ್ದೇವೆ ಎಂಬುದು ನಮ್ಮ ಹೆಮ್ಮೆ ಎಂದು ಕೆತ್ತಲಾಗಿದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಅಂಬೇಡ್ಕರ್ ಅವರ ಜಾತಿ ಯಾವುದು, ಅವರನ್ನು ಓದಬೇಕೋ ಬೇಡವೋ ಎನ್ನುವ ವಿಚಿತ್ರ ಹಾಗೂ ಸಂಕುಚಿತ ಮನಸ್ಥಿತಿ ಇಂದಿಗೂ ಇರುವುದು ವಿಷಾದನೀಯ ಎಂದರು.ಬ್ರಿಟಿಷರನ್ನು ಓಡಿಸಲು ಮಹಾತ್ಮ ಗಾಂಧೀಜಿಯವರು ಉಪ್ಪನ್ನು ಅಸ್ತ್ರವಾಗಿ ಬಳಸಿದರೆ, ಅಂಬೇಡ್ಕರ್ ಅವರು ಭಾರತೀಯರಲ್ಲಿ ಜ್ಞಾನದ ದೀವಿಗೆ ಹಚ್ಚಲು ಹಾಗೂ ಸಮಾನತೆ ತರಲು ಮಹಾಡ್ ಸತ್ಯಾಗ್ರಹದ ಮೂಲಕ ನೀರನ್ನು ಮುಟ್ಟಿದರು. ಆದರೆ ಇಂದಿಗೂ ಸಮಾಜದಲ್ಲಿ ಯಜಮಾನಿಕೆಯ ದುರಹಂಕಾರ ಮತ್ತು ಜಾತಿ ಅಜ್ಞಾನ ತಾಂಡವವಾಡುತ್ತಿದೆ ಹೊರತು ಮಾನವೀಯ ವಿಶ್ವಾಸದ ಕೊರತೆಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಂಬೇಡ್ಕರ್ ಅವರು ಅಂದು ವಿದೇಶದಿಂದ ಹಿಂತಿರುಗಿ ಬರದೇ ಹೋಗಿದ್ದರೆ, ಈ ದೇಶಕ್ಕೆ ನಾಗರಿಕತೆ ಎಂಬುದೇ ಬರುತ್ತಿರಲಿಲ್ಲ. ದೇವಸ್ಥಾನ ಎಲ್ಲರದ್ದಾದ ಮೇಲೆ ಪ್ರವೇಶವೂ ಎಲ್ಲರಿಗೂ ಇರಬೇಕು. ಈ ನಿಟ್ಟಿನಲ್ಲಿ ಅಸಮಾನತೆ ಹೋಗಲಾಡಿಸುವುದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ದಳವಾಯಿ ಅವರು ನುಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಕಾರ್ಯಕ್ರಮದಲ್ಲಿ ಹೋರಾಟದ ಹಾಡುಗಳು ಹಾಡಿದರು. ಅಂಬೇಡ್ಕರ್ ಕುರಿತು ಭಾಷಣ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ, ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರಾದ ಆಶಾ ಸುಲ್ತಾನ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.ಕಾರ್ಯಕ್ರಮದಲ್ಲಿ ಆಡಳಿತ ಕುಲಸಚಿವ ಸಿ.ಎನ್. ಶ್ರೀಧರ್, ಮೌಲ್ಯಮಾಪನ ಕುಲಸಚಿವ ಪ್ರೊ. ಲೋಕನಾಥ್, ಸುವರ್ಣಗಂಗೆ ಕ್ಯಾಂಪಸ್‌ನ ನಿರ್ದೇಶಕಿ ಪ್ರೊ. ಕುಮುದಾ, ಪಿಎಂ ಉಷಾ ಸೆಲ್ ನೋಡೆಲ್ ಅಧಿಕಾರಿ ಡಾ. ರಮೇಶ್, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರುಗಳಾದ ಸೀಸಂದ್ರ ಗೋಪಾಲಗೌಡ, ಜಯದೀಪ್, ಆಶಾಸುಲ್ತಾನ, ಬಾಹುಬಲಿ, ಲೋಕೇಶ್, ಜಮೀಲ್ ಅಹಮದ್, ಮುನಿಶಾಮಿಗೌಡ, ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು