LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಗೃಹಿಣಿ ಆತ್ಮಹತ್ಯೆ ಪ್ರಕರಣ: ಐವರು ಬಂಧನ

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್‍ಗೆ ನೇಣು ಬಿಗಿದುಕೊಂಡು ಗೃಹಿಣಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತನಿಖೆಯನ್ನು ಕೈಗೊಂಡ ಗೋವಿಂದರಾಜನಗರ ಪೊಲೀಸರು ಮೃತಳ ಪತಿ ಸೇರಿದಂತೆ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಐಶ್ವರ್ಯ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.ಬಂಧಿತ ಆರೋಪಿಗಳು ಐಶ್ವರ್ಯ ಆತ್ಮಹತ್ಯೆ ಬಳಿಕ ಮನೆ ಮಂದಿ ಸೇರಿ ಗೋವಾ ಹಾಗೂ ಮುಂಬೈನಲ್ಲಿ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಐಶ್ವರ್ಯ ಕುಟುಂಬಸ್ಥರ ನಿಶ್ಚಯದಂತೆ ಕಳೆದ 5 ವರ್ಷಗಳ ಹಿಂದೆ ರಾಜೇಶ್ ನನ್ನು ಮದುವೆಯಾಗಿದ್ದು, ಐಶ್ವರ್ಯ ಯುಎಸ್‍ಎ ನಲ್ಲಿ ಎಂಬಿಎ ಮಾಡಿದ್ದ ಪ್ರತಿಭಾವಂತೆಯಾಗಿದ್ದರೆ, ಪತಿ ರಾಜೇಶ್, ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ಮಾಲೀಕರಾಗಿದ್ದರು.ರಾಜೇಶ್ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಮಣಿ ತಂಗಿಯ ಪತಿ ರವೀಂದ್ರ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದು, ಈತನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದ. ಆದರೆ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬದಲ್ಲಿ ಕಲಹ ಇದ್ದಿದ್ದರಿಂದ ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ದಾಯಾದಿಗಳು ಹುಳಿ ಹಿಂಡಿದ್ದಾರೆ.

ರವೀಂದ್ರ ಕುಟುಂಬ ಐಶ್ಯರ್ಯ ಚಾರಿತ್ರ್ಯ ವಧೆ ಮಾಡಿ ಪತಿ ರಾಜೇಶ್ ಕುಟುಂಬಕ್ಕೆ ಇಲ್ಲಸಲ್ಲದ ಕಟ್ಟುಕಥೆ ಹೇಳುತ್ತಿತ್ತು. ಅಷ್ಟೇ ಅಲ್ಲದೇ ಐಶ್ವರ್ಯಳ ಫೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರಂತೆ. ಇದರಿಂದಾಗಿ ರಾಜೇಶ್ ಕುಟುಂಬದ ಸದಸ್ಯರು ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿದ್ದರು.

ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿನ್ ಕಿರುಕುಳ ನೀಡಿ ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಎಷ್ಟೇ ಕಿರುಕುಳ ನೀಡುತ್ತಿದ್ದರೂ ಪತಿಗಾಗಿ ಐಶ್ವರ್ಯ ಸುಮ್ಮನಿದ್ದಳು.
ತಾನು ದುಡಿದ ಹಣದಲ್ಲಿ ಪತಿಗೆ ಐಶಾರಾಮಿ ಸೂಪರ್ ಬೈಕ್ ಹಾಗೂ ಚಿನ್ನಾಭರಣಗಳನ್ನು ಕೊಡಿಸಿದ್ದರು, ಆದರೆ ಕುಟುಂಬಸ್ಥರ ಮಾತನ್ನ ಕೇಳಿ ಪತಿ ರಾಜೇಶ್ ಕೂಡ ಐಶ್ವರ್ಯಳನ್ನು ನಿಂದಿಸುತ್ತಿದ್ದು ಇದರಿಂದ ಮನನೊಂದ ಐಶ್ವರ್ಯ, 20 ದಿನಗಳ ಹಿಂದೆ ತವರು ಸೇರಿದ್ದಳು.

ಅಲ್ಲದೆ, ಅ. 26 ರಂದು ಮನನೊಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯತೆಗೆ ಶರಣಾಗಿದ್ದಳು. ಘಟನೆ ಸಂಬಂಧ ಐಶ್ವರ್ಯಾಳ ತಾಯಿ, ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು.ಜೊತೆಗೆ, ಸಂಸಾರ ಒಡೆಯಲು ಹುಳಿ ಹಿಂಡಿದ ರವೀಂದ್ರ, ಗೀತಾ, ಶಾಲಿನ, ಓಂಪ್ರಕಾಶ್ ಎಂಬುವವರ ಮೇಲೂ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು