LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಭಾರತದಲ್ಲಿ ಗ್ಯಾಲಕ್ಸಿ ಎ55 5ಜಿ, ಗ್ಯಾಲಕ್ಸಿ ಎ35 5ಜಿ ಬಿಡುಗಡೆ

ಕೆ.ಆರ್.ಪುರ: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‍ಸಂಗ್ ಇಂದು ಅದ್ಭುತವಾದ ಆವಿಷ್ಕಾರಗಳನ್ನು ಹೊಂದಿರುವ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಅನ್ನು ಬಿಡುಗಡೆ ಮಾಡಿದೆ. ಹೊಸ ಎ ಸರಣಿಯ ಸಾಧನಗಳು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆ, ಎಐ ಫೀಚರ್ ಗಳುಳ್ಳ ಕ್ಯಾಮೆರಾ, ಟ್ಯಾಂಪರ್-ರೆಸಿಸ್ಟೆಂಟ್ ಸೆಕ್ಯೂರಿಟಿ, ಸ್ಯಾಮ್‍ಸಂಗ್ ನಾಕ್ಸ್ ವಾಲ್ಟ್ ಸೇರಿದಂತೆ ಅನೇಕ ಪ್ರಮುಖ ಹೊಸ ವೈಶಿಷ್ಟ್ಯಗಳನ್ನು ಹೊಂದಿವೆ.

“ಗ್ಯಾಲಕ್ಸಿ ಎ ಸರಣಿಯು ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‍ಫೋನ್ ಸರಣಿಯಾಗಿದೆ. ಇದು ಭಾರತದ ಎಂಝಡ್ ಗ್ರಾಹಕರಲ್ಲಿ ಮಧ್ಯೆ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಗ್ಯಾಲಕ್ಸಿ ಎ55 5ಜಿ & ಎ35 5ಜಿ ಬಿಡುಗಡೆಯು ಹೊಸ ರೀತಿಯ ಅಪೂರ್ವ ನಾವೀನ್ಯತೆಗಳನ್ನು ಎಲ್ಲರಿಗೂ ದೊರಕಿಸುವಂತೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಪಾದಿಸುತ್ತದೆ. ಗ್ಯಾಲಕ್ಸಿ ಎ55 5ಜಿ ಮತ್ತು ಎ35 5ಜಿ ಸಾಧನಗಳು 5ಜಿ ಸ್ಮಾರ್ಟ್‍ಫೋನ್ ವಿಭಾಗದಲ್ಲಿ ಮತ್ತು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಿಡ್ ಪ್ರೀಮಿಯಂ (ರೂ.30,000-ರೂ.50,000) ವಿಭಾಗದಲ್ಲಿ ನಮ್ಮ ನಾಯಕತ್ವವನ್ನು ಗಟ್ಟಿಗೊಳಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ಸ್ಯಾಮ್‍ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್ ಸೀನಿಯರ್ ಡೈರೆಕ್ಟರ್ ಘುಫ್ರಾನ್ ಆಲಂ ಹೇಳಿದರು.

ವಿನ್ಯಾಸ ಮತ್ತು ಬಾಳಿಕೆ: ಮೊದಲ ಬಾರಿಗೆ, ಗ್ಯಾಲಕ್ಸಿ ಎ55 5ಜಿ ಲೋಹದ ಚೌಕಟ್ಟನ್ನು ಹೊಂದಿದೆ ಮತ್ತು ಗ್ಯಾಲಕ್ಸಿ ಎ35 5ಜಿ ಪ್ರೀಮಿಯಂ ಗ್ಲಾಸ್ ಅನ್ನು ಮರಳಿ ಪಡೆದಿದೆ. ಈ ಫೋನ್‍ಗಳು ಆಸಮ್ ಲಿಲಾಕ್, ಆಸಮ್ ಐಸ್ ಬ್ಲೂ ಮತ್ತು ಆಸಮ್ ನೇವಿ ಎಂಬ ಮೂರು ಟ್ರೆಂಡಿ ಬಣ್ಣಗಳಲ್ಲಿ ಲಭ್ಯವಿದೆ. ಇದು ಐಪಿ67 ರೇಟಿಂಗ್ ಗಳಿಸಿದ್ದು, 1 ಮೀಟರ್ ಶುದ್ಧ ನೀರಿನಲ್ಲಿ 30 ನಿಮಿಷಗಳವರೆಗೆ ಇರಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಧೂಳು ಮತ್ತು ಮರಳು ನಿರೋಧಕ ಗುಣ ಇರುವ ಫೋನ್ ಗಳಾಗಿವೆ. 6.6-ಇಂಚಿನ ಎಫ್‍ಎಚ್‍ಡಿ+ ಸೂಪರ್ ಅಮೋಲ್ಡ್ ಡಿಸ್ಪ್ಲೇ ಮತ್ತು ಕಡಿಮೆಗೊಳಿಸಿದ ಬೆಜೆಲ್‍ಗಳ ಜೊತೆಗೆ 120ಹರ್ಟ್ಜ್ ರಿಫ್ರೆಶ್ ದರ ಹೊಂದಿದ್ದು, ಅತ್ಯಂತ ಸೂಕ್ಷ್ಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

ಕ್ಯಾಮೆರಾ ಆವಿಷ್ಕಾರಗಳು: ಈ ಹೊಸ ಎ ಸರಣಿಯ ಸ್ಮಾರ್ಟ್‍ಫೋನ್‍ಗಳು ಬಳಕೆದಾರರು ಅತ್ಯುನ್ನತ ಕಂಟೆಂಟ್ ಗಳನ್ನು ಸಿದ್ಧಗೊಳಿಸಲು ನವೀನ ಎಐ- ವರ್ಧಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ನೀಡುತ್ತವೆ. ಫೋಟೋ ರೀಮಾಸ್ಟರ್, ಇಮೇಜ್ ಕ್ಲಿಪ್ಪರ್ ಮತ್ತು ಆಬ್ಜೆಕ್ಟ್ ಎರೇಸರ್ ಎಂಬ ಈ ವೈಶಿಷ್ಟ್ಯಗಳು ಲಭ್ಯವಿದೆ. ಗ್ಯಾಲಕ್ಸಿ ಎ55 5ಜಿ ಮತ್ತು ಎ35 5ಜಿ ಗಳು 50 ಎಂಪಿ ಟ್ರಿಪಲ್ ಕ್ಯಾಮೆರಾ ಹೊಂದಿದ್ದು, ಎಐ ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐಎಸ್ಪಿ)ಮೂಲಕ ಉನ್ನತೀಕರಿಸಲ್ಪಟ್ಟ ನೈಟೋಗ್ರಫಿ ಹೆಗ್ಗಳಿಕೆ ಪಡೆದಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು