LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಸ್ಥಳೀಯ ಕಲಾವಿದರು ಪಾಸ್ ಪರ‍್ಟ್ ಮಾಡಿಸಿಕೊಳ್ಳಿ: ಡಾ.ಬಿ.ಎಂ.ಗುರುನಾಥ್

ಬೆಂಗಳೂರು: ‘ಡಿ.ಕೆ ಶಿವಕುಮಾರ್ ರವರು ಯಾವುದೇ ಅಡಚಣೆಯಿಲ್ಲದೇ ಯಶಸ್ವಿಯಾಗಿ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರಬೇಕೆಂದು ಮೊದಲಿಗೆ ಪೂಜೆ ಮಾಡಿಸಿ ಸಂಕಲ್ಪ ಮಾಡಿದ್ದ ಡಿ.ಪಿ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್, ಡಿ.ಪಿ ಪ್ರೈವೇಟ್ ಲಿಮಿಟೆಡ್ ಮತ್ತು ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ನ ಮಾಲೀಕರು ಹಾಗೂ ಡಿ.ಪಿ ಕರುಣಾ ಆಸರೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಡಿ.ಪಿ ವೆಂಕಟೇಶ್ ರವರ ಪೂಜೆಯ ಶಕ್ತಿ ಫಲಿಸಿದ್ದು ಅವರ ಬಹುದಿನಗಳ ಆಸೆ ನೆರವೇರಿದ್ದು ಅವರಲ್ಲಿ ಸಂತೋಷ ಮನೆ ಮಾಡಿದೆ. ಡಿ.ಕೆ ಶಿವಕುಮಾರ್ ರವರು ಮುಖ್ಯಮಂತ್ರಿ ಪಟ್ಟಕ್ಕೇರಬೇಕೆಂದು ಮೊದಲು ಪೂಜೆ ಮಾಡಿಸಿದ್ದು ಡಿ.ಪಿ ವೆಂಕಟೇಶ್ ರವರು ಎಂಬುದು ವಿಶೇಷ. ನಂತರದ ದಿನಗಳಲ್ಲಿ ಇವರನ್ನು ನೋಡಿ ಉಳಿದ ಕಾರ್ಯಕರ್ತರು, ಅಭಿಮಾನಿಗಳು ಪೂಜೆ ಸಲ್ಲಿಸಿದ್ದರು.
ಕಳೆದ ವರ್ಷ ಡಿ.ಪಿ ವೆಂಕಟೇಶ್ ರವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಮೊದಲನೇ ಕಾರ್ತಿಕದಿಂದ ಹಿಡಿದು ಕೊನೇ ಕಾರ್ತಿಕ ಮಾಸದವರೆಗೂ ನಾಲ್ಕು ಕಾರ್ತಿಕ ಮಾಸ ಹಾಗೂ ನಾಲ್ಕು ರುದ್ರಾಭಿಷೇಕ ಮಾಡಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ವಿಶೇಷ ಪೂಜೆ ಸಲ್ಲಿಸಿದ್ದರು. ಡಿ.ಪಿ ವೆಂಕಟೇಶ್ ರವರ ನೇತೃತ್ವದಲ್ಲಿ ನಡೆದ ಈ ಪೂಜೆಯಲ್ಲಿ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಎಲ್ಲಾ ಅರ್ಚಕರು ವಿಶೇಷ ಪೂಜೆ ಮಾಡುವ ಮೂಲಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಸಂಕಲ್ಪ ಮಾಡಿದ್ದರು. ಹಾಗೆಯೇ ಡಿಕೆಶಿ ಸಿಎಂ ಆಗಬೇಕೆಂದು ದೇವರಿಗೆ ಪಾರ್ಥನೆ ಮಾಡಿ ಈಡುಗಾಯಿ ಒಡೆದು ದೇವರಿಗೆ ಪ್ರಾರ್ಥನೆ ಮಾಡಿದ್ದರು. ಇದೇ ವೇಳೆ ದೇವಸ್ಥಾನದ ಅರ್ಚಕರಿಗೆ ವಸ್ತ್ರದಾನ ಮಾಡುವ ಡಿಕೆ ಶಿವಕುಮಾರ್ ರವರು ಮುಖ್ಯಮಂತ್ರಿ ಪಟ್ಟಕ್ಕೇರಬೇಕು ಎಂದು ಅಂದೇ ಧೃಢ ಸಂಕಲ್ಪ ಮಾಡಿದ್ದರು. ಸತತ 21 ದಿನಗಳ ಕಾಲ ಮಲೆ ಮಹದೇಶ್ವರ ಸ್ವಾಮಿ ಸನ್ನಿಧಿಯಲ್ಲಿಯೇ ಇದ್ದುಕೊಂಡು ಕಠಿಣ ವ್ರತದ ಜೊತೆಗೆ ರುದ್ರಾಭಿಷೇಕ ಮಾಡಿಸುವ ಮೂಲಕ ಡಿಕೆ ಶಿವಕುಮಾರ್ ರವರು ಶತಾಯ ಗತಾಯ ಮುಖ್ಯಮಂತ್ರಿಯಾಗಲೇಬೇಕೆAದು ಪಣ ತೊಟ್ಟಿದ್ದರು. ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿ ಸ್ಥಾನದೊಂದಿಗೆ ಮಲೆಮಹದೇಶ್ವರ ದೇವಸ್ಥಾನಕ್ಕೆ ಭೇಟಿ ಮಾಡುವ ಅವಕಾಶವನ್ನು ಮಾದಪ್ಪ ಕರುಣಿಸಲೆಂದು ಡಿ ಪಿ ವೆಂಕಟೇಶ್ ರವರು ದೇವರಲ್ಲಿ ಹರಕೆ ಮಾಡಿಕೊಂಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಪಿ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ಮಾಲೀಕರು ಹಾಗೂ ಸಮಾಜ ಸೇವಕರಾದ ಡಿ.ಪಿ ವೆಂಕಟೇಶ್, ‘ಸಂಕಷ್ಟಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಬೆಳೆದ ಕರ್ನಾಟಕದ ಧೀರ ನಾಯಕ, ಮಾನ್ಯ ನೂತನ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಮಲೆ ಮಹದೇಶ್ವರ ಬೇಡಿದ್ದನ್ನು ಕರುಣಿಸುತ್ತಾನೆ ಎಂಬ ನಂಬಿಕೆ ನಮಗಿತ್ತು. ಈಗ ಆ ಸಂಕಲ್ಪ ಈಡೇರಿದೆ. ಮುಂದಿನ ದಿನಗಳಲ್ಲಿ ಡಿ ಕೆ ಶಿವಕುಮಾರ್ ರವರ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ವಿಘ್ನ ಬಾರದಂತೆ ದೇವರಿಗೆ ಹರಸಿಕೊಂಡಿದ್ದೇವೆ. ಅವರ ಅವಧಿಯಲ್ಲಿ ಕರ್ನಾಟಕ ರಾಜ್ಯವು ಇಡೀ ದೇಶದಲ್ಲಿಯೇ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರ ಶ್ರಮಕ್ಕೆ ತಕ್ಕ ಫಲ ದೊರೆತಿದ್ದು ನಮಗೆ ಅತೀವ ಸಂತೋಷವಾಗಿದೆ, ಎಂದು ತಿಳಿಸಿದರು.
‘ಕನಕಪುರದ ಬಂಡೆ’ ಎಂದೇ ಕರೆಯಲ್ಪಡುವ ಇವರು ಇತರರ ಜೀವನದಲ್ಲಿ ಯಶಸ್ಸು ಸಾಧಿಸಲು, ಉನ್ನತ ಸ್ಥಾನಕ್ಕೇರಲು ತಾವೇ ಮೆಟ್ಟಿಲಾಗಿ ನಿಂತವರು. ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಬೇರೆಯವರ ಬೆಳವಣಿಗೆಗೆ ಶ್ರಮಿಸಿದ ಡಿ.ಕೆ ಶಿವಕುಮಾರ್ ರವರು ಇಂದು ಶಿಲೆಯಾಗಿದ್ದಾರೆ. ಡಿ.ಕೆ. ಶಿವಕುಮಾರ್ ರವರ ದೃಢ ನಾಯಕತ್ವ, ಜನಪರ ಕಾಳಜಿ ಮತ್ತು ಅಭಿವೃದ್ಧಿಯ ದೂರದೃಷ್ಟಿ ರಾಜ್ಯವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಲಿ, ಬ್ರ್ಯಾಂಡ್ ಬೆಂಗಳೂರು ನಿರ್ಮಾಣದ ಅವರ ಕನಸು ನನಸಾಗಲಿ. ರೈತರ, ಬಡವರ ಮತ್ತು ಯುವಕರ ಧ್ವನಿಯಾಗಿ ಅವರು ಕೆಲಸ ಮಾಡುತ್ತಾರೆಂಬ ನಂಬಿಕೆ ನಮಗಿದೆ’, ಎಂದು ವಿಶ್ವಾಸ ವ್ಯಕ್ತಪಡಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು