LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮೈದಾನದಿಂದ ಮೊಬೈಲ್‌ಗೆ `ಇಕ್ರಿಕೆಟ್' ಗೇಮ್‌ಗೆ ದಿಗ್ಗಜರ ಬೆಂಬಲ

ಬೆಂಗಳೂರು : ಟ್ರಿಪಲ್ ಎ-ಕೇಂದ್ರಿತ ಗೇಮ್-ಟೆಕ್ ಸ್ಟುಡಿಯೊ - ಲೈಟ್ಫ್ಯೂರಿ ಗೇಮ್ಸಲ್ಲಿ (ಎಲ್‌ಎಫ್ಜಿ) ದೇಶಿ ಕ್ರಿಕೆಟ್ ಜಗತ್ತಿನ ದಿಗ್ಗಜರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಕ್ರಿಕೆಟ್ ಜಗತ್ತಿನ ಪ್ರಮುಖ ತಾರೆಯರಾಗಿರುವ ಎಂ.ಎಸ್ ಧೋನಿ, ಜಸ್ಪಿತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಅವರು ಶ್ರೇಯಸ್ ಅಯ್ಯರ್ , ರವೀಂದ್ರ ಜಡೇಜಾ, ಇಶಾನ್ ಕಿಶನ್, ತಿಲಕ್ ವರ್ಮಾ ಮತ್ತು ಸಾಯಿ ಸುದರ್ಶನ್ ಅವರ ಜೊತೆಗೂಡಿ ಹೂಡಿಕೆ ಮಾಡಿದ್ದಾರೆ ಎಂದು ಲೈಟ್ಫೂ÷್ಯರಿ ಗೇಮ್ಸ್ ಪ್ರಕಟಿಸಿದೆ.ಇಲ್ಲಿಯವರೆಗೆ, ಲೈಟ್ಫ್ಯೂರಿ ಗೇಮ್ಸ್, ಹಲವಾರು ಸುತ್ತುಗಳಲ್ಲಿ ಸುಮಾರು 20 ದಶಲಕ್ಷ ಡಾಲರ್ಗಳಷ್ಟು ಒಟ್ಟಾರೆ ಬಂಡವಾಳ ಸಂಗ್ರಹಿಸಿದೆ. ಬ್ಲೂಮ್ ವೆಂಚರ್ಸ್, ವಿ3 ವೆಂಚರ್ಸ್, ಎಂಐಎಕ್ಸ್ಐ, ಟೈಮ್ಸ್ ಇಂಟರ್ನೆಟ್ ಜೊತೆಗೆ ಈ ಕ್ರಿಕೆಟ್ ಖ್ಯಾತನಾಮರೆಲ್ಲ ಲೈಟ್ಫ್ಯೂರಿಗೇಮ್ಸ್ 11 ದಶಲಕ್ಷ ಡಾಲರ್ ಪ್ರಿ-ಸೀರೀಸ್ ಎ ಫಂಡ್ನಲ್ಲಿ ಹೂಡಿಕೆ ಮಾಡಿದ್ದಾರೆ. 100 ಸದಸ್ಯರ ಸ್ಟುಡಿಯೊ, ಪ್ರೀಮಿಯಂ ಹಾಗೂ ಜಾಗತಿಕವಾಗಿ ಸ್ಪರ್ಧಾತ್ಮಕ ಗೇಮ್ಗಳನ್ನು ರೂಪಿಸಲು ಪರಿಣತ ಹಾಗೂ ಸಮೃದ್ಧ ಸೃಜನಶೀಲ ಪ್ರತಿಭಾನ್ವಿತರನ್ನು ಮತ್ತು ಮುಂದುವರಿದ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ.
ಈ ಸಹಯೋಗದ ಬಗ್ಗೆ ಮಾತನಾಡಿರುವ ಎಂ.ಎಸ್. ಧೋನಿ ಅವರು, "ಕಳೆದ ಹಲವಾರು ವರ್ಷಗಳಿಂದ ನಾನು ಬಹಳಷ್ಟು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಿದ್ದೇನೆ. ಅವುಗಳಲ್ಲಿ ಯಾವುದಾದರೂ ಒಂದು ಮಹತ್ವದ ಸಂಗತಿ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಲೈಟ್ಫೂ÷್ಯರಿಯ ತಂಡವು ಇಕ್ರಿಕೆಟ್ ಗೇಮಿಂಗ್ ಬಗ್ಗೆ ನನಗೆ ವಿವರಗಳನ್ನು ತೋರಿಸಿದಾಗ, ಅವರು ಆ ಕೊರತೆಯನ್ನು ಕಡಿಮೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವುದು ನನ್ನ ಅನುಭವಕ್ಕೆ ಬಂದಿತು. ಜಾಗತಿಕ ಪ್ರೇಕ್ಷಕರಿಗಾಗಿ ಭಾರತದಲ್ಲಿ ಇಂತಹ ಗೇಮಿಂಗ್ ನಿರ್ಮಿಸುವ ದೊಡ್ಡ ಹೊಣೆಗಾರಿಕೆಯನ್ನು ಅವರು ಯಶಸ್ವಿಯಾಗಿ ನಿಭಾಯಿಸಲು ಮುಂದೆ ಬಂದಿದ್ದಾರೆ. ಗೇಮ್ನಲ್ಲಿ ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಕೊಡುಗೆ ನೀಡುವ ಉದ್ದೇಶಕ್ಕೆ ನಾನು ಈ ಸಂಸ್ಥೆ ಜೊತೆ ಕೈಜೋಡಿಸಿರುವೆ. ನಾನು ಗಮನಿಸಿದಂತೆ, ಅವರು ಉತ್ತಮ ಕೆಲಸ ಮಾಡಲಿದ್ದಾರೆ" ಎಂದು ಧೋನಿ ಅವರು ಹೇಳಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು