LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ರಾಜಸ್ಥಾನ ರಾಯಲ್ಸ್ಗೆ ಹ್ಯಾಟ್ರಿಕ್ ಜಯಭೇರಿ

15 ವರ್ಷದ ಈ ಬಾಲಕ ತಾನು ಸಾಮಾನ್ಯನಲ್ಲ, ತನ್ನನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ಕ್ರಿಕೆಟ್ ವಿಶ್ವದ ಮುಂದೆ ಮತ್ತೊಮ್ಮೆ ಸಾರಿದ್ದಾನೆ. ಯಾಕೆಂದರೆ ವೈಭವ್ ಸೂರ್ಯವಂಶಿ ಎಂಬ ಹುಡುಗ ಈ ಬಾರಿ ಬೆವರಿಳಿಸಿದ್ದು ಪ್ರಸ್ತುತ ವಿಶ್ವದಲ್ಲಿಯೇ ಅತ್ಯುತ್ತಮ ವೇಗಿ ಎಂದೇ ಹೆಸರುವಾಸಿಯಾಗಿರುವ ಜಸ್ಪಿತ್ ಬುಮ್ರಾಗೆ! ತಾನೆದುರಿಸಿದ ಬುಮ್ರಾ ಅವರ ಮೊದಲ ಎಸತವನ್ನೇ ಸಿಕ್ಸರ್ ಗಟ್ಟಿದ ವೈಭವ್ ಕೇವಲ 14 ಎಸೆತಗಳಲ್ಲಿ ಹೊಡೆದದ್ದು 39 ರನ್! ಹೊಡೆದದ್ದು 5 ಸಿಕ್ಸರ್, 1 ಬೌಂಡರಿ. ಅದರಲ್ಲಿ 2 ಸಿಕ್ಸರ್ ಬುಮ್ರಾಗೆ! ಅವರು ಹಾಕಿಕೊಟ್ಟ ಬುನಾದಿಯ ಮೇಲೆ ರನ್ ಹೊಳೆಯನ್ನೇ ಹರಿಸಿದ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 27 ರನ್ ಗಳಿಂದ ಪರಾಭವಗೊಳಿಸಿತು. ಈ ಮೂಲಕ ಈ ಸೀಸನ್ ನಲ್ಲಿ ಹ್ಯಾಟ್ರಿಕ್ ಜಯ ಸಂಪಾದಿಸಿತು. ಜೊತೆಗ ಆಡಿರುವ 3 ಪಂದ್ಯಗಳಿAದ 6 ಅಂಕ ಕಲೆಹಾಕಿ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯ ಮಳೆಯಿಂದ ಅಡಚಣೆಗೊಳಗಾದ ಕಾರಣ 11 ಓವರ್ ಗಳಿಗೆ ಇಳಿಸಲ್ಪಟ್ಟಿತ್ತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 3 ವಿಕೆಟ್ ಕಳೆದುಕೊಂಡು 150 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆಂಬತ್ತಿ ಹೊರಟ ಮುಂಬೈ ನಿಗದಿತ ಓವರ್ ಗಳು ಮುಗಿಯುವುದರೊಳಗಾಗಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು.ವೈಭವ್- ಬುಮ್ರಾ ಮುಖಾಮುಖಿ ಇದಾದ ಬಳಿಕ 2ನೇ ಓವರ್ ನಲ್ಲಿ ವೈಭವ್ ಸೂರ್ಯವಂಶಿ ಮತ್ತು ಜಸ್ಪಿತ್ ಬುಮ್ರಾ ಮುಖಾಮುಖಿ ಆದರು. ಈ ಪಂದ್ಯಕ್ಕೂ ಮುನ್ನ ಇದು ವೈಭವ್ ಗಿs ಬುಮ್ರಾ ಅವರ ನಡುವಿನ ಜಟಾಪಟಿ ಎಂದೇ ಬಣ್ಣಿಸಲಾಗಿತ್ತು. ಬುಮ್ರಾ ಅವರು ಮಿಡಲ್ ಮತ್ತು ಲೆಗ್ ಸ್ಲಾಟ್ ನಲ್ಲಿ ಹಾಕಿದ ಚೆಂಡನ್ನು ವೈಭವ್ ಲಾಂಗ್ ಆನ್ ಕಡೆಗೆ ಸಿಕ್ಸರ್ ಗೆತ್ತಿದರು. ಈ ವೇಳೆ ಬುಮ್ರಾ ಮುಖದಲ್ಲಿ ಕಿರು ನಗೆ. 4ನೇ ಎಸೆತವನ್ನು ಬುಮ್ರಾ ಅವರು ಆಫ್ ಸ್ಟಂಪಿನ ಹೊರಗೆಸೆದಾಗ ವಿಚಲಿತರಾಗದ ವೈಭವ್ ಅದನ್ನು ಡೀಪ್ ಸ್ಕೇರ್ ಲೆಗ್ ಕಡೆಗೆ ಭರ್ಜರಿ ಸಿಕ್ಸರ್ ಎತ್ತಿದರು.ನಾಯಕ ರಿಯಾನ್ ಪರಾಗ್ ಅವರು 10 ಎಸೆತದಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 20 ರನ್ ಗಳಿಸಿದರು. ಅಜೇಯ ಅರ್ಧಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಅವರು ಅರ್ಹರಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು