LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಹೋಮಿಯೋಪತಿ ದಿನ....

ಏಪ್ರಿಲ್ 10ನೇ ತಾರೀಖು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ಸಧ್ಯಕ್ಕೆ ಪ್ರಚಲಿತವಾಗಿರುವ ಅಲೋಪತಿಗೆ ಪರ್ಯಾಯವಾಗಿ ಸನಾತನವಾದ ಆಯುರ್ವೇದ, ದೇಸಿಯ ಯುನಾನಿಗಳಂತೆ ಹೋಮಿಯೋಪತಿ ಕೂಡ ಒಂದು ಪರ್ಯಾಯ ವೈದ್ಯಕೀಯ ಪದ್ಧತಿಯಾಗಿದೆ.

ಅಲೋಪತಿಯ ಚಿಕಿತ್ಸೆಗಳಲ್ಲಿ ಒಂದು ಚಿಕಿತ್ಸೆ ಪಡೆದರೆ ಮತ್ತೊಂದು ಸಮಸ್ಯೆ ಸೈಡ್ ಎಫೆಕ್ಟ್ ಆಗುವುದು ಸರ್ವೇ ಸಾಮಾನ್ಯ ಆದರೆ ಹೋಮಿಯೋಪತಿ ಪದ್ಧತಿಗೆ ಸೈಡ್ ಎಫಕ್ಟ್ ಪ್ರಮಾಣ ಬಹಳ ಕಡಿಮೆ ಹೀಗಾಗಿ ಉತ್ತಮ ಫಲಿತಾಂಶ ದೀರ್ಘಕಾಲದ ಚಿಕಿತ್ಸೆ ಆದರೂ ಶಾಶ್ವತ ಪರಿಹಾರಕ್ಕಕಾಗಿ ಆಯುರ್ವೇದ ಹೋಮಿಯೋಪತಿ ಔಷಧಗಳನ್ನು ಸೇವಿಸುವುದು ಉತ್ತಮ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.

ಹೋಮಿಯೋಪತಿಯ ಆರಂಭ ಜರ್ಮಿನಿಯ ವೈದ್ಯ ಸ್ಯಾಮುಯಲ್ ಹಹೇನ್ಮನ್‍ರವರಿಂದ 1776ರಲ್ಲಿ ಆರಂಭವಾಯಿತು. ವೈದ್ಯಕೀಯವಾಗಿ ಸೈಡ್ ಎಫೆಕ್ಟ್ ಕಡಿಮೆ ಇರುವ ಈ ಔಷಧಿಗಳು ಬಿಳಿಯ ಗುಳಿಗೆಯ ರೂಪದಲ್ಲಿ ಇರುವುದೇ ಹೆಚ್ಚು ಇದರಲ್ಲಿ ಬೇರೆ ಬೇರೆ ರಸಾಯನಿಕಗಳ ಪ್ರಯೋಗ ಅದರೂ ಅದು ಮನುಷ್ಯ ದೇಹಕ್ಕೆ ಹೆಚ್ಚು ಹಾನಿ ಮಾಡದಂತಹ ರಸಾಯನಿಕಗಳಾಗಿರುತ್ತವೆ.

ಹೋಮಿಯೋಪತಿ ಔಷಧಿಗಳು ಅತೀ ಹೆಚ್ಚು ಗಾಢವಾಧ ರಸಾಯನಿಕಗಳನ್ನು ಒಳಗೊಳ್ಳದೇ ಬಹಳ ಕಡಿಮೆ ಪ್ರಮಾಣದ ರಸಾಯನಿಕಗಳ ಪ್ರಯೋಗ ಮಾಡುವುದರಿಂದ ಅದರಿಂದ ಉಂಟಾಗುವ ಹಾನಿ ಅಥವಾ ಸೈಡ್ ಎಫೆಕ್ಟ್ ಕೂಡ ಕಡಿಮೆಯೇ ಆಗಿರುತ್ತದೆ. 19ನೇ ಶತಮಾನದಲ್ಲಿ ಹೋಮಿಯೋಪತಿ ಪದ್ಧತಿಯು ಹೆಚ್ಚು ಪ್ರಚಾರ ದೊರೆತು ಪ್ರಚಲಿತವಾಯಿತು.

ಹೋಮಿಯೋಪತಿ ದಿನವು ಮೊದಲ ಹೋಮಿಯೋಪತಿಯ ವೈದ್ಯ ಜರ್ಮನಿಯ ಕ್ರಿಶ್ಚಿಯನ್ ಫೆಡ್‍ರಿಕ್ ಸ್ಯಾಮುಯಲ್ ಹಹೆನ್ಮನ್ ಅವರ ಜನ್ಮದಿನವಾಗಿದ್ದು ಜಗತ್ತಿಗೆ ಹೋಮಿಯೋಪತಿಯ ಕೊಡುಗೆ ನೀಡಿದ ಅವರ ಸ್ಮರಣಾರ್ಥವಾಗಿ ಹೋಮಿಯೋಪತಿ ದಿನವನ್ನು ವಿಶ್ವದಲ್ಲಿ ಆಚರಿಸಲಾಗುತ್ತದೆ.ಭಾರತಕ್ಕೆ ಜರ್ಮನಿ ಮಿಷನರಿಗಳ ಮೂಲಕ 1839ರ ಹೊತ್ತಿಗೆ ಹೋಮಿಯೋಪತಿ ಪದ್ಧತಿಯ ಪ್ರವೇಶವು ಡಾ. ಜಾನ್ ಹೋಯಿನ್‍ಬರ್ಗರ್ ಅವರ ಮೂಲಕ ಆಯಿತು ಮಹಾರಾಜ ರಣಜಿತ್ ಸಿಂಗರ ಪಾರ್ಶ್ವವಾಯುವಿನ ಚಿಕಿತ್ಸೆಗೆ ಅವರನ್ನು ಕರೆಸಲಾಗಿತ್ತು ಭಾರತದಲ್ಲಿ ಹೋಮಿಯೋಪತಿಯ ಜನಕ ಎಂದು ಗುರುತಿಸಲ್ಪಡುವವರು ಬಾಬು ರಾಜೇಂದ್ರಲಾಲ ದತ್ತರವರು ಇವರಿಂದ ಭಾರತದಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯು ಪ್ರಸಿದ್ಧವಾಯಿತು ಆದ್ದರಿಂದ ಇವರನ್ನು ಭಾರತದ ಹೋಮಿಯೋಪತಿ ವೈದ್ಯದ ಜನಕ ಎನ್ನುತ್ತಾರೆ.

ಭಾರತದಲ್ಲಿ ಆಯುಷ್ ಮಂತ್ರಾಲಯದಲ್ಲಿ ದೇಶೀಯ ವೈದ್ಯಕೀಯ ಪದ್ಧತಿಗೆ ಮಾನ್ಯತೆ ಕೊಟ್ಟಿದೆ. ಕೇಂದ್ರ ಸರ್ಕಾರವು ಜನರ ಆರೋಗ್ಯಕ್ಕೆ ಜನರು ಚಿಕಿತ್ಸೆ ಪಡೆಯುವ ಎಲ್ಲ ಪದ್ಧತಿಗಳಿಗೂ ಮಾನ್ಯತೆ ನೀಡಿ ಅವುಗಳ ಪ್ರಚಾರ ಪ್ರಸಾರ ಮಾಡುತ್ತದೆ. ಅದರಂತೆ ಪ್ರತಿ ವರ್ಷವೂ ವಿಶೇಷವಾದ ಥೀಮ್ ಮತ್ತು ಘೋಷವಾಕ್ಯದೊಂದಿಗೆ ವಿಶ್ವ ಹೊಮಿಯೋಪತಿ ದಿನದ ಆಚರಣೆಯನ್ನು ಮಾಡುತ್ತಾರೆ. 2024ರ ಹೋಮಿಯೋಪತಿ ದಿನದ ಥೀಮ್ ಮತ್ತು ಘೋಷವಾಕ್ಯ “ಹೋಮಿಯೋ ಪರಿವಾರ : ಒಂದು ಆರೋಗ್ಯ ; ಒಂದೇ ಕುಟುಂಬ” ಎಂಬುದಾಗಿದೆ.

ಈ ಥೀಮ್‍ನ ಕುರಿತಾಗಿ ವಿಚಾರವಿನಿಮಯ ಮಾಡಿಕೊಳ್ಳಲು ಕೇಂದ್ರಿಯ ಸಂಶೋಧನಾ ಸಮಿತಿಯು ಹೋಮಿಯೋಪತಿಯಲ್ಲಿ ಸಂಶೋಧನೆಯಲ್ಲಿ  ಪ್ರೋತ್ಸಾಹ ನೀಡಲು ಏಪ್ರಿಲ್ 10 ಮತ್ತು ಹನ್ನೊಂದರಂದು ವೆಬ್‍ಕಾಸ್ಟ್ ಆಯೋಜಿಸಿದ್ದಾರೆ.ಈ ದಿನಾಚರಣೆಯ ಮಹತ್ವ ಹೋಮಿಯೋಪತಿ ಪದ್ಧತಿಯ ಗುಣ ವಿಶೇಷತೆಗಳನ್ನು ತಿಳಿಸಿ ಬಹಳಷ್ಟು ಜನರು ಅದನ್ನು ಉಪಯೋಗಿಸಿ ಲಾಭ ಪಡೆಯಲು ಪ್ರಚಾರ ಮಾಡುವುದಾಗಿದೆ. ಹೋಮಿಯೋಪತಿಯ ಔಷಧೀ ಸೇವಿಸಿ ದೇಹಕ್ಕೆ ಹೆಚ್ಚು ಸೈಡ್ ಎಫೇಕ್ಟ್ ಇಲ್ಲದೇ ಉತ್ತಮ ಆರೋಗ್ಯ ಪಡೆಯಿರಿ ಎಂಬುದು ಹೋಮಿಯೋಪತಿ ದಿನದ ಆಚರಣೆಯ ಉದ್ದೇಶ ಮತ್ತು ಗುರಿಯಾಗಿದೆ.ಅತ್ಯಂತ ತೀವ್ರತೆಯ ಚಿಕಿತ್ಸೆಯ ಸಮಯದಲ್ಲಿ ಸಂಪೂರ್ಣ ಜೀವ ರಕ್ಷಕವಲ್ಲದೇ ಹೋದರೂ ಕೂಡ ದೀರ್ಘಕಾಲಿಕ ಚಿಕಿತ್ಸೆ ಪಡೆದು ಗುಣವಂತರಾಗುವ ಕಾಯಿಲೆಗಳಿಗೆ ಹೋಮಿಯೋಪತಿ ವೈದ್ಯ ಪದ್ಧತಿ ಸೂಕ್ತವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು