LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"I Am ರೂಬಿ" ಚಿತ್ರದ ಶೀರ್ಷಿಕೆಗೆ ನಿಶಾನೆ

ವಸಿಷ್ಠ ಸಿಂಹ ನಾಯಕರಾಗಿ ನಟಿಸಿದ್ದ " Love ಲಿ" ಚಿತ್ರ ನಿರ್ದೇಶಿಸಿದ್ದ ಚೇತನ್ ಕೇಶವ್ ನಿರ್ದೇಶನದ ಎರಡನೇ ಸಿನಿಮಾದ ಶೀರ್ಷಿಕೆ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಅನಾವರಣವಾಗಿದೆ. ಆಶ್ರಯ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ||ಶಿವೇಗೌಡ ಸಿ.ವೈ ಹಾಗೂ "ಚಿಂಗಾರಿ" ಬಿ ಮಹದೇವ್ ಅವರು ನಿರ್ಮಿಸುತ್ತಿರುವ ಮತ್ತು ಆಕಾಶ್ ಎಂಬ ಮೈಸೂರಿನ ನೂತನ ಪ್ರತಿಭೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ "I Am ರೂಬಿ" ಎಂದು ಹೆಸರಿಡಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಈ ನೂತನ ಚಿತ್ರದ ಬಗ್ಗೆ ಮಾಹಿತಿ ನೀಡಿದೆ.

ನಿರ್ದೇಶಕ ಚೇತನ್ ಕೇಶವ ಅವರೆ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಅಶ್ವಿನ್ ಕೆನಡಿ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನ, ಪ್ರತಾಪ್  ಆರ್ ಮೆಂಡನ್ ಕಲಾ ನಿರ್ದೇಶನ ಹಾಗೂ ಡಾ|ಕೆ.ರವಿವರ್ಮ - ದಿಲೀಪ್ ಎಂ ರಾಜ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಂಗಾಯಣ ಸೇರಿದಂತೆ ಅನೇಕ ಕಡೆ ನಾಟಕಗಳಲ್ಲಿ ಅಭಿನಯಿಸಿರುವ
ಹಾಗೂ ಚಿತ್ರ ನಾಯಕನಾಗಲು ಬೇಕಾದ ಪೂರ್ವ ತಯಾರಿಯನ್ನು ಈಗಾಗಲೇ ಮಾಡಿಕೊಂಡಿರುವ ಮೈಸೂರು ಮೂಲದ ಆಕಾಶ್ ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಲಕ್ಷ್ಮೀ ಬಾರಮ್ಮ" ಧಾರಾವಾಹಿ ಖ್ಯಾತಿಯ ಭೂಮಿಕ ರಮೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿರುತ್ತದೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "I Am ರೂಬಿ" ಚಿತ್ರಕ್ಕೆ ಡಿಸೆಂಬರ್ ನಿಂದ ಚಿತ್ರೀಕರಣ ಶುರುವಾಗಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST