LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

`ಆರ್.ಸಿ.ಬಿ ವಿರುದ್ಧ ಹೀನಾಯ ಸೋಲು : ಏನಾಯಿತೋ ನನಗೆ ಗೊತ್ತಿಲ್ಲ'

ಹೊಸದಿಲ್ಲಿ: ಕಳೆದ ಶನಿವಾರ (ಏಪ್ರಿಲ್ 25) ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ 264 ರನ್ನುಗಳ ಬೃಹತ್ ಮೊತ್ತವನ್ನು ಪೇರಿಸಿತ್ತು, ಆದರೆ ಆ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಲು, ಡೆಲ್ಲಿ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಸೋಮವಾರದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕೇವಲ 75 ರನ್ನಿಗೆ ಡೆಲ್ಲಿ ಆಲೌಟ್ ಆಯಿತು. ಆರ್‌ಸಿಬಿ, ಬೌಲರ್?ಗಳ ಬೌಲಿಂಗ್?ಗೆ ಡೆಲ್ಲಿ ಬ್ಯಾಟರ್ ಬಳಿ ಉತ್ತರವಿರಲಿಲ್ಲ.
ಎರಡು ದಿನಗಳ ಅಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಎರಡು ಸೋಲು, ಅದೂ ಅವಮಾನಕಾರಿ ಸೋಲು. ಒಂದು, ಬೃಹತ್ ಮೊತ್ತವನ್ನು ಪೇರಿಸಿದರೂ, ಮ್ಯಾಚ್ ಗೆಲ್ಲಲಾಗಲಿಲ್ಲ. ಇನ್ನೊಂದು ಕೇವಲ 75ರನ್ನಿಗೆ ಆಲೌಟ್ ಆಗುವ ಮೂಲಕ, ಕೆಟ್ಟ ದಾಖಲೆಯ ಮೂಲಕ ಸೋಲು ಅನುಭವಿಸುವಂತಾಯಿತು. ಈ ಎರಡು ಸೋಲಿನ ಬಗ್ಗೆ ನಾಯಕ ಅಕ್ಷರ್ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸತತ ಸೋಲಿನಿಂದ ನಾಯಕ ಅಕ್ಷರ್ ಪಟೇಲ್ ತೀವ್ರ ಗೊಂದಲಕ್ಕೆ ಒಳಗಾದಂತೆ ಕಾಣುತ್ತಿದ್ದಾರೆ. ನನಗೂ ಏನಾಯಿತು ಎಂದು ತಿಳಿದಿಲ್ಲ. ಅದಕ್ಕಾಗಿಯೇ, ನಮ್ಮ ತಂಡದ ಬಳಿ ಯಾವಾಗಲೂ ಹೇಳುತ್ತಿರುತ್ತೇನೆ, ಕ್ರಿಕೆಟ್‌ನಲ್ಲಿ ಯಾವಾಗಲೂ ಜಾಗರೂ
ಕರಾಗಿರಬೇಕು ಎಂದು. ಹಿಂದಿನ ಎರಡು ಸೋಲುಗಳನ್ನು ಮರೆತು, ಟೂರ್ನಮೆಂಟ್‌ನ ಮುಂದಿನ ಪಂದ್ಯಗಳನ್ನು ಆಡಬೇಕಿದೆ ಎಂದು ಅಕ್ಷರ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ದದ ಒಂದು ರನ್ ಸೋಲಿನ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ರನ್ ಓಡಲು ನಿರಾಕರಿಸಿದ್ದು ಡಿಸಿ ತಂಡದ ಮೇಲೆ ಪ್ರಭಾವವನ್ನು ಬೀರಿತ್ತು. ಅದೇ ರೀತಿ, ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಕರುಣ್ ನಾಯರ್, ಸುಲಭವಾದ ಕ್ಯಾಚ್ ಅನ್ನು ಹಿಡಿದಿದ್ದರೆ ಪಂದ್ಯದ ಗತಿ ಬದಲಾಗುತ್ತಿತ್ತೋ ಏನೋ? ಕ್ರಿಕೆಟ್‌ನಲ್ಲಿ ಒಂದು ವೇಳೆ, ಆದರೆ ಎಂಬ ಮಾತುಗಳಿಗೆ ಜಾಗವಿಲ್ಲ. ನಾವು ಸಕಾರಾತ್ಮಕವಾಗಿ ಇರಬೇಕು ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.
ಭುವಿ (ಭುವನೇಶ್ವರ್ ಕುಮಾರ್) ಅವರ ಎರಡನೇ ಬಾಲ್‌ನಲ್ಲೇ ಸಾಹಿಲ್ ಪರಕ್ ಕ್ಲೀನ್ ಬೌಲ್ಡ್ ಆದರು. ಆವೇಳೆ ಹೆಚ್ಚಿನ ಸ್ವಿಂಗ್ ಇತ್ತು ಎನ್ನುವುದನ್ನು ಅಕ್ಷರ್ ಪಟೇಲ್ ಒಪ್ಪಿಕೊಳ್ಳಲಿಲ್ಲ. "ನನಗೇನು ಅಚ್ಚರಿಯಾಗಲಿಲ್ಲ, ಅವರು ವಿಶ್ವದರ್ಜೆಯ ಬೌಲರ್‌ಗಳು. ಎಲ್ಲಾ ಮೈದಾನಗಳಲ್ಲೂ ಚೆಂಡನ್ನು ಸ್ವಿಂಗ್ ಮಾಡುತ್ತಾರೆ. ಆದರೆ, ನಮ್ಮ ಆರಂಭಿಕರು ಅಥವಾ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅವರನ್ನು ಎದುರಿಸಿ ಆಡಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು" ಎಂದು ಅಕ್ಷರ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ. ಕೆಎಲ್ ರಾಹುಲ್ ಮತ್ತು ನಿತೀಶ್ ರಾಣಾ, ಶಾರ್ಟ್ ಬಾಲ್ ಮೂಲಕ ಔಟಾದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು