LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಒಲಿಂಪಿಕ್ಸ್: ಬಾಕ್ಸಿಂಗ್ ಸ್ವರ್ಣ ಗೆದ್ದವರಿಗೆ ನಗದು ಬಹುಮಾನ ಘೋಷಿಸಿದ ಐಬಿಎ

ಜಿನೇವಾ: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಚಿನ್ನ ಗೆಲ್ಲುವ ಪ್ರತಿಯೊಬ್ಬ ಬಾಕ್ಸಿಂಗ್ ಪಟುವಿಗೆ 41.68 ಲಕ್ಷ ($50,000) ನಗದು ಬಹುಮಾನ ನೀಡುವುದಾಗಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಪ್ರಕಟಿಸಿದೆ. ವಿಶೇಷ ಎಂದರೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಬಾಕ್ಸಿಂಗ್ ಸಂಸ್ಥೆಯನ್ನು ನಿರ್ಬಂಧಿಸಿದೆ.

ನಗದು ಬಹುಮಾನದ ಭರವಸೆಯು, ಒಲಿಂಪಿಕ್ ಸಂಸ್ಥೆಯ ಜೊತೆ ಇನ್ನಷ್ಟು ಸಂಘರ್ಷಕ್ಕೆ ದಾರಿಮಾಡಿಕೊಡಲಿದೆ. ಒಟ್ಟು 13 ತೂಕ ವಿಭಾಗಗಳಲ್ಲಿ ಎಂಟರ ಘಟ್ಟ ತಲುಪುವ ಬಾಕ್ಸರ್‍ಗಳಿಗೆ ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ಸುಮಾರು 8.33 ಲಕ್ಷ ನೀಡುವುದಾಗಿಯೂ ಐಬಿಎ ಪ್ರಕಟಿಸಿದೆ. ಅವರ ಕೋಚ್‍ಗಳು, ರಾಷ್ಟ್ರೀಯ ತಂಡಗಳಿಗೂ ಬಹುಮಾನ ಘೋಷಿಸಿದೆ.

ಕೋಚ್, ರಾಷ್ಟ್ರೀಯ ತಂಡಗಳಿಗೆ 10 ಲಕ್ಷ ನೀಡುವುದಾಗಿಯೂ ಪ್ರಕಟಿಸಿದೆ. ಕ್ರೀಡಾ ಸಂಸ್ಥೆಗಳು ನೀಡುವ ಬಹುಮಾನ ಹಣಕ್ಕೂ ಐಒಸಿ ಸಮ್ಮತಿ ನೀಡಿಲ್ಲ. ಈ ಹಿಂದೆ ಏಪ್ರಿಲ್‍ನಲ್ಲಿ, ವಿಶ್ವ ಅಥ್ಲೆಟಿಕ್ಸ್ ಪ್ಯಾರಿಸ್ ಕ್ರೀಡೆಗಳಲ್ಲಿ ಚಿನ್ನ ಗೆಲ್ಲುವ 48 ಅಥ್ಲೀಟುಗಳಿಗೆ ತಲಾ 41 ಲಕ್ಷ ನೀಡುವುದಾಗಿ ಪ್ರಕಟಿಸಿತ್ತು.ಬಹುಮಾನ ಹಣದ ಮೂಲ ಸ್ಪಷ್ಟವಾಗಿಲ್ಲ. ಆದರೆ ಐಬಿಎದ ರಷ್ಯಾ ಅಧ್ಯಕ್ಷ ಉಮರ್ ಕ್ರೆಮ್ಲೆವ್ ಅವರಿಗೆ ದೇಶದ ಅತಿ ದೊಡ್ಡ ಇಂಧನ ಸಂಸ್ಥೆ ಗ್ಯಾಝ್‍ ಪ್ರೊಮ್ ಬೆಂಬಲವಿದೆ. 2023ರ ವಿಶ್ವ ಚಾಂಪಿಯನ್‍ಷಿಪ್‍ನ ಚಿನ್ನದ ಪದಕ ಗೆದ್ದವರಿಗೆ .166 ಕೋಟಿ ಬಹುಮಾನ ನೀಡುವುದಾಗಿ ಐಬಿಎ ಈ ಮೊದಲೇ ಘೋಷಿಸಿದೆ.

ಮುಂದೆ ಅದನ್ನು ಹೆಚ್ಚಿಸುವುದಾಗಿಯೂ ಹೇಳಿದೆ. ಲಾಸ್ ಏಂಜಲಿಸ್‍ನಲ್ಲಿ (2028) ಬೆಳ್ಳಿ, ಕಂಚಿನ ಪದಕ ಗೆದ್ದವರಿಗೂ ಇನಾಮು ನೀಡುವುದಾಗಿ ತಿಳಿಸಿತ್ತು.
ಹಣಕಾಸು ವಿಷಯದಲ್ಲಿ ಪಾರದರ್ಶಕತೆ ಕಾಪಾಡದ ಕಾರಣಕ್ಕೆ ಐಒಸಿ, ಬಾಕ್ಸಿಂಗ್ ಸಂಸ್ಥೆಯನ್ನು ನಿರ್ಬಂಧಿಸಿದೆ. 2020ರ ಟೋಕಿಯೊ ಒಲಿಂಪಿಕ್ಸ್ ಬಾಕ್ಸಿಂಗ್ ಸ್ಪರ್ಧೆಗಳನ್ನೂ, ಐಬಿಎ ನೆರವಿಲ್ಲದೇ ಐಒಸಿಯೇ ಸಂಘಟಿಸಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು