LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಅಭಿಮಾನ ಫೌಂಡೇಷನ್ ಉದ್ಘಾಟನೆ

ಯಲಹಂಕ: ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಸಮಾಜವೂ ಕಾರಣವಾಗುತ್ತದೆ. ಅವನು ಬೆಳೆಯುವ ಪರಿಸರ ಜನ ಸಂಪರ್ಕ ಚಟುವಟಿಕೆಗಳು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಜನಪರ ಜನಸ್ನೇಹಿ ಸಮಾಜ ನಿರ್ಮಾಣದ ಧ್ಯೇಯವಿರುವ ಹಾಗೂ ಯುವ ಪ್ರತಿಭೆ ಎ.ನಿಶ್ಚಯ್ ಕುಮಾರ್ ಹಾಗೂ ಸಮಾನ ಮನಸ್ಕರು ಒಡಗೂಡಿ ಅಭಿಮಾನ ಫೌಂಡೇಷನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಬೇಕೆಂಬ ಬಹು ದಿನಗಳ ಕನಸು.

ದಿನಾಂಕ 26.05.24 ರಂದು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆಯಾಗಿತ್ತು. ಶ್ರೀಮತಿ ವಿದ್ಯಾ.ಕೆ ರವರು ಪ್ರಾರ್ಥನೆ ಗೀತೆ ಹಾಡಿದರು ಹಾಗೂ ಶ್ರೀಮತಿ.ಶೋಭ .ಎಂ.ಆರ್ ರವರು ಎಲ್ಲರನ್ನು ಸ್ವಾಗತಿಸಿದರು. ಸಂಸ್ಥೆಯ ಆಯೋಜಕರಾದ ಎ.ನಿಶ್ಚಯ್ ಕುಮಾರ್ ಪ್ರಾಸ್ತಾವನಾ ನುಡಿಗಳನ್ನಾಡಿ ನಿಮ್ಮೆಲ್ಲರ ಅಭಿಮಾನ ಆಶೀರ್ವಾದ ಸದಾ ಇರಲೆಂದು ತಿಳಿಸಿದರು.

ಈ ಸಂಸ್ಥೆಯ ಉದ್ಘಾಟನೆಯನ್ನು ಕಲ್ಲೂರಿನ ಶ್ರೀ ಗುರು ರುದ್ರಮುನಿ ಸ್ವಾಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ತಕ್ಷರಾದ  ಶ್ರೀ.ಡಿ.ವೆಂಕಟರಮಣ ಯ್ಯನವರು ಸಸಿಗೆ ನೀರೆರುಯುವ ಮೂಲಕ ಚಾಲನೆ ನೀಡಿದರು ಹಾಗೂ ಈ ಸಸಿ ಬೃಹದಾಕಾರವಾಗಿ ಬೆಳೆದು ಸಮೃದ್ಧಿ ಕಾಣಲೆಂದು ಆಶಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಮಡ್ಡಿಕೆರೆ ಗೋಪಾಲ್, ಸಿರಿಗನ್ನಡ ವೇದಿಕೆಯ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಶ್ರೀ.ಉಮೇಶ್.ಸಿ.ಎನ್, ಜಾಗೃತಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ.ನಾಗೇಶ್.ಬಿ, ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ.ಎ.ಸಿ.ಮಂಜುನಾಥ್ ಹಾಗೂ ಜನ ಸಿರಿ ಫೌಂಡೇಷನ್ ನ ಶ್ರೀ.ನಾಗಲೇಖ ರವರುಗಳು ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಉಮಾಶಂಕರ್ .ಎಂ.ಪಿ ರವರು ವಹಿಸಿದ್ದರು.ಈ ಸಂಸ್ಥೆಯು ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿ ಕವಯತ್ರಿಯರನ್ನು ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಲಯನ್ ಡಾ.ಭ್ರಮರಾ ಶಿವಶಂಕರ್ ಅಧ್ಯಕ್ಷತೆಯಲ್ಲಿ ಶ್ರೀಮತಿ ಲಲಿತಾ ಆಚಾರ್, ಭಾರತಿ ಉಮೇಶ್, ರಾಧಾಮಣಿ.ಎಂ, ವಿಜಯಲಕ್ಷ್ಮಿ ದೊಡ್ಡಮನಿ, ಸಾವಿತ್ರಮ್ಮ ಓಂಕಾರ್ ಪದ್ಮಾಮೂರ್ತಿ ,ಸುಜಾತ ರವೀಶ್ ರವರುಗಳು ಉಪಸ್ಥಿತರಿದ್ದು ವಂದನಾರ್ಪಣೆಯನ್ನು ಶ್ರೀಮತಿ ದಿವ್ಯ ಚೇತನ್ ಮಾಡಿದರು.

ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ನಡೆದ ಈ ಕಾರ್ಯಕ್ರಮ ಫ್ಯಾಷನ್ ಶೋ ದಿಂದ ಮತ್ತಷ್ಟು ಮೆರುಗು ತಂದಿತ್ತು.ಜನಪದ ಗೀತಗಾಯನ,ಚಿತ್ರಕಲಾ ಪ್ರದರ್ಶನ ಕೂಡ ಆಯೋಜನೆಯಾಗಿತ್ತು ಈ ಸಂಸ್ಥೆ ಗೆ ಶುಭವಾಗಲಿ, ಎಲ್ಲರಿಗೂ ಇದು ಮಾದರಿಯಾಗಲಿ ಎಂದು ಶುಭ ಹಾರೈಸೋಣ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು