LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ಶ್ರೀಮತಿ ಕಮಲಾಕ್ಷಮ್ಮ ಯುವರತ್ನ ಗೌತಮ್ ರಂಗ ಮಂದಿರ ಉದ್ಘಾಟನೆ

ಕೋಲಾರ: ಕೋಲಾರ ತಾಲ್ಲೂಕು ಬೆಣ್ಣಂಗೂರು ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಪದಟ್ಟಿ ವೆಂಕಟರಾಮಪ್ಪ ಮತ್ತು ರಾಮಕ್ಕ ಅವರ ಕುಟುಂಬಸ್ಥರು ಅಗಲಿದ ಅವರ ಕುಟುಂಬದ ತಾಯಿ ಮತ್ತು ಮಗನ ಹೆಸರಿನಲ್ಲಿ ಸರ್ಕಾರಿ ಶಾಲೆಗೆ “ಶ್ರೀಮತಿ ಕಮಲಾಕ್ಷಮ್ಮ ಯುವರತ್ನ ಗೌತಮ್ ರಂಗ ಮಂದಿರ” ವನ್ನು ನಿರ್ಮಾಣ ಮಾಡಿಕೊಡುವ ಮೂಲಕ ಅವರ ಹೆಸರನ್ನು ಮತ್ತು ನೆನಪನ್ನು ಜೀವಂತ ಗೊಳಿಸುವ ಸಾರ್ಥಕ ಕೆಲಸವನ್ನು ಮಾಡಿದ್ದಾರೆ.
ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು ಅವರು ರಂಗ ಮಂದಿರವನ್ನು ಉದ್ಘಾಟನೆಗೊಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ವ್ಯಕ್ತಿಯ ಬದುಕಿನ ನಂತರ ಬದುಕುವ ಜೀವನ ಶ್ರೇಷ್ಠವಾದ ಜೀವನ, ರಂಗಮAದಿರದ ಹೆಸರಿನ ಮೂಲಕ ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಾಡಿನ ಅನೇಕ ದೇಸಿ ಕಲೆಗಳ ಉಳಿವಿಗೆ ದಾರಿಯಾಗುತ್ತದೆ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಮಾನಸಿಕ ಹಾಗೂ ಸಾಂಸ್ಕೃತಿಕ ಭಾವನೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಸಾಂಸ್ಕೃತಿಕ ರಂಗಕ್ಕೆ ಇದೊಂದು ಅದ್ಭುತವಾದ ಕೊಡುಗೆ, ಈ ರೀತಿಯ ಸಾರ್ಥಕ ಕೆಲಸ ಮಾಡಿದ ಕುಟುಂಬವನ್ನು ಶ್ಲಾಘಿಸಿದರು. ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನೀಡಿದ ನಿಜವಾದ ಗೌರವಾಯಿತು ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಗೌತಮ್ ಅವರ ತಂದೆ ರಂಗ ಮಂದಿರದ ದಾನಿಗಳಾದ ಶ್ರೀ ಬಿ. ವಿ. ನಾಗರಾಜಪ್ಪ, ಬಿ.ವಿ.ಹನುಮಪ್ಪ ,ಬಿ ವಿ ಶ್ರೀನಿವಾಸ್ , ವಿ.ಎಂ.ಸರಿತಾ ಕುಮಾರಿ ಹನ್ಸಿಕ, ದ್ರುವ ಸಾತ್ವಿಕ್ ಹಾಗೂ ಕೋದಂಡರಾಮಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ, ದೇವರಾಜ್ ಬಿ.ಎಮ್, ಬಿ.ಎಂ ಅಶ್ವತಪ್ಪ, ಕೆಎಂ ವೆಂಕಟರೆಡ್ಡಿ,ಅತಿಥಿಗಳಾದ ಆರಕ್ಷಕ ಇಲಾಖೆಯ ಪಿಳ್ಳಪ್ಪ, ಟೈಲರ್ ಹನುಮಪ್ಪ , ನಾರಾಯಣಸ್ವಾಮಿ. ಬಿ, ಸಾರಿಗೆ ಇಲಾಖೆ ಅಂಬರೀಶ್, ಮುಖ್ಯ ಶಿಕ್ಷಕರಾದ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎನ್ ಮಂಜುನಾಥ್, ಸಬರಮತಿಯ ಸಂಘರ್ಷ, ಗ್ರಾಮಸ್ಥರಾದ ನಾಗೇಶ್ ಬಿ.ವಿ, ಬ್ಯಾಟಪ್ಪ ನಾಯಕರಹಳ್ಳಿ, ಬಿ ಎನ್ ರಾಮು, ಅರಣ್ಯ ಇಲಾಖೆ ಕೃಷ್ಣಮೂರ್ತಿ, ಬಿ ಎನ್ ವೀರಪ್ಪ, ಸಂತ್ಯಪ್ಪನವರ ಮುನಿಯಪ್ಪ, ಐತ್ರಾಸನಹಳ್ಳಿ ಮುನಿಯಪ್ಪ, ಉತ್ತನೂರು ವೀರಪ್ಪ, ವೆಂಕಟೇಶಪ್ಪ, ಬೆಣ್ಣಂಗೂರು ಶಾಲೆಯ ಮುಖ್ಯೋಪಾಧ್ಯಾಯ ಮುನಿಸ್ವಾಮಿ, ಸಹ ಶಿಕ್ಷಕರಾದ ಕಮಲಾಕ್ಷಿ , ಶಾಂತಮ್ಮ ಅಂಗನವಾಡಿ ಶಿಕ್ಷಕಿ ಸುನಂದಮ್ಮ , ಊರಿನ ಗ್ರಾಮಸ್ಥರು ಹಾಗೂ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು