LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ರೇಸಿಂಗ್ ವಿಶ್ವಕಪ್‍ಗೆ ಭಾರತ ತಂಡ ಆಯ್ಕೆ

ಬೆಂಗಳೂರು: ಭಾರತದಲ್ಲಿ ಮುಂಚೂಣಿ ಕ್ರೀಡಾ ನಿರ್ವಹಣಾ ಸಂಸ್ಥೆಯಾದ ಕಂಕನಾಳ ಸ್ಪೋರ್ಟ್ಸ್ ಗ್ರೂಪ್ (KSG), ಭಾರತದಲ್ಲಿ ರೇಸ್‍ಗಳನ್ನು ನಡೆಸಿಕೊಡುವುದಕ್ಕಾಗಿ FIM E-Xplorer ದೊಂದಿಗೆ ನವೀನ ಒಂಭತ್ತು-ವರ್ಷಗಳ ವಿಶೇಷ ಸಹಭಾಗಿತ್ವಕ್ಕೆ ಒಪ್ಪಿಗೆ ನೀಡಿದೆ.

ಈ ವಿಶಿಷ್ಟ ಸಹಯೋಗವು, FIM E-Xplorer ಆಯೋಜಿಸುವ ಅತ್ಯಾಧುನಿಕವಾದ ಜಾಗತಿಕ ಎಲೆಕ್ಟ್ರಿಕ್ ಆಲ್-ಟೆರೇನ್ ಮೋಟಾರುಸೈಕಲ್ ರೇಸಿಂಗ್‍ನ ವಿಶ್ವಕಪ್‍ನಲ್ಲಿ ಒಂದು ಭಾರತೀಯ ತಂಡದ ಆರಂಭವನ್ನು ಸೂಚಿಸುತ್ತದೆ. ಹೆಚ್ಚುವರಿಯಾಗಿ, ನವಂಬರ್ 2024ನಲ್ಲಿ ಸೀಸನ್‍ನ ಗ್ರಾಂಡ್ ಫಿನಾಲೆ ನಡೆಸಿಕೊಡಲು ಭಾರತ ಆಯ್ಕೆಯಾಗಿದೆ.

ಈ ಅಗ್ರಮಾನ್ಯವಾದ ಆಲ್-ಟೆರೇನ್ ಎಲೆಕ್ಟ್ರಿಕ್ ಮೋಟಾರುಸೈಕಲ್ ರೇಸಿಂಗ್ ಸರಣಿಯು, ಮೋಟಾರುಸೈಕಲ್ ತಯಾರಿಕಾ ಸಂಸ್ಥೆಗಳು ತಮ್ಮ ಅಭಿವೃದ್ಧಿಪಡಿಸಿದ ವಾಹನಗಳು ಹಾಗೂ ಪ್ರೋಟೋಟೈಪ್‍ಗಳನ್ನು ಪರೀಕ್ಷಿಸಿ ಅದರ ಮಿತಿಯನ್ನು ಹೆಚ್ಚಿಸಲು ಒಂದು ವಿಶಿಷ್ಟವಾದ ವೇದಿಕೆಯನ್ನು ಒದಗಿಸುವುದರ ಜೊತೆಗೆ, ಅವರ ತಾಂತ್ರಿಕ ಅಭಿವೃದ್ಧಿಯ ಮಟ್ಟವನ್ನೂ ಪ್ರದರ್ಶಿಸುತ್ತದೆ. ಇನ್ನೇನು ಪ್ರಾರಂಭವಾಗಲಿರುವ ತನ್ನ ಎರಡನೇ ಸೀಸನ್‍ನೊಂದಿಗೆ ಈ ಸರಣಿಯು, 60ಕ್ಕಿಂತ ಹೆಚ್ಚಿನ ದೇಶಗಳಲ್ಲಿ ಪ್ರಸಾರಗೊಂಡು, ಜಾಗತಿಕವಾಗಿ 350 ದಶಲಕ್ಷ ಮನೆಗಳನ್ನು ತಲುಪಲಿದೆ.

ಇ-ಘಿಠಿಟoಡಿeಡಿ ದೊಂದಿಗೆ ಈ ದೀರ್ಘಕಾಲಿಕ ಸಹಭಾಗಿತ್ವ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಅತ್ಯಂತ ಉತ್ಸಾಹವೆನಿಸುತ್ತಿದೆ. ಮೋಟಾರ್ಬೈಕ್ ಸಮುದಾಯ ಹಾಗೂ ಎಲ್ಲಾ ರೇಸಿಂಗ್ ಅಭಿಮಾನಿಗಳನ್ನು ಒಗ್ಗೂಡಿಸುತ್ತಾ, ಭಾರತದ ಮೋಟಾಸ್ಪೋರ್ಟ್ಸ್‍ನ ವೇಗವರ್ಧಕವಾಗಿ ಕಾರ್ಯ ನಿರ್ವಹಿಸುವುದರ ಜೊತೆಜೊತೆಗೇ ಅದಕ್ಕಾಗಿ ಉತ್ಸಾಹವನ್ನು ಹೆಚ್ಚಿಸುವುದೂ ನಮ್ಮ ಮಹತ್ವಾಕಾಂಕ್ಷೆಯಾಗಿದೆ.

ಮುಂಬರುವ ಸೀಸನ್ ದೇಶಾದ್ಯಂತ ಇರುವ ಮೋಟೋ ಉತ್ಸಾಹಿಗಳಿಗೆ ಮಾತ್ರ ಕೌತುಕವುಂಟು ಮಾಡುವುದಲ್ಲದೆ, ನಮ್ಮದೇ ಸ್ವಂತ ಭಾರತೀಯ ತಂಡದ ಪರಿಚಯವು, ಮೋಟಾಸ್ಪೋರ್ಟ್ಸ್‍ನಲ್ಲಿ ಅಂತರರಾಷ್ಟ್ರೀಯ ವೇದಿಕೆಯ ಮೇಲಿರುವ ನಮಗೆಲ್ಲರಿಗೂ ಒಂದು ಅವಕಾಶವನ್ನೂ ಒದಗಿಸುತ್ತದೆ! ಇದು, ಭಾರತದಲ್ಲಿ ಮೋಟಾರುಸೈಕಲ್ ರೇಸಿಂಗ್‍ನ ಹೊಸ ಉದಯದ ಆರಂಭವಾಗಿದೆ ಎಂದು ಕಂಕನಾಳ ಸ್ಪೋರ್ಟ್ಸ್ ಗ್ರೂಪ್‍ನ ಮಾಲೀಕ ಅಭಿಷೇಕ್ ರೆಡ್ಡಿ ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು