LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಆರ್ಚರಿ: ಭಾರತದ ಪರನೀತ್ ಕೌರ್‍ಗೆ ಚಿನ್ನ

ಬ್ಯಾಂಕಾಕ್: ಭಾರತದ ಉದಯೋನ್ಮುಖ ಆರ್ಚರಿಪಟು ಪರನೀತ್ ಕೌರ್ ಏಷ್ಯನ್ ಚಾಂಪಿಯನ್ ಷಿಪ್‍ನಲ್ಲಿ ಅನುಭವಿ ಜ್ಯೋತಿ ಸುರೇಖಾ ವೆನ್ನಂ ಅವರಿಗೆ ಆಘಾತ ನೀಡಿ, ಚಿನ್ನ ಗೆದ್ದರು.

ಗುರುವಾರ ನಡೆದ ಸ್ಪರ್ಧೆಗಳಲ್ಲಿ ಭಾರತಕ್ಕೆ ಒಟ್ಟು ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಒಲಿದವು. ಪರನೀತ್ ಮತ್ತು ಜ್ಯೋತಿ ಅವರ ಹಣಾಹಣಿ ರೋಚಕವಾಗಿತ್ತು. 18 ವರ್ಷದ ಪರನೀತ್ ಸ್ಪರ್ಧೆ ಅರ್ಧ ಹಾದಿ ಕ್ರಮಿಸಿದಾಗ ಎರಡು ಪಾಯಿಂಟ್‍ಗಳಿಂದ ಹಿಂದಿದ್ದರು. ಕೊನೆಯ ಎರಡು ಸುತ್ತುಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಿದರು. 145-145ರಿಂದ ಸಮವಾಯಿತು. ಟೈಬ್ರೇಕರ್‍ನಲ್ಲಿ ಮುನ್ನಡೆ ಸಾಧಿಸಿದರು. ಜ್ಯೋತಿ ಬೆಳ್ಳಿ ಪದಕ ಪಡೆದರು.

ಮಿಶ್ರ ತಂಡ ವಿಭಾಗದ ಫೈನಲ್‍ನಲ್ಲಿ ಅದಿತಿ ಸ್ವಾಮಿ ಮತ್ತು ಪ್ರಿಯಾಂಶ್ 156-151 ರಿಂದ ಥಾಯ್ಲೆಂಡ್ ತಂಡವನ್ನು ಮಣಿಸಿ ಚಿನ್ನ ಜಯಿಸಿತು. ಕಂಪೌಂಡ್ ಮಹಿಳಾ ತಂಡ ವಿಭಾಗದಲ್ಲಿ; ಜ್ಯೋತಿ, ಪರನೀತ್, ಅದಿತಿ 234-233ರಿಂದ ಚೈನಿಸ್ ತೈಪೆ ವಿರುದ್ಧ ಗೆದ್ದು ಚಿನ್ನ ಗಳಿಸಿದರು. ಪುರುಷರ ವೈಯಕ್ತಿಕ ವಿಭಾಗದಲ್ಲಿ ಅಭಿಷೇಕ್ ವರ್ಮಾ 147-146ರಿಂದ ದಕ್ಷಿಣ ಕೊರಿಯಾದ ಜೂ ಜೆಹೂನ್ ವಿರುದ್ಧ ಗೆದ್ದು ಕಂಚಿನ ಪದಕ ಪಡೆದರು.

ಇದು ಭಾರತಕ್ಕೆ ಈ ಚಾಂಪಿಯನ್ ಷಿಪ್‍ನಲ್ಲಿ ಒಲಿದ ಮೂರನೇ ಕಂಚಿನ ಪದಕ. ರಿಕರ್ವ್‍ನಲ್ಲಿ ಕಂಚು: ಭಾರತದ ರಿಕರ್ವ್ ಆರ್ಚರಿ ಪಟುಗಳ ತಂಡವು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸುವ ಅರ್ಹತೆ ಗಿಟ್ಟಿಸಲು ವಿಫಲರಾದರು. ಆದರೆ ಮಹಿಳಾ ತಂಡ ಕಂಚು ಗಳಿಸಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು