LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"ಇನಿಯನ ಆತ್ಮ ಟ್ರೇಲರ್‌ ಮತ್ತು ಹಾಡು ಬಿಡುಗಡೆ"

ಕೋಲಾರ ಮೂಲದ ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ ಇನಿಯನ ಆತ್ಮ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಉದ್ಯಮಿ ಪುಂಡರೀಕ ಮೂರ್ತಿ ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಶ್ರೀ ವಿನಾಯಕ ವೆಂಕಟೇಶ್ವರ ಫಿಲಂಸ್ ಅಡಿಯಲ್ಲಿ ಬಿ.ಕಲಾವತಿ ನಿರ್ಮಾಣ ಮಾಡಿದ್ದಾರೆ. ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ
ನಿರ್ದೇಶನದ ಜವಬ್ದಾರಿಯನ್ನು ನರೇಶ್ ಸಿದ್ದಘಟ್ಟ ವಹಿಸಿಕೊಂಡಿದ್ದಾರೆ.

ನಂತರ ಮಾತನಾಡಿದ ನಿರ್ದೇಶಕರು, ಏಳು ಜನ ಯುವ ತಂಡದವರು ಪ್ರವಾಸಕ್ಕೆಂದು ದೂರದ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ಇವರನ್ನೆ ಗುರಿಯಾಗಿಸಿಕೊಂಡು  ಒಂದಷ್ಟು ಘಟನೆಗಳು ನಡೆಯುವುದು ಯಾಕೆ, ಕರ್ಮ ಯಾರನ್ನು ಬಿಡುವುದಿಲ್ಲ. ಪ್ರೇಯಸಿ ಆತ್ಮ ಹೇಗಾಗುತ್ತದೆ. ಇಂತಹ ಹಲವು ಸ್ವಾರಸ್ಯಕರ ವಿಷಯಗಳು ಹಾರರ್, ಥ್ರಿಲ್ಲರ್ ರೀತಿಯಲ್ಲಿ ನೋಡುಗರಿಗೆ ಕುತೂಹಲ ಮೂಡಿಸುತ್ತದೆ ಹಾಗೂ ಕಾಮಿಡಿಯಾಗಿ ಸನ್ನಿವೇಶಗಳು ಇರಲಿದೆ. ಕೋಲಾರ, ಚಿಕ್ಕಾಬಳ್ಳಾಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾಧ್ಯಮದವರ ಸಹಕಾರ ಬೇಕೆಂದು ನರೇಶ್ ಸಿದ್ದಘಟ್ಟ ಕೋರಿದರು.

ನಾಯಕ ಸಿದ್ದರ್ಥ್ ಹರಿ, ನಾಯಕಿ ನಿಶಾರೆಡ್ಡಿ. ಉಳಿದಂತೆ ಕೋಲಾರ ಸೂರ್ಯ, ರಾಜ್‌ವೀರ್, ಕಿಟ್ಟಿ ತಾಳಿಕೋಟೆ, ಆದಿಮಧುಗಿರಿ, ಸುಶ್ಮಿತ, ನಯನ ಮುಂತಾದವರು ನಟಿಸಿದ್ದಾರೆ. ಸಂಗೀತ ಎ.ಟಿ.ರವೀಶ್, ಛಾಯಾಗ್ರಹಣ ಚರಣ್‌ತೇಜ್, ಸಂಕಲನ ಪವನ್.ಬಿ.ಕೆ, ಸಾಹಸ ಥ್ರಿಲ್ಲರ್‌ಮಂಜು- ಕೌರವವೆAಕಟೇಶ್, ನಿರ್ವಹಣೆ ಮೋಹನ್, ನೃತ್ಯ ಕರಿಯನಂದ,ಸನ್ ಸುನಿಲ್ ಅವರದಾಗಿದೆ. ಹೇಮಂತ್‌ಕುಮಾರ್, ರವಿಶಾಸ್ತ್ರೀ, ಸುರಭಿ ಭರದ್ವಾಜ್, ಸಚಿನ್ ಹಾಡುಗಳಿಗೆ ಕಂಠದಾನ ಮಾಡಿದ್ದಾರೆ. ಜಯದೇವ್ ಫಿಲಂಸ್ ಮುಖಾಂತರ ಚಿತ್ರವು ಇದೇ ತಿಂಗಳು ತೆರೆಗೆ ಬರಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು