LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಐಪಿಎಲ್ ವೇಳಾಪಟ್ಟಿ ಪ್ರಕಟ, ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್ 2026) 19ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದೆ. ಐಪಿಎಲ್ ಟೂರ್ನಿಯ 20 ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಲಾಗಿದ್ದು, ಇದೇ ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ಇನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (ಎಸ್.‌ಆರ್.ಹೆಚ್) ನಡುವೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಮೊದಲ 20 ದಿನಗಳ ವೇಳಾಪಟ್ಟಿ ಮಾತ್ರ ಬಿಡುಗಡೆ: ದೇಶದ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಸದ್ಯಕ್ಕೆ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಟೂರ್ನಿಯ ಉಳಿದ ಪಂದ್ಯಗಳ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಕಳೆದ ಆವೃತ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ಮಣಿಸಿ ಚಾಂಪಿಯನ್ ಆಗಿತ್ತು. ಆದರೆ ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳು ಮೃತಪಟ್ಟಿದ್ದರಿಂದ ಬೆಂಗಳೂರಿನಲ್ಲಿ ಐಪಿಎಲ್ ನಡೆಸದಿರಲು ಕರ್ನಾಟಕ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ ಆರ್‌ಸಿಬಿ ಕೂಡ ಬೆಂಗಳೂರಿನಲ್ಲಿ ತನ್ನ ತವರು ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಿತ್ತು.
ಆದರೆ ಕೆಎಸ್‌ಸಿಎ ಹೊಸ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ತಂಡ ಕರ್ನಾಟಕ ಸರ್ಕಾರ ಹಾಗೂ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಒಪ್ಪಿಸುವಲ್ಲಿ ಸಫಲವಾಗಿದ್ದು, ಐಪಿಎಲ್ ಮೂಲಕವೇ ರದ್ದಾಗಿದ್ದ ಕ್ರಿಕೆಟ್ ಇದೀಗ ಐಪಿಎಲ್ ಮೂಲಕವೇ ಚಿನ್ನಸ್ವಾಮಿಗೆ ಮರಳುತ್ತಿವೆ. ಮಾರ್ಚ್ 28ರಂದು ರಾತ್ರಿ 7.30ಕ್ಕೆ ಉದ್ಘಾಟನಾ ಪಂದ್ಯವೇ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
4 ದಿನಗಳಲ್ಲಿ 8 ಪಂದ್ಯಗಳು
ಮಾರ್ಚ್ 28 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಏಪ್ರಿಲ್ 4 ರಂದು ಮೊದಲ ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. 3.30 ಕ್ಕೆ ಶುರುವಾಗಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ದ್ವಿತೀಯ ಮ್ಯಾಚ್‌ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿಯಲಿದೆ. ಏಪ್ರಿಲ್ 5 ರಂದು ಜರುಗಲಿರುವ ದ್ವಿತೀಯ ಡಬಲ್ ಹೆಡ್ಡರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಪಂದ್ಯವಾಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಪಂದ್ಯವಾಡಲಿದೆ.
ಎಸ್‌ಆರ್‌ಹೆಚ್ ಹಾಗೂ ಎಲ್‌ಎಸ್‌ಜಿ ಪಂದ್ಯದ ಬಳಿಕ ನಾಲ್ಕು ದಿನ ಡಬಲ್ ಹೆಡ್ಡರ್ ಪಂದ್ಯಗಳಿರುವುದಿಲ್ಲ. ಆದರೆ ಐಪಿಎಲ್‌ನ 16ನೇ ಪಂದ್ಯದ ನಂತರದ ಬ್ಯಾಕ್ ಟು ಬ್ಯಾಕ್ ಎರಡು ಡಬಲ್-ಹೆಡ್ಡರ್ ಪಂದ್ಯಗಳಿಗೆ ದಿನಾಂಕ ನಿಗದಿ ಮಾಡಲಾಗಿದೆ. ಏಪ್ರಿಲ್ 11 ರಂದು ಮೂರನೇ ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. ಮೊದಲ ಮ್ಯಾಚ್‌ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ.
ಏಪ್ರಿಲ್ 12 ರಂದು ನಡೆಯಲಿರುವ ಮತ್ತೊಂದು ಡಬಲ್ ಹೆಡ್ಡರ್‌ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ.
ಮೊದಲ ಹಂತದ ವೇಳಾಪಟ್ಟಿ ಇಂತಿದೆ
ಮಾರ್ಚ್ 28ಕ್ಕೆ ಬೆಂಗಳೂರಲ್ಲಿ ಆರ್‌ಸಿಬಿ-ಎಸ್‌ಆರ್‌ಎಚ್
ಮಾರ್ಚ್ 29ಕ್ಕೆ ಮುಂಬೈನಲ್ಲಿ ಎಂಐ-ಕೆಕೆಆರ್
ಮಾರ್ಚ್ 30ಕ್ಕೆ ಗುವಾಹಟಿಯಲ್ಲಿ ಆರ್‌ಆರ್- ಸಿಎಸ್‌ಕೆ
ಮಾರ್ಚ್ 31ಕ್ಕೆ ಪಂಜಾಬ್‌ನಲ್ಲಿ ಪಿಬಿಕೆಎಸ್-ಜಿಟಿ
ಏಪ್ರಿಲ್ 1ಕ್ಕೆ ಲಖನೌನಲ್ಲಿ ಎಲ್‌ಎಸ್‌ಜಿ-ಡಿಸಿ
ಏಪ್ರಿಲ್ 2ಕ್ಕೆ ಕೋಲ್ಕತ್ತಾದಲ್ಲಿ ಕೆಕೆಆರ್-ಎಸ್‌ಆರ್‌ಎಚ್
ಏಪ್ರಿಲ್ 3ಕ್ಕೆ ಚೆನ್ನೈ ಸಿಎಸ್‌ಕೆ-ಪಿಬಿಕೆಎಸ್
ಏಪ್ರಿಲ್ 4ರ ಮಧ್ಯಾಹ್ನ ದೆಹಲಿಯಲ್ಲಿ ಡಿಸಿ- ಎಂಐ
ಏಪ್ರಿಲ್ 4ರ ಸಂಜೆ ಅಹಮದಾಬಾದ್‌ನಲ್ಲಿ ಜಿಟಿ- ಆರ್‌ಆರ್
ಏಪ್ರಿಲ್ 5ರಂದು ಹೈದರಾಬಾದ್‌ನಲ್ಲಿ ಎಸ್‌ಆರ್‌ಎಚ್-ಎಲ್‌ಎಸ್‌ಜಿ
ಏಪ್ರಿಲ್ 5ರಂದು ಬೆಂಗಳೂರಲ್ಲಿ ಆರ್‌ಸಿಬಿ-ಸಿಎಸ್‌ಕೆ
ಏಪ್ರಿಲ್ 6ರಂದು ಕೋಲ್ಕತ್ತಾದಲ್ಲಿ ಕೆಕೆಆರ್-ಪಿಬಿಕೆಎಸ್
ಏಪ್ರಿಲ್ 7 ರಂದು ಗುವಾಹಟಿಯಲ್ಲಿ ಆರ್‌ಆರ್-ಎಂಐ
ಏಪ್ರಿಲ್ 8 ರಂದು ದೆಹಲಿಯಲ್ಲಿ ಡಿಸಿ-ಜಿಟಿ
ಏಪ್ರಿಲ್ 9 ರಂದು ಕೊಲ್ಕತ್ತಾದಲ್ಲಿ ಕೆಕೆಆರ್-ಎಲ್‌ಎಸ್‌ಜಿ
ಏಪ್ರಿಲ್ 10 ರಂದು ಗುವಾಹಟಿಯಲ್ಲಿ ಆರ್‌ಆರ್-ಆರ್‌ಸಿಬಿ
ಏಪ್ರಿಲ್ 11 ರಂದು ಮಧ್ಯಾಹ್ನ ಪಂಜಾಬ್‌ನಲ್ಲಿ ಪಿಬಿಕೆಎಸ್-ಎಸ್‌ಆರ್‌ಎಚ್
ಏಪ್ರಿಲ್ 11 ರ ಸಂಜೆ ಚೆನ್ನೈನಲ್ಲಿ ಸಿಎಸ್‌ಕೆ-ಡಿಸಿ
ಏಪ್ರಿಲ್ 12 ರ ಮಧ್ಯಾಹ್ನ ಲಖನೌನಲ್ಲಿ ಎಲ್‌ಎಸ್‌ಜಿ-ಜಿಟಿ
ಏಪ್ರಿಲ್ 12 ರ ಸಂಜೆ ಮುಂಬೈನಲ್ಲಿ ಎಂಐ-ಆರ್‌ಸಿಬಿ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು