LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಶಾಂತಿ ಮಾತುಕತೆ ಪಾಕಿಸ್ತಾನ ತಲುಪಿದ ಇರಾನ್-ಅಮೆರಿಕ ನಿಯೋಗ

ಇಸ್ಲಾಮಾಬಾದ್: ಎರಡು ವಾರಗಳ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಶಾಂತಿಮಾತುಕತೆಗಾಗಿ ಇರಾನ್ ಹಾಗೂ ಅಮೆರಿಕ ದೇಶಗಳ ನಿಯೋಗ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ತಲುಪಿದೆ.
ಈಗಾಗಲೇ ಇಸ್ಲಮಾಬಾದ್ ತಲುಪಿದ್ದ 71 ಸದಸ್ಯರ ಇರಾನ್ ನಿಯೋಗದ ಬೆನ್ನಲ್ಲೇ ಅಮೆರಿಕಾದ ಉಪಾಧ್ಯಕ್ಷ ಜೆಡಿಯು ವ್ಯಾನ್ಸ್ ನೇತೃತ್ವದ ನಿಯೋಗ 11 ಗಂಟೆ ಸುಮಾರಿಗೆ ಇಸ್ಲಮಾಬಾದ್‌ಗೆ ಆಗಮಿಸಿದೆ.
ನಿಯೋಗಕ್ಕೆ ಮಿನಾಬು-168 ಎಂದು ಹೆಸರಿಟ್ಟಿದೆ. ಇರಾನ್ ದೇಶದ ಮಿನಾಬ್‌ನ ಶಾಲೆಯ ಮೇಲೆ ಇಸ್ರೇಲ್ ಅಮೆರಿಕ ದಾಳಿ ನಡೆಸಿ 168 ಮಕ್ಕಳ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ಸ್ಮರಣಾರ್ಥ ಇರಾನ್ ನಿಯೋಗಕ್ಕೆ ಮಿನಾಬು ಎಂದು ಹೆಸರಿಟ್ಟಿದೆ. ಸಂಧಾನ ಮಾತುಕತೆ ಆರಂಭಕ್ಕೂ ಮುನ್ನಾ ಎರಡು ದೇಶಗಳ ನಿಯೋಗ ಮೊದಲಿಗೆ ಪಾಕ್ ಪ್ರಧಾನಿ ಶಬಾಜ್ ನವಾಜ್ ಷರೀಫ್ ರೊಂದಿಗೆ ಮಾತುಕತೆ ನಡೆಸಲಿದ್ದಾರೆ. ತದನಂತರ ಎರಡು ದೇಶಗಳು ಮುಖಾಮುಖಿಯಾಗಲಿವೆ.
ಮಾತುಕತೆಗೂ ಮುನ್ನ ಇರಾನ್ ತನ್ನ ಷರತ್ತು ಪೂರೈಸಬೇಕು ಎಂಬ ಪಟ್ಟಿನಿಂದ ಹಿಂದೆ ಸರಿದಿಲ್ಲ. ಮೊದಲಿಗೆ ಲೆಬನಾನ್ ಮೇಲೆ ಇಸ್ರೇಲ್ ಯುದ್ಧ ನಿಲ್ಲಬೇಕು, ಪ್ರೀಜ್ ಮಾಡಿರುವ ಹಣವನ್ನು ಬಿಡುಗಡೆಗೊಳಿಸಬೇಕು ಎಂಬ ಪ್ರಮುಖ ಷರತ್ತುಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಟ್ಟು ಹಿಡಿದಿದೆ. ಇರಾನ್ ತಮ್ಮ ಪಟ್ಟಿನಿಂದ ಹಿಂದೆ ಸರಿಯದಿದ್ದಲ್ಲಿ ಸಂಧಾನ ಮಾತುಕತೆ ಆರಂಭವಾಗುವುದು ಇಲ್ಲವೋ ಎಂಬ ಜಿಜ್ಞಾಸೆ ಹಲವು ದೇಶಗಳನ್ನು ಕಾಡತೊಡಗಿದೆ.
ನಗರಾದ್ಯಂತ ಬಿಗಿ ಭದ್ರತೆ
ಇಸ್ಲಾಮಾಬಾದ್: ಇರಾನ್ ಅಮೆರಿಕ ಯುದ್ಧ ನಡೆಯುತ್ತಿರುವ ಹಿನೆಲೆಯಲ್ಲಿ ಇಂದು ಪಾಕಿಸ್ತಾನದಲ್ಲಿ ಇರಾನ್ ಅಮೆರಿಕದ ನಡುವೆ ಶಾಂತಿಮಾತಕದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಬಾದ್ ನಗರವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದೆ.
ನಾಯಕರ ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ ಮನೆಗಳಿಂದ ಯಾರು ಹೊರಗಡೆ ಬರದಂತೆ ಸರ್ಕಾರ ಸೂಚನೆ ನೀಡಿದೆ. ನಗರದ ಎಲ್ಲಾ ಬೀದಿಗಳಲ್ಲಿ ಪೊಲೀಸರು ಮತ್ತು ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಸಂಧಾನ ಸಭೆ ನಡೆಯುವ ಸೆರೆನಾ ಹೋಟೆಲ್‌ಗೆ ಸರ್ಪಗಾವಲು ಇದ್ದು, ಪೊಲೀಸರು ಹಾಗೂ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಸೆರೆನ ಹೋಟೆಲ್ ಸುತ್ತಮುತ್ತ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು