LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಶಶಿ `ಮೆಹಬೂಬಾ'ನಿಗೆ ಜೊತೆಯಾದ ಕನ್ನಡ ಬಿಗ್ ಬಾಸ್ ವಿನ್ನರ್ಸ್ ಮಾ.15ಕ್ಕೆ ಚಿತ್ರ ಬಿಡುಗಡೆ

ಮಾರ್ಡನ್ ರೈತ ಶಶಿ ಹೊಸ ಪ್ರಯತ್ನ ಮೆಹಬೂಬಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ.ಮಾರ್ಚ್ 15ಕ್ಕೆ ಚಿತ್ರ ತೆರೆಗೆ ಬರ್ತಿದೆ. pOಸ್ಟರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಮೆಹಬೂಬಾ ಟೀಸರ್ ಅನಾವರಣಗೊಂಡಿದೆ. ಇತ್ತೀಚೆಗೆ ಟೀಸರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಿಗ್ಬಾಸ್ ಕನ್ನಡ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್, ಸ್ಪರ್ಧಿಗಳಾದ ರಕ್ಷಕ್ ಬುಲೆಟ್, ಪವಿ ಪೂವಪ್ಪ ಮೆಹಬೂಬಾ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇನ್ನೂ, ಕನ್ನಡ ಬಿಗ್ ಬಾಸ್ ವಿನ್ನರ್ ಗಳಾದ ಚಂದನ್ ಶೆಟ್ಟಿ, ಅಕುಲ್ ಬಾಲಾಜಿ, ಶೈನ್ ಶೆಟ್ಟಿ, ರೂಪೇಶ್ ಶೆಟ್ಟಿ, ಮಂಜು ಪಾವಗಡ, ವಿಜಯ್ ರಾಘವೇಂದ್ರ, ಪ್ರಥಮ್ ಹಾಗೂ ಕಾರ್ತಿಕ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೆಹಬೂಬಾ ಟೀಸರ್ ಹಂಚಿಕೊಳ್ಳುವ ಮೂಲಕ ಶಶಿ ಹೊಸ ಪಯಣಕ್ಕೆ ಸಾಥ್ ಕೊಟ್ಟಿದ್ದಾರೆ.

ಬಿಗ್ ಬಾಸ್ ವಿನ್ನರ್ ಶಶಿ ಅವರು ಟೀಸರ್ ಇವೆಂಟ್ ನಲ್ಲಿ ಕಣ್ಣೀರು ಹಾಕಿದ್ದಾರೆ. ಇದು ಪಬ್ಲಿಸಿಟಿ ಗಿಮಿಕ್ ಅಲ್ಲ. ಈ ಸಿನಿಮಾ ಬಗ್ಗೆ ಮಾತಾನಾಡಬೇಕು ಅಂದಾಗ ನೋವಾಗುತ್ತದೆ. ಬಿಗ್ ಬಾಸ್ ನಿಂದ ಆಚೆ ಬಂದಾಗ ಎಲ್ಲರೂ ನನ್ನನ್ನು ನೀನು ಯಾವ ಸೀಮೆ ರೈತ ಅಂದರು ಎಂದಿದ್ದಾರೆ. ರೈತ ಅಂತಿಯಾ, ಈ ರೀತಿ ಬಟ್ಟೆ ಹಾಕ್ತಿಯಾ ಅಂತ ಕೇಳಿದ್ದರು.

ನಾನು ಯಾವತ್ತು ಸೋಲನ್ನು ಒಪ್ಪಿಕೊಂಡವನಲ್ಲ. ನಾನು ರೈತನ ಮಗ ಅಲ್ಲ ನಾನೇ ರೈತ. ನಾನು 40 ಪ್ರಾಡಕ್ಟ್ ಗಳ ಡೆವಲಪ್ ಮಾಡಿದ್ದೀನಿ. ನಾನು ಶೋಕಿಗಾಗಿ ನಿರ್ಮಾಪಕ ಆದವನಲ್ಲ ಎಂದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಾನು ನಿದ್ದೆ ಮಾಡ್ತಿಲ್ಲ ಎಂದಿದ್ದಾರೆ. ನಾನು ಇಡೀ ತಂಡದ ಜೊತೆ ಕಿತ್ತಾಡಿದ್ದೀನಿ ಅಂತ ಶಶಿ ಕಣ್ಣೀರಿಟ್ಟರು.

ನಟಿ ಪಾವನಾ ಗೌಡ ಇಂದು ಟೀಸರ್ ರಿಲೀಸ್ ಆಯ್ತು. ಚಿತ್ರದ ಕಿರುಪರಿಚಯ ಇದು. ಟ್ರೇಲರ್ ಬಾಕಿ ಇದೆ. ಇದಕ್ಕೆ ತುಂಬಾ ಕಾಣಿಸಿಕೊಳ್ಳದ ಶಕ್ತಿಗಳು ಕೆಲಸ ಮಾಡಿವೆ. ನನಗೆ ನನ್ನ ತಂಡದ ಬಗ್ಗೆ ಹೆಮ್ಮೆ ಇದೆ. ಈ ಚಿತ್ರದ ರಿಲೀಸ್ ಒಂದು ಸಕ್ಸಸ್ ಅಂದರು.
ನಿರ್ದೇಶಕಅನೂಪ್ ಆಂಟೋನಿ ಮಾತನಾಡಿ, ಮೆಹಬೂಬಾ ನಮ್ಮ ಇಡೀ ತಂಡಕ್ಕೆ ಒಳ್ಳೆ ಜರ್ನಿ. ಹೀರೋ ಆಗಿ ಶಶಿ ಅವರು ಲಾಂಚ್ ಆಗುತ್ತಿದ್ದಾರೆ.

ಅದು ಅಲ್ಲದೇ ಪ್ರೊಡ್ಯೂಸರ್ ಕೂಡ ಆಗಿದ್ದಾರೆ. ಡೈರೆಕ್ಟರ್ ಆಗಿ ಹೊಸಬರ ಜೊತೆ ಕೆಲಸ ಮಾಡಲು ಟೆನ್ಷನ್ ಇರುತ್ತದೆ. ಬೇಕಾಗಿರುವ ಎಕ್ಸ್ ಪ್ರೆಷನ್ ಆಗಲಿ, ಆಕ್ಟಿಂಗ್ ಆಗಲಿ, ಮ್ಯಾನರಿಸಂ ಆಗ್ಲಿ ಬರುತ್ತೋ ಇಲ್ಲವೋ ಅಂತಾ. ಆದರೆ ಮೊದಲ ದಿನವೇ ನನ್ನ ಇಂಪ್ರೆಸ್ ಮಾಡಿದರು ಎಂದರು.

ಮ್ಯಾಥ್ಯೂಸ್ ಮನು ಅವರು ಮೆಹಬೂಬಾ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ, ಕಲೈ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು