LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಇಪಿಎಲ್(EPL) ಪಡೆಯ ಟೋಟನ್‍ಹ್ಯಾಮ್ ಹಾಟ್‍ಸ್ಪರ್‍ನೊಂದಿಗೆ ಐತಿಹಾಸಿಕ ಸಹಭಾಗಿತ್ವಕ್ಕೆ ಸಹಿ ಹಾಕಿದ ಕಿಕ್‍ಸ್ಟಾರ್ಟ್‍ಎಫ್‍ಸಿ

ಬೆಂಗಳೂರು: ಭಾರತೀಯ ಫುಟ್‍ಬಾಲ್‍ನ ಚಿತ್ರಣವನ್ನು ಮರುವಿವರಿಸುವ ಪ್ರಯತ್ನದ ನಿಟ್ಟಿನಲ್ಲಿ, ಕರ್ನಾಟಕದ ಪ್ರೀಮಿಯರ್ ಫುಟ್‍ಬಾಲ್ ಕ್ಲಬ್ ಮತ್ತು ಅಕಾಡೆಮಿಯಾದ Kickstart FC , ಸುಪ್ರಸಿದ್ಧವಾದ ಇಂಗ್ಲಿಷ್ ಪ್ರೀಮಿಯಮ್ ಲೀಗ್ ಪಡೆಯಾದ ಟೋಟನ್‍ಹ್ಯಾಮ್ ಹಾಟ್‍ಸ್ಪರ್ ಫುಟ್‍ಬಾಲ್ ಕ್ಲಬ್‍ನೊಂದಿಗೆ(Tottenham Hotspur Football Club)ಪ್ರಮುಖ ಸಹಭಾಗಿತ್ವವನ್ನು ಹೆಮ್ಮೆಯಿಂದ ಘೋಷಿಸಿದೆ.

ಟೋಟನ್‍ಹ್ಯಾಮ್‍ನ ರಾಯಭಾರಿಗಳಾದ ಲೆಡ್ಲಿ ಕಿಂಗ್ ಮತ್ತು ಓಸ್ವಾಲ್ಡೊ ಆರ್ಡಿಲ್ಸ್(Ledley King & Osvaldo Ardiles) ಹಾಜರಿದ್ದ ಈ ಐತಿಹಾಸಿಕ ಅನಾವರಣವು ಕರ್ನಾಟಕ ಮತ್ತು ಭಾರತೀಯ ಫುಟ್‍ಬಾಲ್ ಬೆಳವಣಿಗೆಯಲ್ಲಿ ಪ್ರಮುಖ ಕ್ಷಣವಾಗಿದೆ.
ಈ ಸಹಭಾಗಿತ್ವದ ಮೂಲಕ Kickstart FC  ಅಟೋಟನ್‍ಹ್ಯಾಮ್ ಹಾಟ್‍ಸ್ಪರ್‍ನಜಾಗತಿಕ ಫುಟ್‍ಬಾಲ್ಕ್‍ಚ್‍ತಂಡದಿಂದ ತಾಂತ್ರಿಕ ಬೆಂಬಲ ಪಡೆದುಕೊಳ್ಳಲ್ಲಿದ್ದು, ಇವರು ಕ್ಲಬ್‍ನ ತರಬೇತಿ ಪಠ್ಯಕ್ರಮ, ಮತ್ತು ಫುಟ್‍ಬಾಲ್‍ನ ಎಲ್ಲಾ ಅಂಶಗಳಿಗೆ ಆಕಾರ ಒದಗಿಸಲಿದ್ದಾರೆ. ಹೆಚ್ಚುವರಿಯಾಗಿ, ಟೋಟನ್‍ಹ್ಯಾಮ್ ಹಾಟ್‍ಸ್ಪರ್ ತನ್ನ ತಾಂತ್ರಿಕ ಸಿಬ್ಬಂದಿಯನ್ನು ಬೆಂಗಳೂರಿನಲ್ಲೇ ಇರಿಸಿ, Kickstart FC ಇಂಗ್ಲಿಷ್ ಪ್ರಬಲಪಡೆಗೆ ಅನುಗುಣವಾಗಿ ಇರುವಂತೆ ಅದರ ತರಬೇತಿ ವಿಧಾನಗಳನ್ನು ತಯಾರಿಸಲಿದೆ.

ಈಗಾಗಲೇ ಪ್ರಶಂಸನೀಯ ದಾಖಲೆ ಹೊಂದಿರುವ ಕ್ಲಬ್‍ನ ಮಹಿಳಾ ತಂಡವು, ಇತ್ತೀಚೆಗೆ ಸಂಪೂರ್ಣಗೊಂಡ ಭಾರತೀಯ ಮಹಿಳಾ ಲೀಗ್ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಅಗಿದೆ. Kickstart FC, ಯಾವಾಗಲೂ ವಿವಿಧ ವರ್ಗಗಳಾದ್ಯಂತ ಆಟಗಾರ ಬೆಳವಣಿಗೆಗೆ ಒತ್ತು ನೀಡುತ್ತಾ ಬಂದಿದೆ. ಆದ್ದರಿಂದಲೇ ಈ ಸಹಭಾಗಿತ್ವವು ಕರ್ನಾಟಕ ರಾಜ್ಯದಲ್ಲಿ ಕ್ಲಬ್‍ನ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಿ ಅನುವುಗೊಳಿಸಲಿದೆ.

ಎರಡೂ ಕ್ಲಬ್‍ಗಳಿಗೆ ಪ್ರಯೋಜನಕಾರಿಯಾಗಿರುವ ಈ ಸಹಭಾಗಿತ್ವವು, ಸ್ಪರ್ಧಾತ್ಮಕ ಸ್ಪರ್ಧೆಯ ಮೂಲಕ ಯುವ ತಂಡಗಳನ್ನು ಬಲಪಡಿಸುವತ್ತ ಬಲವಾದ ಪ್ರೇರಣೆ ಒದಗಿಸಲಿದೆ. ಪ್ರತಿಭಾ ಅಭಿವೃದ್ಧಿಗೆ ಸಹಯೋಗಗಳನ್ನು ರಚಿಸುತ್ತಾ, Kickstart FC ದ ಯುವತಂಡವು, ಟೋಟನ್‍ಹ್ಯಾಮ್ ಹಾಟ್‍ಸ್ಪರ್‍ನ ಯುವತಂಡಗಳೊಂದಿಗೆ ತರಬೇತಿ ಪಡೆದುಕೊಳ್ಳಲು ಯು.ಕೆ.ಗೆ ಪ್ರಯಾಣ ಬೆಳೆಸುವ ಅವಕಾಶವನ್ನೂ ಪಡೆದುಕೊಳ್ಳಲಿದೆ.

ಟೋಟನ್‍ಹ್ಯಾಮ್ ಹಾಟ್‍ಸ್ಪರ್‍ನೊಂದಿಗಿನ ಸಹಯೋಗವು, Kickstart FC  ಅನ್ನು ಅಂತರರಾಷ್ಟ್ರೀಯ ರಂಗಕ್ಕೆ ವರ್ಧಿಸಲಿದ್ದು, ಅದಕ್ಕೆ ಸರಿಸಾಟಿಯಿಲ್ಲದ ಅವಕಾಶಗಳು ಮತ್ತು ಗುರುತಿಸುವಿಕೆಯನ್ನು ಒದಗಿಸಲಿದೆ. ಕಿಕ್‍ಶ್ಟಾರ್ಟ್ ಫುಟ್‍ಬಾಲ್ ಆಡಳಿತಮಂಡಳಿಯ ದಾರ್ಶನಿಕ ನಾಯಕತ್ವವು ಅಖಿಲ-ಭಾರತ ಮಟ್ಟದಲ್ಲಿ ಫುಟ್‍ಬಾಲ್‍ಅನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
Kickstart FC ಅದ ಸ್ಥಾಪಕ ಮತ್ತು ಚೇರ್ಮನ್ ಶ್ರೀ ಶೇಖರ್ ರಾಜನ್ ಸಹಭಾಗಿತ್ವದ ಬಗ್ಗೆ ಉತ್ಸಾಹ ವ್ಯಕ್ತಪಡಿಸುತ್ತಾ, " ವಿಶ್ವ ಫುಟ್‍ಬಾಲ್‍ನಲ್ಲಿ ಅತಿದೊಡ್ಡ ಕ್ಲಬ್‍ಗಳ ಪೈಕಿ ಒಂದಾದ ಟೋಟನ್‍ಹ್ಯಾಮ್ ಹಾಟ್‍ಸ್ಪರ್‍ದೊಂದಿಗೆ ಈ ಸಹಭಾಗಿತ್ವ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ.

ಇದರಿಂದ ಅನೇಕ ಅತ್ಯುತ್ತಮ ಪದ್ಧತಿಗಳನ್ನು ಕಲಿತುಕೊಂಡು ನಮ್ಮ ಯುವಜನ ಅಭಿವೃದ್ಧಿ ಹಾಗೂ ಮಹಿಳೆಯರ ಫುಟ್‍ಬಾಲ್‍ಅನ್ನು ಬಲಪಡಿಸುವ ಉದ್ದೇಶ ನಮಗಿರುವುದರಿಂದ ಈ ಸಹಭಾಗಿತ್ವವು ನಮಗೆ ಮತ್ತು ಎರಡೂ ಕ್ಲಬ್‍ಗಳಿಗೆ ನೆರವಾಗುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಟೋಟನ್‍ಹ್ಯಾಮ್ ಹಾಟ್‍ಸ್ಪರ್‍ನಂತಹ ಕ್ಲಬ್‍ನಿಂದ ಕಲಿಯುವುದು ಬಹಳಷ್ಟಿದೆ ಮತ್ತು ಅವೆಲ್ಲವನ್ನೂ ಅಳವಡಿಸಿಕೊಳ್ಳಲು ನಾವು ಕಾತರರಾಗಿದ್ದೇವೆ ಎಂದು ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು