LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮೊದಲ ಸೂಪರ್ ಓವರ್ ಥ್ರಿಲ್ಲರ್! ನರೈನ್ ಕೈಚಳಕದಿಂದಾಗಿ ಗೆದ್ದ ಕೆಕೆಆರ್

ಕೋಲ್ಕತಾ ನೈಟ್ ರೈಡರ್ಸ್ ಹಿಡಿತದಲ್ಲಿದ್ದ ಪಂದ್ಯವನ್ನು ಕೊನೇ ಎಸೆತದಲ್ಲಿ ಸಿಕ್ಸ್ ಹೊಡೆದು ಉಲ್ಟಾಪಲ್ಟಾ ಮಾಡಿ ಸೂಪರ್ ಓವರ್ ಗೆ ಕೊಂಡೊಯ್ದದ್ದು ಮೊಹಮ್ಮದ್ ಶಮಿ. ಸೂಪರ್ ಓವರ್ ನಲ್ಲಿ ಪಟಪಟನೆ ಎರಡು ವಿಕೆಟ್ ಕಿತ್ತು ಲಖನೌ ಸೂಪರ್ ಜೈಂಟ್ಸ್ ತಂಡವನ್ನು ತಬ್ಬಿಬ್ಬು ಮಾಡಿದ್ದು ಮಿಸ್ಟರಿ ಸ್ಪಿನ್ನರ್ ಸುನಿಲ್ ನರೈನ್. 3 ಎಸೆತದಲ್ಲಿ ಕೇವಲ 1 ರನ್ ನೀಡಿ ಲಖನೌನ ಇಬ್ಬರು ಬ್ಯಾಟರ್ ಗಳನ್ನು ಔಟ್ ಮಾಡಿದರು. ಪರಿಣಾಮ ಐಪಿಎಲ್ 2026ರ ಸೀಸನ್ ನ ಮೊದಲ ಸೂಪರ್ ಓವರ್ ಕಂಡ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ರೋಮಾಂಚಕ ಜಯಭೇರಿ. ಈ ಮೂಲಕ ಆಡಿದ 8 ಪಂದ್ಯದಲ್ಲಿ 2ನೇ ಗೆಲುವ ಸಾಧಿಸಿದ ಅಂಜಿAಕ್ಯ ರಹಾನೆ ಬಳಗ 5 ಅಂಕ ಗಳಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಿಂದ 8ನೇ ಸ್ಥಾನಕ್ಕೇರಿಸಿತು.
ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ಏಪ್ರಿಲ್ 25ರ ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ 7 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಲಖನೌ ಸೂಪರ್ ಜೈಂಟ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಅಷ್ಟೇ ರನ್ ಗಳಿಸಿತು. ಹೀಗಾಗಿ ಪಂದ್ಯ ಸೂಪರ್ ಓವರ್ ಗೆ ಸಾಗಿತು. 51 ಎಸೆತದಲ್ಲಿ 83 ರನ್ ಜೊತೆಗೆ 5 ಕ್ಯಾಚ್ ಪಡೆದ ರಿಂಕೂ ಸಿಂಗ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಹಿಮ್ಮತ್ ಸಿಂಗ್- ಶಮಿ ಹೋರಾಟ
ಮೊದಲ ವಿಕೆಟ್ 8 ರನ್ ಆಗುವುದರೊಳಗೆ ಬಿದ್ದರೂ ಐಡನ್ ಮಾರ್ಕಂ(27 ಎಸೆತದಲ್ಲಿ 31 ರನ್) ಮತ್ತು ರಿಷಬ್ ಪಂತ್ (38 ಎಸೆತದಲ್ಲಿ 42 ರನ್) ಅವರ ತಾಳ್ಮೆಯ ಆಟ ಆಡಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ನಿರೀಕ್ಷೆಗೆ ತಕ್ಕಂತೆ ಆಡದ್ದರಿಂದ ಅಂತಿಮ ಹಂತದಲ್ಲಿ ಪಂದ್ಯ ಲಖನೌ ಪಾಲಿಗೆ ಕಠಿಣವಾಯಿತು. ಈ ಹಂತದಲ್ಲಿ ಹಿಮ್ಮತ್ ಸಿಂಗ್(10 ಎಸೆತದಲ್ಲಿ 19) ಮತ್ತು ಮೊಹಮ್ಮದ್ ಶಮಿ(6 ಎಸೆತದಲ್ಲಿ 11) ಅವರ ಸಾಹಸದಿಂದಾಗಿ ಪಂದ್ಯ ಟೈ ಆಯಿತು.
ನಿಯಮದಂತೆ ಲಖನೌ ತಂಡ ಮೊದಲು ಬ್ಯಾಟಿಂಗ್ ಗೆ ಇಳಿದಾಗ ಕೋಲ್ಕತಾ ತಂಡದ ಪರವಾಗಿ ಬೌಲಿಂಗ್ ಗೆ ಇಳಿದಿದ್ದು ಸುನಿಲ್ ನರೈನ್. ಮೊದಲ ಎಸೆತದಲ್ಲೇ ನಿಕೋಲಸ್ ಪೂರನ್ ಕ್ಲೀನ್ ಬೌಲ್ಡ್. ಕ್ರೀಸಿಗೆ ಆಗಮಿಸಿದ ರಿಷಬ್ ಪಂತ್ 2ನೇ ಎಸೆತದಲ್ಲಿ ಒಂಟಿ ರನ್ ಗಳಿಸಿದರು. ಮೂರನೇ ಎಸೆತದಲ್ಲಿ ರೋವ್ಮನ್ ಪೋವೆಲ್ ಸಿಕ್ಸರ್ ಗೆತ್ತಲು ಪ್ರಯತ್ನಿಸಿದಾಗ ರಿಂಕು ಸಿಂಗ್ ಹಿಡಿದ ಅದ್ಬುತ ಕ್ಯಾಚ್ ನಿಂದಾಗಿ ಇನ್ನಿಂಗ್ಸ್ ಮುಕ್ತಾಯಗೊಂಡಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು