ರಾಜ್ಯ ರಾಜಕಾರಣದಲ್ಲಿ ಕುಮಾರದ್ಚಯರ ಮಾತಿನಕಾಳಗ ಬಹಳ ಜೋರಾಗಿದೆ. ಒಂದು ಕಾಲದಲ್ಲಿ ಕುಚುಕು ಕುಚುಕು ಅಂತಿದ್ದ ಆ ಜೋಡೆತ್ತುಗಳು ರಾಜಕಾರಣದಲ್ಲಿ ಇಂದು ನಾನೊಂದು ತೀರಾ, ನೀನೊಂದು ತೀರಾ ಎಂಬAತಾಗಿದ್ದಾರೆ. ಅಷ್ಟಕ್ಕೂ ನಾವು ಇಂದು ಹೇಳಲು ಹೊರಟಿರುವುದು ಕುಮಾರದ್ವಾಯರ ಕಥೆಯನ್ನ. ಅಷ್ಟಕ್ಜೂ ಅಂದು ಜೋಡೆತ್ತುಗಳಂತಿದ್ದು, ಇಂದು ಏಕಾಏಕಿ ದೂರಾಗಿದ್ದೇಕೆ? ಒಬ್ಬರ ಮೇಲೊಬ್ಬರು ಹಾವು ಮುಂಗುಸಿಯಂತೆ ಬುಸು ಗುಡುತ್ತಿರುವುದೇಕೆ? ಅದೇ ಕರ್ನಾಟಕ ರಾಜ್ಯ ರಾಜಕಾರಣ ಕಂಡ ಧೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಪ್ರಸ್ತುತವಿರುವ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಗ್ರಗಣ್ಯರೇ. ಇಬ್ಬರು ಕೂಡ ಹಳೆಯ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇಎಇದ ನಾಯಕರೇ. ಒಂದು ಕಾಲದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಂತಹ ವೈರತ್ವವಿದ್ದಿದ್ದು ನಿಜ, ಆದಾದ ಮೇಲೆ ಎಲ್ಲಾ ಮುನಿಸುಗಳನ್ನು ಮರೆತು, ಕುಚುಕು ಕುಚುಕುಗಳಂತೆ ಜೋಡೆತ್ತುಗಳು ಎಂದು ಬಿಂಬಿಸಿಕೊAಡು ಒಗ್ಗಟ್ಟಿನ ಮಂತ್ರ ಜಪಿಸಿದ್ದು ನಿಜ. ಈಗ ಮತ್ತೆ ಹಿಂದಿನ ರೀತಿಯೇ ನಾನೊಂದು ತೀರಾ, ನೀನೊಂದು ತೀರಾ ಎಂದು ಒಬ್ಬರನ್ನು ರಾಜಕೀಯದಲ್ಲಿ ದೂಷಿಸುತ್ತಾ, ಕೆಸರರೆಚಾಟ ಮಾಡಿಕೊಳ್ಳುತ್ತಿರುವುದು ನಿಜ. ಇಷ್ಟೆಲ್ಲಾ ಆಗುತ್ತಿರುವುದು ಅದೊಂದೇ ಕಾರಣಕ್ಕೆ. ಆ ಕಾರಣವನ್ನೇ ನಾವು ಇಂದು ಹೇಳಲು ಹೊರಟಿದ್ದೇವೆ. ಅದರ ಇxಛಿಟusive ಕಥೆ ಈಗ ಆರಂಭವಾಗುತ್ತಿದೆ.ಡಿ.ಕೆ.ಶಿವಕುಮಾರ್. ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್, ಮೂಲತಃ ಇಂದಿನ ಬೆಂಗಳೂರು ದಕ್ಷಿಣ ಜಿಲ್ಲೆಯ ಸಾತನೂರಿನವರು. ತನ್ನ ವಿದ್ಯಾರ್ಥಿ ಜೀವನದಿಂದಲೇ ರಾಜಕಾರಣಿ ಆಗಬೇಕೆಂದು ಕನಸು ಇಟ್ಟುಕೊಂಡು ಇಂದು ಮುಖ್ಯಮಂತ್ರಿ ಗಾದಿಯನ್ನು ಹಿಡಿದು ಕುಳಿತಿರುವವರು. ಯಾರೂ ಏನೇ ಹೇಳಿದ್ರೂ ಇಟ್ಟು ಗುರಿಯನ್ನು ಛಲದಂಕ ಮಲ್ಲನಂತೆ ತಲುಪುವ ಸಾಮರ್ಥ್ಯವಿರುವ ನಾಯಕ. ಇದರಲ್ಲಿ ಎರಡು ಮಾತಿಲ್ಲ. ಬೇಕಾಗಿರುವುದನ್ನು ಪಡೆದೇ ತೀರುವ ಹಠವನ್ನು ಮೈಗೂಡಿಸಿಕೊಂಡು ಬಂದವರು. ಇಂದು ಮುಖ್ಯಮಂತ್ರಿ ಗಾದಿಯನ್ನು ಹಿಡಿದು ಕುಳಿತಿದ್ದಾರೆ. ಅವರ ಈ ಪಯಣ ಹೂವಿನ ಹಾಸಿಗೆಯಾಗಿರಲಿಲ್ಲ ಎಂಬುದನ್ನು ಮರೆಯುವಂತಿಲ್ಲ. ರಾಜಕಾರಣಿ ಆಗಲು ಮೊದಲು ಪಾದಾರ್ಪಣೆ ಮಾಡಿದಾಗಲೇ ಸೋಲನ್ನು ಕಂಡು ಆದಾದ ಬಳಿಕ ಗೆಲುವಿನ ನಗೆ ಬೀರುತ್ತಾ, ಮೊದಲಿಗೆ ತಾಲೂಕು ವ್ಯಾಪ್ತಿಯಲ್ಲಿ, ಬಳಿಕ ಜಿಲ್ಲಾ ವ್ಯಾಪ್ತಿಯಲ್ಲಿ, ಇದಾದ ಬಳಿಕ ರಾಜ್ಯ ವ್ಯಾಪ್ತಿಯಲ್ಲಿ ಈಗ ಇಡೀ ದೇಶವೇ ನೋಡುವ ವ್ಯಾಪ್ತಿಯಲ್ಲಿ ಬೆಳೆದು ನಿಂತವರು. ರಾಜ್ಯದ ಮುಖ್ಯಮಂತ್ರಿಯಾಗಿರುವ ಅವರು ನೇರವಾಗಿ ಜಿದ್ದು ಕಟ್ಟಿಕೊಂಡಿರುವುದೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ಜೊತೆಗೆ. ಹೆಚ್.ಡಿ. ದೇವೇಗೌಡರನ್ನೇ ಚುನಾವಣಾ ರಾಜಕಾರಣದಲ್ಲಿ ಸೋಲಿಸಿ, ಗೆದ್ದು ಬಂದು ಧೀಮಂತ ನಾಯಕರ ಪಟ್ಟಿಗೆ ಸೇರಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್‌ಗಿಂತ ನಾನೇನು ಕಡಿಮೆ ಅಲ್ಲ ಎಂಬುದು ಹೆಚ್.ಡಿ. ಕುಮಾರಸ್ವಾಮಿ ಅವರ ಮಾತು. ಅದು ಕೂಡ ಹೌದು ಬಿಡಿ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಾಲ್ವರು ಪುತ್ರರ ಪೈಕಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಒಬ್ಬರು. ಹಾಸನ ಜಿಲ್ಲೆಯ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಈಗಾಗಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಅಚ್ಚರಿ ಅನ್ನಿಸಿದ್ರೂ ಇಂದು ರಾಜ್ಯ ರಾಜಕಾರಣದ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಾಖಲೆ ಹೆಚ್.ಡಿ.ಕುಮಾರಸ್ವಾಮಿ ಅವರ ಹೆಸರಿನಲ್ಲಿದೆ. ಅದೇ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಯನ್ನು ಪ್ರವೇಶಿಸಿ ಮುಖ್ಯಮಂತ್ರಿ ಗಾದಿಯನ್ನು ಹಿಡಿದ ವಿಚಾರ. ಶಾಸಕರಾಗಿ, ಮಂತ್ರಿಗಳಾಗಿ, ಉಪ- ಮುಖ್ಯಮಂತ್ರಿಗಳಾಗಿ ಬಳಿಕ ಮುಖ್ಯಮಂತ್ರಿಗಳ ಗಾದಿಗೆ ಬಂದವರನ್ನು ನೋಡಿದ್ದೇವೆ. ಆದ್ರೆ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿ ಸಿಎಂ ಆಗುವುದು ಅಂದರೆ, ಆದೃಷ್ಟವೂ ಇರಲೇಬೇಕು ಅಲ್ವಾ? ಅದು ಕುಮಾರಸ್ವಾಮಿ ಕೈ ಹಿಡಿದಿತ್ತು ಅಂದರೆ ತಪ್ಪಾಗಲ್ಲ. ರಾಮನಗರ, ಮಂಡ್ಯ, ಹಾಸನ, ಮೈಸೂರು ಭಾಗದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಕುಮಾರಸ್ವಾಮಿಗೆ ದೇವರ ಮೇಲೆ ಅಪಾರವಾದ ಭಕ್ತಿಯೂ ಇದೆ. ಅಮ್ಮ ಚೆನ್ನಮ್ಮ ಮಾಡುತ್ತಿದ್ದ ಪೂಜೆಯ ಫಲವೂ ಅವರ ಕೈ ಹಿಡಿದಿದೆ. ಈಗ ಉಭಯ ನಾಯಕರುಗಳು ನಾನು, ನಾನು ಎನ್ನುತ್ತಿರುವ ಕಾರಣವೇ ಒಕ್ಕಲಿಗ ಸಾಮ್ರಾಜ್ಯದ ಅಧಿಪತ್ಯಕ್ಕೆ ಎನ್ನುವುದೇ ಗಮನಾರ್ಹ. 2018 ಅಂದರೆ ಕಳೆದ 8 ವರ್ಷಗಳ ಹಿಂದೆ, ಇದ್ದಂತಹ ಹಳೆಯ ವೈಷಮ್ಯ ಮರೆತು ಒಂದಾಗಿ ರಾಜ್ಯದ ಜನರ ಮುಂದೆ ಜೋಡೆತ್ತುಗಳು ಎಂದಿದ್ರು. ಬಳಿಕ ಈಗ ಮತ್ತೆ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಸಿಎಂ ಡಿಕೆಶಿಗೆ ಕುಮಾರಸ್ವಾಮಿ ಆಸ್ತಿ ಹೇಗೆ ಇಷ್ಟೊಂದು ಬಂತು? ಎಂದು ಪ್ರಶ್ನೆ ಮಾಡುತ್ತಿದ್ರೆ, ಇತ್ತ ಕುಮಾರಸ್ವಾಮಿ ಏನು ಆದಾಯ ತೆರಿಗೆ ಅಧಿಕಾರಿನಾ? ನಾನೇಕೆ ಅವರಿಗೆ ಹೇಳಬೇಕು? ಎಂದು ವಾಗ್ಬಾಣವನ್ನು ಡಿಕೆಶಿ ಬಿಟ್ಟಿದ್ದಾರೆ. ಕೇವಲ ಒಕ್ಕಲಿಗ ಸಾಮ್ರಾಜ್ಯದ ಅಧಿಪತ್ಯಕ್ಕಾಗಿಯೇ ಈ ಕುಮಾರದ್ವಯರ ಕಾಳಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ.
2028ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನು ಅಂದಾಜು 18 ತಿಂಗಳಿದ್ದು, ಈಗಲೇ ಸಮುದಾಯದ ಹಿಡಿತಕ್ಕೆ ಉಭಯ ನಾಯಕರು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿರುವುದು ವಿಶೇಷವಾಗಿದ್ದು, ಸಮುದಾಯ ಈ ಇಬ್ಬರು ನಾಯಕರಲ್ಲಿ ಯಾರು ನಮ್ಮ ನಾಯಕ ಎಂದು ಒಪ್ಪಿಕೊಂಡು ಜೈಕಾರ ಹಾಕುತ್ತೆ ಎಂಬುದಕ್ಕೆ ಕಾಲವೇ ಉತ್ತರ ಕೊಡಬೇಕಿದೆ.