LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಲವ್ 2 ಲಸ್ಸಿ ಮೋಷನ್ ಪೋಸ್ಟರ್ ಅಂಡ್ ಸಾಂಗ್ ರಿಲೀಸ್

RKB ಫಿಲ್ಮ್ಸ್ ನ ಭಾರತಿ ಶ್ರೀನಿವಾಸ್ ರಾಜ್ ನಿರ್ಮಾಣ ಮಾಡಿರುವ, ಹರಿಪ್ರಾಣ ನಿರ್ದೇಶನ ಮಾಡಿರುವ ಲವ್ 2 ಲಸ್ಸಿ ಸಿನಿಮಾದ ಹಾಡು ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ನಿರ್ದೇಶಕ ಹರಿಪ್ರಾಣ ಅವರಿಗೆ ಸುಮಾರು 18 ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಪುತ್ತೂರು, ಸುಳ್ಯ ಕಡೆಗೆ ಶೂಟ್ ಮಾಡಲಾಗಿದೆ. ಜೀವಿತ ಮತ್ತು ಆರ್ಯನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗನ್, ತಾರಾ, ವೈಷ್ಣವಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.ಒರಟ ಶ್ರೀ ಅವರು ಸಾಂಗ್ ರಿಲೀಸ್ ಮಾಡಿ ಮಾತನ್ನಾಡಿ, ಒಂದು ಹೊಸ ತಂಡ. ನಾವೂ ಕೂಡ ಅದನ್ನೆಲ್ಲಾ ಎದುರಿಸಿನೇ ಬಂದಿದ್ದೀವಿ. ನಿರ್ದೇಶಕನಿಗೆ ಮೊದಲ ಸಿನಿಮಾ ಎಸ್‌ಎಸ್‌ಎಲ್ಸಿ ಥರ. ಎಲ್ಲಾ ತಂತ್ರಜ್ಞರಿಗೂ ಒಳ್ಳೆಯದಾಗ್ಲಿ ಎಂದರು.
ಸಪ್ತಗಿರಿ ಗೌಡ ಮಾತನ್ನಾಡಿ, ಇದು ನನ್ನ ಮೊದಲ ಅನುಭವ. ಲವ್ ಟು ಲಸ್ಸಿ ಎರಡು ಸಿಹಿಯಾದ ಪದಗಳನ್ನ ಸೇರಿಸಿ ಒಂದೊಳ್ಳೆ ಟೈಟಲ್ ಕೊಟ್ಟಿದ್ದಾರೆ. ನಾನು ಹಲವು ಭಾಷೆಯ ಸಿನಿಮಾಗಳನ್ನ ನೋಡ್ತಾ ಇರ್ತೀನಿ. ಈ ಸಿನಿಮಾದ ಟೈಟಲ್ ತುಂಬಾ ಚೆನ್ನಾಗಿದೆ. ಇಂಡಸ್ಟ್ರಿಗೆ ಹೊಸ ಹೊಸ ಪ್ರತಿಭೆಗಳು ಬರಬೇಕು ಎಂದು ಹಾರೈಸಿದ್ದಾರೆ.ನಿರ್ದೇಶಕ ಹರಿಪ್ರಾಣ ಮಾತನ್ನಾಡಿ, ಈ ಸಿನಿಮಾ ಟ್ರೂ ಲವ್ ಸ್ಟೋರಿ. ಪುತ್ತೂರು ಹುಡುಗಿ ಬೆಂಗಳೂರು ಹುಡುಗನ್ನ ಇಟ್ಟುಕೊಂಡು ಸಿನಿಮಾ ಮಾಡಿದ್ದೀನಿ. ಇದು ಕೆಫೆ ಸ್ಟೋರಿ ಅಲ್ಲ. ಈ ರಿಯಲ್ ಲವ್ ಸ್ಟೋರಿ ಹುಡುಗಿಯಿಂದ ಅನುಮತಿ ಪಡೆದು ಮಾಡಿದ್ದೇವೆ. 2006-7ನಲ್ಲಿ ನಡೆದಂತ ಘಟನೆ. ಟ್ರಾಜಿಡಿ ಲವ್ ಸ್ಟೋರಿನೆ. ನನಗೆ ಹಾಡುಗಳು, ಕಥೆ ಬರೆಯೋದು ತುಂಬಾನೇ ಇಷ್ಟ ಎಂದಿದ್ದಾರೆ. ಸಂಗೀತ ನಿರ್ದೇಶಕ ವಿನು ಮನಸ್ಸು ಮಾತನ್ನಾಡಿ, ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಇಡೀ ಸಿನಿಮಾ ಚೆನ್ನಾಗಿ ಆಗಿದೆ. ನೀವೆಲ್ಲಾ ಕೇಳಿ ಎಂಜಾಯ್ ಮಾಡಿ ಎಂದಿದ್ದಾರೆ.ಸಿನಿಮಾದ ನಾಯಕಿ ಜೀವಿತಾ ಮಾತನ್ನಾಡಿ, ಶೂಟಿಂಗ್ ಮಾಡುವಾಗ ಸಿನಿಮಾದ ಸ್ಟೋರಿ ತುಂಬಾ ಚೆನ್ನಾಗಿತ್ತು. ಈಗ ಹಾಡುಗಳನ್ನ ನೋಡುವಾಗ ಇನ್ನು ಅದ್ಬುತವಾಗಿ ಮೂಡಿ ಬಂದಿದೆ. ಲೂಡೋದಲ್ಲೂ ಇಬ್ಬರು ಜೊತೆಯಾಗಿ ಕೆಲಸ ಮಾಡಿದ್ದೀವಿ. ಹೆಚ್ಚು ಅಳುವುದಂತ ಇಲ್ಲ. ಒಂದು ಲವ್ ಸ್ಟೋರಿ ನಲ್ಲಿ ಏನೆಲ್ಲಾ ಇದೆಯೋ ಅದೆಲ್ಲಾ ಇದೆ. ಅಷ್ಟೇ ಅಲ್ಲ ಫ್ಯಾಮಿಲಿಗೆ ಕನೆಕ್ಟ್ ಆಗುವಂತ ವಿಚಾರಗಳು ಇದೆ ಎಂದಿದ್ದಾರೆ.
ನಟ ಆರ್ಯನ್ ಮಾತನ್ನಾಡಿ, ನಾನು ಕೂಡ ಸಿನಿಮಾ ರಿಪೋರ್ಟರ್ ಆಗಿ ಕೆಲಸ ಮಾಡಿದ್ದೀನಿ. ಲವ್ 2 ಲಸ್ಸಿ ಸಿನಿಮಾ ರಿಯಲ್ ಆಗಿ ನಡೆದಿರೋದು ಅಂತ ಕೇಳಿ ಖುಷಿಯಾಯ್ತು. ನಾನು ಕೂಡ ಅದರ ಒಂದು ಭಾಗ ಅನ್ನೋದಕ್ಕೆ ಖುಷಿ. ಸ್ಟೋರಿ ಏನೋ ತುಂಬಾ ಚೆನ್ನಾಗಿದೆ. ಆದರೆ ಹೊಸಬರು ಎಂದ ಮೇಲೆ ನುರ್ಮಾಪಕರು ಸಿಗೋದೆ ಕಷ್ಟ. ಆದರೆ ಭಾರತಿ ಮೇಡಂ ಅವರು ನಿರ್ಮಾಣ ಮಾಡಿರೋದು ಖುಷಿ ಇದೆ ಎಂದಿದ್ದಾರೆ. ಸಂಕಲನ ಎಂ.ಎ.ಅರ್ಜುನ್ ಧೋನಿ, ಸಂಗೀತ ವಿನು ಮನಸ್ಸು ನೀಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು