LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಮಹಿಳೆಯರಿಗೆ ಮೀಸಲಾತಿ ಬಿಲ್ ಪಾಸ್ ಸಚಿವ ಶೋಭಾ ಕರಂದ್ಲಾಜೆ ಸಂತಸ

ಬೆಂಗಳೂರು: ಮಹಿಳೆಯರಿಗೆ ಬಹಳ ವರ್ಷಗಳಿಂದ ಮೀಸಲಾತಿ ನೀಡಬೇಕು ಎಂಬುದು ಕೂಗಾಗಿತ್ತು. ಈ ಬೇಡಿಕೆ ಈಡೇರುತ್ತಾ ಎಂಬ ಸಂಶಯ ಇತ್ತು. 15 ವರ್ಷಗಳ ಹಿಂದೆ ಪಾರ್ಲಿಮೆಂಟ್‌ನಲ್ಲಿ ಚರ್ಚೆಗೆ ಬಂದಾಗ ಬಿಲ್ ಹರಿದು ಹಾಕಿದ್ದರು. ಮಹಿಳೆಯರಿಗೆ ಮೀಸಲಾತಿ ನೀಡಬಾರದು ಎಂಬುದು ಅವರೆಲ್ಲಾ ನಿಲುವಾಗಿತ್ತು. ಮಹಿಳೆಯ ಮೀಸಲಾತಿ ಬಿಲ್ ನೆನಗುದಿಗೆ ಬಿದ್ದಿತ್ತು. ಯುಪಿಎ ಸರ್ಕಾರದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ನರೇಂದ್ರ ಮೋದಿ ಪ್ರಧಾನಿಗಳಾದ ಬಳಿಕ ಈ ಬಿಲ್‌ಗೆ ಮಾನ್ಯತೆ ಕೊಟ್ಟರು ಎಂದು ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ರೀತಿಯ ಸಂಭ್ರಮದ ವಿಚಾರದೊಂದಿಗೆ ಬಂದಿದ್ದೇವೆ. ಮಹಿಳೆಯರು ಸಬಲರಾಗಬೇಕೆಂದು ಒತ್ತು ಕೊಟ್ಟಿದ್ದಾರೆ. ಈಗ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿದ್ದಾರೆ. ನಾನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವೆ ಇದ್ದೇ. 2008 ರಲ್ಲಿ ನಾನು ಗ್ರಾಮೀಣಾಭಿವೃದ್ಧಿ ಸಚಿವೆ ಆಗಿದ್ದೇ. ಗ್ರಾಮ ಪಂಚಾಯತಿ ಅಧ್ಯಕ್ಷ ಯಾರು ಮಹಿಳೆಯರಾಗಿ ಉತ್ತಮ ಕೆಲಸ ಮಾಡುತ್ತಾರೆ ಅವರಿಗೆ ನಾನೇ ಅವಾರ್ಡ್ ಕೊಟ್ಟಿದ್ದೇನೆ. ಗ್ರಾಮ ಪಂಚಾಯತಿಯಲ್ಲೂ ಮೀಸಲಾತಿ ಇದೆ. ಮೀಸಲಾತಿ ಎಲ್ಲಾ ಹುದ್ದೆಗಳಿಗೂ ಬರುತ್ತದೆ. ಯಾರಿಗೆ ಶಿಕ್ಷಣವೇ ಇಲ್ಲವೇ ಇಲ್ಲ, ಅವರಿಗೆ ಆವಾರ್ಡ್ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷೆಗೆ ಗೊತ್ತಿತ್ತು, ನನ್ನ ಊರಿನಲ್ಲಿ ಯಾವ ಕೆಲಸ ಆಗಬೇಕು ಎಂದು. ಅಲ್ಲಿ ಶಿಕ್ಷಣ ಇಲ್ಲ. ಲೆಕ್ಕ ಗೊತ್ತಿಲ್ಲ. ಆದ್ರೆ, ಆಕೆಗೆ ಭಾವನೆ ಇತ್ತು. ಆ ಗ್ರಾಮ ಪಂಚಾಯತಿ ಅಧ್ಯಕ್ಷೆ ಆಗುವ ಕಾಮಗಾರಿಯ ನಿರ್ವಹಣೆ ಮಾಡಿದ್ದಳು. ಅವರಿಗೆ ಪ್ರಶಸ್ತಿ ಕೊಟ್ಟಿದ್ದೇವೆ. ಈಗ ಅದೇ ರೀತಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಎಲ್ಲೆಲ್ಲಿ ಮಹಿಳೆಯರು ಗೆದ್ದಿದ್ದಾರೆ. ಅವರೆಲ್ಲಾ ಸಾಧನೆ ಮಾಡಬೇಕು. ನಾನು ಇಂಧನ ಇಲಾಖೆ ಸಚಿವೆ ಆಗಿದ್ದೇನೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು