LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

"ಟ್ರಾಫಿಕ್ ಸಿಗ್ನಲ್ ಉದ್ಘಾಟಿಸಿದ ಶಾಸಕ ಎಸ್.ಆರ್.ವಿಶ್ವನಾಥ್"

ಬೆಂಗಳೂರು: ಮಾದಾವರ ಮೆಟ್ರೋ ನಿಲ್ದಾಣ ಮತ್ತು ಬೆಂಗಳೂರು ಅAತಾರಾಷ್ಟಿçÃಯ ಪ್ರದರ್ಶನ ಕೇಂದ್ರ (ಬಿಐಇಸಿ) ಪ್ರವೇಶದ್ವಾರದ ಬಳಿ ವಾಹನ ಸಂಚಾರವನ್ನು ಸುಗಮಗೊಳಿಸುವ ಇದ್ದೇಶದಿಂದ ಬಿಐಇಸಿ ಮುಂಭಾಗದಲ್ಲಿ ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸ್ಥಾಪಿಸಲಾಗಿದೆ. ಈ ಟ್ರಾಫಿಕ್ ಸಿಗ್ನಲ್ ಅನ್ನು ಯಲಹಂಕ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಆರ್. ವಿಶ್ವನಾಥ್ ಅವರು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀ ವಿಶ್ವನಾಥ್ ಅವರು, "ನೈಸ್ ರಸ್ತೆ, ಬಿಐಇಸಿ ಮತ್ತು ಮಾದಾವರ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಜಾಗದಲ್ಲಿ ಹೊಸ ಟ್ರಾಫಿಕ್ ಸಿಗ್ನಲ್ ಅಳವಡಿಸಿರುವುದು ಟ್ರಾಫಿಕ್ ಸುಗಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಬಿಐಇಸಿಯಲ್ಲಿ ಬಹಳ ದೊಡ್ಡ ದೊಡ್ಡ ಕಾರ್ಯಕ್ರಮಗಳು ಆಯೋಜನೆಯಾಗುತ್ತಿದ್ದು, ಅಲ್ಲಿ ದೊಡ್ಡ ಪ್ರಮಾಣದ ಜನಸಮೂಹ ಸೇರಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಇದೊಂದು ಬಹಳ ಉತ್ತಮ
ಕೆಲಸ. ಅಲ್ಲದೇ ಇದು ಆರಂಭ ಮಾತ್ರ, ನೆಲಮಂಗಲದವರೆಗೆ ಸಂಪೂರ್ಣ ಹೈವೇಯುದ್ದಕ್ಕೂ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸುವ ಯೋಜನೆಗಳು ಪ್ರಗತಿಯಲ್ಲಿವೆ" ಎಂದು ಹೇಳಿದರು.

ಬಿಐಇಸಿಯ ಪ್ರಯತ್ನಗಳನ್ನುಮಮೆಚ್ಚಿಕೊಂಡು ಮಾತನಾಡಿದ ಬೆಂಗಳೂರು ಗ್ರಾಮಾAತರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ.ಕೆ. ಬಾಬಾ ಐಪಿಎಸ್ ಅವರು, "ಬಿಐಇಸಿ ಪ್ರವೇಶದ್ವಾರದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವುದು ಅತ್ಯಂತ ಅಗತ್ಯವಾಗಿತ್ತು. ಅದರಲ್ಲೂ ವಿಶೇಷವಾಗಿ ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಿಸಲು ಈ ಟ್ರಾಫಿಕ್ ಸಿಗ್ನಲ್ ಬಹಳ ಸಹಾಯ ಮಾಡುತ್ತದೆ" ಎಂದು ಹೇಳಿದರು. ಐಎಂಟಿಎAಎ ಮತ್ತು ಬಿಐಇಸಿಯ ಡೈರೆಕ್ಟರ್ ಜನರಲ್ & ಸಿಇಓ ಶ್ರೀ ಜಿಬಕ್ ದಾಸಗುಪ್ತ ಅವರು ಮಾತನಾಡಿ, `ಈ ಹೊಸ ಟ್ರಾಫಿಕ್ ಸಿಗ್ನಲ್ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸುರಕ್ಷತೆ ಮತ್ತು ಅನುಕೂಲತೆ ಒದಗಿಸಲಿದೆ. ಬಿಐಇಸಿ ಸುತ್ತಮುತ್ತ ಇರುವ ನಿವಾಸಿಗಳಿಗೂ ಇದು
ಅನುಕೂಲಕರ ವ್ಯವಸ್ಥೆ ಒದಗಿಸುತ್ತದೆ.

ಕಾರ್ಯಕ್ರಮ ಆಯೋಜಕರು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ಈ ಸಿಗ್ನಲ್ ಬಹಳ ಉಪಯುಕ್ತವಾಗಲಿದೆ' ಎಂದು ಹೇಳಿದರು. ಜೊತೆಗೆ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ (ಎನ್‌ಎಚ್‌ಎಐ) ಮತ್ತು ಬೆಂಗಳೂರು ಗ್ರಾಮಾAತರ ಪೊಲೀಸ್ ಇಲಾಖೆ ಬಿಐಇಸಿಗೆ ಒದಗಿಸುತ್ತಿರುವ ಬೆಂಬಲವನ್ನು ಸ್ಮರಿಸಿಕೊAಡರು. ಎನ್‌ಎಚ್‌ಎಐ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಬಿಐಇಸಿ ಕುರಿತು ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ಐಎಂಟಿಎAಎ) ನಿರ್ಮಿಸಿದ ಬಿಐಇಸಿ, ಭಾರತದ ಪ್ರಮುಖ ಬಿ೨ಬಿ ಈವೆಂಟ್‌ಗಳು ಮತ್ತು ಎಂಐಸಿಇ ಕಾರ್ಯಕ್ರಮಗಳಿಗಾಗಿ ಇರುವ ಎಕ್ಸಿಬಿಷನ್ ಮತ್ತು ಕಾನ್ಫರೆನ್ಸ್ ಸೆಂಟರ್ ಆಗಿದೆ.
ಬಿಐಇಸಿ ಸ್ಟಾರ್ಟಪ್‌ಗಳನ್ನೂ ಸೇರಿದಂತೆ ಜಗತ್ತಿನಾದ್ಯAತದ ಇರುವ ವಿವಿಧ ಕ್ಷೇತ್ರಗಳ ದೊಡ್ಡ, ಮಧ್ಯಮ ಮತ್ತು ಸಣ್ಣ ವ್ಯವಹಾರಗಳ ಉತ್ಪನ್ನ ಬಿಡುಗಡೆ, ತಂತ್ರಜ್ಞಾನ ಪ್ರದರ್ಶನ
ಮತ್ತು ಉದ್ಯಮ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸುತ್ತದೆ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಎರಡೂ ವಿವಿಧ ಕಾರ್ಯಕ್ರಮಗಳಿಗೆ ಬಿಐಇಸಿಗೆ ಬೆಂಬಲ ನೀಡಿವೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು