LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"ಮೈ ನೇಮ್ ಈಸ್ ಕೆ.ಡಿ ಟ್ರೇಲರ್ ಬಿಡುಗಡೆ"

ಇಂತಿ ನಿಮ್ಮ ಭೈರಾʼ ತಂಡದ ಎರಡನೇ ಪ್ರಯತ್ನ ಎನ್ನುವಂತೆ ಮೈ ನೇಮ್ ಈಸ್ ಕೆ.ಡಿ ಚಿತ್ರದ ಟ್ರೇಲರ್‌ನ್ನು ಫಿಲಿಂ ಛೇAಬರ್ ಮಾಜಿ ಅಧ್ಯಕ್ಷ ಬಾ.ಮ.ಹರೀಶ್, ಮಹಾರಾಣಿ ಕಾಲೇಜು ಉಪಕುಲಪತಿ ಶಿವಶಂಕರಪ್ಪ ಮತ್ತು ನಿರ್ದೇಶಕ ಟಿ.ಶಿ.ವೆಂಕಟೇಶ್ ಬಿಡುಗಡೆ ಮಾಡಿ ನಿರ್ಮಾಪಕರ ಸಾಧನೆಯನ್ನು ಕೊಂಡಾಡಿ ತಂಡಕ್ಕೆ ಶುಭ ಹಾರೈಸಿದರು. ಎಸ್‌ಎಸ್‌ಕೆಬಿ ಪ್ರೊಡಕ್ಷನ್ ಅಡಿಯಲ್ಲಿ ವೆಂಕಟೇಶ್.ಡಿ ನಿರ್ಮಾಣ ಮಾಡಿದ್ದಾರೆ. ಕುಮಾರ್.ಡಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕೆ.ಜೆ.ಚಿಕ್ಕು ಆಕ್ಷನ್ ಕಟ್ ಹೇಳಿದ್ದಾರೆ.

ನಿರ್ದೇಶಕರು ಹೇಳುವಂತೆ ಇದೊಂದು ಕಾಮಿಡಿ, ಡ್ರಾಮಾ ಸನ್ನಿವೇಶಗಳನ್ನು ಒಳಗೊಂಡಿದೆ. ಕನಕಪುರ, ಹೆಸರುಘಟ್ಟ, ಆನೇಕಲ್, ಬೆಂಗಳೂರು ಕಡೆಗಳಲ್ಲಿ ೩೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳು ಇರಲಿದೆ. ಡಿಸೆಂಬರ್ ತಿಂಗಳಲ್ಲಿ ತೆರೆಗೆ ತರಲು ಯೋಜನೆ ಹಾಕಲಾಗಿದೆ ಅಂತ ಕೆ.ಜಿ.ಚಿಕ್ಕು ಮಾಹಿತಿ ನೀಡಿದರು. ಆರ್ಯನ್‌ವೆಂಕಟೇಶ್ ನಾಯಕ. `ಗಿಡುಗ'ದಲ್ಲಿ ಕಾಣಿಸಿಕೊಂಡಿದ್ದ ಭವಾನಿ ನಾಯಕಿ. ಉಳಿದಂತೆ ಹೊನ್ನವಳ್ಳಿ ಕೃಷ್ಣ, ಗಿರೀಶ್‌ಜತ್ತಿ, ವಿಶ್ವ, ಯತಿರಾಜ್, ಅರಸು ಮಹಾರಾಜ್, ಸುಪ್ರೀತ್‌ಕಾಟಿ, ರೋಹಿಣಿ,ಮಾಸ್ಟರ್ ಲಕ್ಷ್.ಕೆ.ಸಿ ಮುಂತಾದವರು ನಟಿಸಿದ್ದಾರೆ.

ಡಾ.ವಿ.ನಾಗೇಂದ್ರಪ್ರಸಾದ್, ಪುನೀತ್‌ರಂಗನಾಥ್, ಮನುದೇವನಹಳ್ಳಿ ಸಾಹಿತ್ಯದ ಗೀತೆಗಳಿಗೆ ಹಿತನ್ ಹಾಸನ್ ಸಂಗೀತ ಸಂಯೋ ಜಿಸಿದ್ದಾರೆ. ಛಾಯಾಗ್ರಹಣ ಸಂತೋಸ ಪಂಡಿ, ಸAಕಲನ ಕಿರಣ್‌ಕುಮಾರ್. ಜೆ, ಕರ‍್ಯಕಾರಿ ನಿರ್ಮಾಪಕ ಅರುಣ್‌ಕುಮಾರ್,ಹಿನ್ನೆಲೆ ಶಬ್ದ ಪ್ರವೀಣ್, ಸಾಹಸ ಗಣೇಶ್ ಮಾಸ್ಟರ್ಅವರದಾಗಿದೆ. ಈ ವೇಳೆ ಮಾತನಾಡಿದ ಆರ್ಯನ್ ವೆಂಕಟೇಶ್ ಕಷ್ಟದ ದಿನಗಳನ್ನು ನೆನೆಸಿಕೊಂಡು, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದೇನೆ. ಹಿಂದಿನ ಸಿನಿಮಾ ಗಳಿಕೆ ಕಡಿಮೆ ಬಂದಿತ್ತು. ಒಟಿಟಿಗೆ ಬಿಟ್ಟಾಗ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಇದರ ಸ್ಪೂರ್ತಿಯಿಂದಲೇ ಈಗ ಮತ್ತೋಮ್ಮೆ ನಿಮ್ಮ ಮುಂದೆ ಬಂದಿದ್ದೇವೆ.

ಕನಕನಹಳ್ಳಿ ದಾಸೆಗೌಡರ ಮಗ ಎಂಬುದನ್ನು ಚಿಕ್ಕದಾಗಿ ಕೆ.ಡಿ ಎಂದು ಹೆಸರನ್ನು ಇಡಲಾಗಿದೆ. ಗ್ರಾಮೀಣ ಭಾಗದ ಕತೆಯಲ್ಲಿ ಅಮ್ಮನನ್ನು ಉಳಿಸಿಕೊಳ್ಳುವ ಸಲುವಾಗಿ ಏಳನೇ ತರಗತಿ ಓದುತ್ತಿರುವ ಪುತ್ರನು ಶಾಸಕನ ಬಳಿ ಸಹಾಯಕ್ಕೆ ಹೋಗುತ್ತಾನೆ. ಆದರೆ ಆತ ಅವಮಾನ ಮಾಡುತ್ತಾನೆ. ಇದರಿಂದ ಕುಪಿತಕೊಂಡು ನಾನು ಮುಂದೆ ಒಳ್ಳೆಯ ರೀತಿಯಲ್ಲಿ ಹಣಗಳಿಸಿ ಎಂಎಲ್‌ಎ ಆಗಬೇಕೆAದು ಪಣ ತೊಡುತ್ತಾನೆ. ಅದಕ್ಕಾಗಿ ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಾನೆ. ಅಂತಿಮವಾಗಿ ತನ್ನ ಹಾದಿಯಲ್ಲಿ ಯಶಸ್ಸು ಗಳಿಸುತ್ತಾನಾ ಎಂಬುದು ಒಂದು ಎಳೆಯ ಸಾರಾಂಶವಾಗಿದೆ ಎಂದು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು