LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ನಾದಬ್ರಹ್ಮ ಹಂಸಲೇಖ ಸಂಗೀತವಿರೋ `ಸೋಲ್ ಮೇಟ್ಸ್' ಚಿತ್ರದ ಟ್ರೇಲರ್ ರಿಲೀಸ್

ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿರುವ ಪಿ.ವಿ. ಶಂಕರ್ ನಿರ್ದೇಶನ ಮಾಡಿರುವ `ಸೋಲ್ ಮೇಟ್ಸ್' ಸಿನಿಮಾದ ಟ್ರೆöÊಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಇದಾಗಲೇ `ಕಿಲ ಕಿಲ..' ಹಾಗೂ ಇತರೆ ಹಾಡು, ಟೀಸರ್ ನಿಂದ ಗಮನ ಸೆಳೆದಿರುವ ಚಿತ್ರಕ್ಕೆ `ಪರಿಸರ ಪ್ರೇಮಿ' ಎಂಬ ಟ್ಯಾಗ್ ಲೈನ್ ಇದೆ. ಜಿ.ಆರ್. ಅರ್ಚನಾ ಹಾಗೂ ಶಂಕರ್ಪಿ.ವಿ. ಅವರು ಈ ಸಿನಿಮಾವನ್ನುನಿರ್ಮಾಣ ಮಾಡಿದ್ದಾರೆ.`ರಂಗ್ ಬಿ ರಂಗ್' ಖ್ಯಾತಿಯಶ್ರೀಜಿತ್ ಸೂರ್ಯ, `ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಖ್ಯಾತಿಯಪ್ರಸನ್ನ ಶೆಟ್ಟಿ, ರಜನಿ, ಯಶ್ವಿಕಾ ನಿಷ್ಕಲ, ಅಲ್ಮಾಸ್, ಯಶ್ ಶೆಟ್ಟಿ, ಅರವಿಂದ್ ರಾವ್, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಪ್ರಶಾಂತ್ ನಟನ, ಅರಸು ಮಹಾರಾಜ್, ಗೌತಮ್, ತಾರಕ್, ನವೀನ್ ಡಿ. ಪಡೀಲ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರ ಇದೇ ವಾರ ಎಂದರೆ ಸೆಪ್ಟೆಂಬರ್ ೧೯ರಂದು ರಾಜ್ಯಾದ್ಯAತ ತೆರೆಗೆ ಬರುತ್ತಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಶಂಕರ್"ಈ ಚಿತ್ರ ಪರಿಸರ ಕಾಳಜಿಯ ಸಂದೇಶದೊಡನೆ ರೊಮ್ಯಾನ್ಸ್, ಆಕ್ಷನ್, ಥ್ರಿಲ್ಲರ್ ಅಂಶಗಳನ್ನು ಒಳಗೊAಡಿದೆ. ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಬ್ಯಾಟಿಗಾಗಿ ಒಂದು ಮರ ಕಡಿದಿದ್ದೆ. ಇದಕ್ಕಾಗಿ ನನಗೆ ಪಶ್ಚಾತ್ತಾಪ
ಇತ್ತು. ಇದೇ ಈ ಚಿತ್ರದ ಕಥೆಗೆ ಸ್ಫೂರ್ತಿಯಾಗಿದೆ. " ಎಂದರು ಅಲ್ಲದೆ "ಈ ಸಿನಿಮಾದಲ್ಲಿ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಚಿತ್ರದ ಹಾಡೊಂದರ ದೃಶ್ಯಗಳನ್ನು ಸಹ ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಆ ಚಿತ್ರದ ನಿರ್ಮಾಪಕರಲ್ಲಿ ಅನುಮತಿ ಸಹ ಪಡೆದುಕೊಂಡಿದ್ದೇವೆ. ನಮ್ಮ ಚಿತ್ರಕ್ಕೆ ವಿಷ್ಣುವರ್ಧನ್ ಅವರ ಆಶೀರ್ವಾದ ಇದೆ." ಎಂದರು. " ಸಿನಿಮಾದಲ್ಲಿ ಹುಡುಗ-ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತಾಗಿ ಕಥೆಇದೆ. ಅದು ಈಗಿನ ಸಮಾಜಕ್ಕೆ ತುಂಬ ಅವಶ್ಯಕವಾಗಿದೆ." ಎನ್ನುವುದಾಗಿ ನಿರ್ದೇಶಕರು ಹೇಳಿದ್ದಾರೆ. ನಟ ಯಶ್ ಶೆಟ್ಟಿ ಮಾತನಾಡಿ "ಇದೊಂದು ಜಂಗಲ್ ಮAಗಲ್ ನಂತಹಾ ಸಿನಿಮಾ ಇದರಲ್ಲಿ ನಾನು ಸುಪಾರಿ ಕಿಲ್ಲರ್ ಪಾತ್ರ ಮಾಡಿದ್ದೇನೆ. ಆದರೆ ಇದು ಕೇವಲ ವಿಲನ್ ಪಾತ್ರವಲ್ಲ. ಚಿತ್ರದ ಕ್ಲೆöÊಮ್ಯಾಕ್ಸ್ ನಡೆಯುವುದೇ ವಿಲನ್ ಮೂಲಕ ಎನ್ನುವುದು ಇದರಲ್ಲಿನ ವಿಶೇಷವಾಗಿದೆ." ಎಂದರು.

ನಾಯಕ ಶ್ರೀಜಿತ್ ಶೆಟ್ಟಿ "ನಾನು ಸತ್ಯ ಎಂಬ ಪಾತ್ರವನ್ನು ಮಾಡಿದ್ದೇನೆ. ಹೆಸರಿಗೆ ತಕ್ಕಂತೆ ಆತ ಸತ್ಯವಂತನೇ ಅಲ್ಲದೆ ಮಹಾ ಪರಿಸರ ಪ್ರೇಮಿ. ಅಲ್ಲದೆ `ಸೋಲ್‌ಮೇಟ್ಸ್' ಅಂದರೆ ಪರಿಸರ ಮತ್ತು ಅವನ ಹುಡುಗಿ ಇಬ್ರು ಅವನ ಸೋಲ್‌ಮೇಟ್ಸ್ಗಳಾಗಿರಲಿದೆ." ಎಂದರು. ನಾಯಕಿ ಯಶ್ವಿಕಾ ನಿಷ್ಕಲ "ನಾನಿದರಲ್ಲಿ ತುಂಬ ಮೃದು ಮನಸಿನ ಹುಡುಗಿ ಭೂಮಿ ಎಂಬ ಪಾತ್ರವನ್ನು
ನಿರ್ವಯಿಸಿದ್ದೇನೆ. ಚಿತ್ರ ಸುಂದರವಾಗಿ ಮೂಡಿ ಬಂದಿದೆ. ನಿಮ್ಮೆಲ್ಲರ ಸಹಕಾರ ಬೇಕು" ಎಂದು ಮನವಿ ಮಾಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು