LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಕನ್ನಡ ಸಾಹಿತ್ಯಕ್ಕೆ ರಾಷ್ಟ್ರಕವಿ ಗೋವಿಂದ ಪೈ ಕೊಡುಗೆ ಅಪಾರ ಹಾಗೂ ಅನನ್ಯವಾದುದು: ಹಂಪ ನಾಗರಾಜಯ್ಯ

ಬೆಂಗಳೂರು: ಕನ್ನಡ ಸಾಹಿತ್ಯ ವಿಸ್ತಾರಕ್ಕೆ ರಾಷ್ಟ್ರಕವಿ ಗೋವಿಂದಪೈ ಅವರ ಕೊಡುಗೆ ಅಪಾರವಾದುದು ಹಾಗೂ ಅನನ್ಯವಾದುದಾಗಿದೆ ಎಂದು ಭಾಷಾ ವಿಜ್ಞಾನಿ ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.ಕನ್ನಡ ಸಂಘರ್ಷ ಸಮಿತಿಯು ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಎಂ. ಗೋವಿಂದಪೈ ಅವರ 144ನೇ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನ್ನಡವನ್ನು ಕಟ್ಟಿ, ಬೆಳೆಸಿ ಅದರ ತೇಜಸ್ಸಿಗೆ ಗೋವಿಂದಪೈ ಕಾರಣರಾಗಿದ್ದಾರೆ. ಅವರು ಮೂಲತ: ಸಂಶೋದಕರಾಗಿದ್ದರು. ಒಳ್ಳೆಯ ನಾಟಕಗಳನ್ನೂ ಸಹ ರಚಿಸಿದ್ದಾರೆ. ಅವರ ಸಂಶೋಧನಾ ಬರಹಗಳು ಮತ್ತು ಸೃಜನಾತ್ಮಕ ಸಾಹಿತ್ಯ ಭಂಡಾರವು ಅಧ್ಯಯನ ಮಾಡುವವರಿಗೆ ಹಾಗೂ ಸಂಶೋಧಕರಿಗೆ ಪ್ರೇರಣೆಯಾಗಿದೆ.
ಎಂ. ಗೋವಿಂದಪೈ ಹುಟ್ಟುಹಬ್ಬವನ್ನು ನಿರಂತರವಾಗಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿಕೊಂಡು ಬರುತ್ತಿದ್ದು, ಇದು ಕನ್ನಡ ಸಾಹಿತ್ಯದ ದೊಡ್ಡ ಕವಿವಯನ್ನು ಗೌರವಿಸುವ ಹಾಗೂ ಅವರನ್ನು ಯುವ ಪೀಳಿಗೆಗೆ ಪರಿಚಯಿಸುವ ಸೂಕ್ತ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ವಿಜೇತರಾದ ಜಯರಾಮ ರೈ ಕುಂಜಾಡಿಗೆ ಪ್ರಥಮ ಬಹುಮಾನ, ಡಾ. ಶ್ರೀನಿವಾಸಪ್ರಸಾದ್ ಡಿ.ಎಸ್.ಗೆ ದ್ವಿತೀಯ ಬಹುಮಾನ ಹಾಗೂ ಮೋಹನ ಯರಗೊಪ್ಪಗೆ ತೃತೀಯ ಬಹುಮಾನಗಳನ್ನು ಹಂಪ ನಾಗರಾಜಯ್ಯ ವಿತರಿಸಿದರು.ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎ.ಐ.ಬಳಸಿಕೊಂಡು ಕೃತಿಚೌರ್ಯ ಮಾಡುತ್ತಿರುವುದು ಬಹಳ ಖೇದಕರ ಸಂಗತಿಯಾಗಿದೆ. ಕವಿಯಾದವನ್ನು ಅದ್ಯಯನ ಶೀಲನಾಗಿರಬೇಕು. ತನ್ಮೂಲಕ ಜ್ಞಾನ ವೃದ್ಧಿ ಮಾಡಿಕೊಂಡು, ಸ್ವಸಾಮರ್ಥ್ಯದಿಂದ ಸಾಹಿತ್ಯ ಕೃಷಿ ಮಾಡಬೇಕು. ತಮ್ಮ ಕವಿತೆಗಳು ಹಾಗೂ ಬರಹಗಳು ಸಮಾಜ ಸೌಂದರ್ಯಗೊಳಿಸಲು ಪ್ರೇರಕಶಕ್ತಿಯಾಗುವಂತಿರಬೇಕು ಹಾಗೂ ಶೋಷಿತರಿಗೆ ನ್ಯಾಯ ಒದಗಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟ ಅವರು, ಇಂದು ಪ್ರಪಂಚದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಅತಂಕಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಮಿತಯ ಅಧ್ಯಕ್ಷ ಎ.ಎಸ್. ನಾಗರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಮಣ್ಣ ಎಚ್. ಕೋಡಿಹೊಸಹಳ್ಳಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಧಾನ ಕಾರ್ಯ
ದರ್ಶಿ ತಾ.ಸಿ.ತಿಮ್ಮಯ್ಯ ಆಶಯ ಮಾತುಗಳ ಮನ್ನಾಡಿದರು. ಜಂಟಿ ಕಾರ್ಯದರ್ಶಿ ಇಂದಿರಾ ಶರಣ್ ಜಮ್ಮಲದಿನ್ನಿ ಅವರು ಕಾರ್ಯಕ್ರಮ ನಿರೂಪಿಸಿದರು. ಗಾಯಕ ಎಚ್.ಸಿ. ಉಮೇಶ್ ನಾಡಗೀತೆ ಪ್ರಸ್ತುತಪಡಿಸಿದರು.
ಕನ್ನಡ ಸಂಘರ್ಷ ಸಮಿತಿಯು ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಎಂ. ಗೋವಿಂದಪೈ ಅವರ 144ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಗೋವಿಂದಪೈ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಊದ್ಘಾಟಿಸಲಾಯಿತು. ಪ್ರಧಾನ ಕಾರ್ಯದರ್ಶಿ ತಾ.ಸಿ. ತಿಮ್ಮಯ್ಯ, ಪ್ರಾಧ್ಯಾಪಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್, ಭಾಷಾ ವಿಜ್ಞಾನಿ ಹಂಪ ನಾಗರಾಜಯ್ಯ, ಹಿರಿಯ ಪತ್ರಕರ್ತ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಹಾಗೂ ಸಮಿತಿಯ ಅಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ಭಾಗಿಯಾಗಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು