LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಶ್ರಮದ ಹಾದಿ, ಯಶಸ್ಸಿನ ಸಾರಥಿಗೆ `ನವ ನಕ್ಷತ್ರ' ಗೌರವ

ದಕ್ಷಿಣ ಪಥದ ಹರಿಕಾರ, "ಕರ್ನಾಟಕ ಕಂಡ ಅಪ್ರತಿಮ ಜನನಾಯಕ, ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಟಿವಿ೯ ವತಿಯಿಂದ ನೀಡಲಾದ 'ನವ ನಕ್ಷತ್ರ' ಪ್ರಶಸ್ತಿ ಲಭಿಸಿರುವುದು ಪ್ರತಿ ಕನ್ನಡಿಗನಿಗೆ ಹಾಗೂ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಹೆಮ್ಮೆಯ ಕ್ಷಣ ಅಂದರೆ ತಪ್ಪಾಗಲಾರದು.
`ಹಗಲಿರುಳು ನಾಡಿನ ಏಳಿಗೆಗಾಗಿ ಶ್ರಮಿಸಿದ, ಹಳ್ಳಿಯಿಂದ ದಿಲ್ಲಿಯವರೆಗೆ ಕರ್ನಾಟಕದ ಕೀರ್ತಿಯನ್ನು ಪಸರಿಸಿದ ನೀವು ಜನರ ಪಾಲಿಗೆ ಎಂದಿಗೂ ಆಪದ್ಬಾಂಧವರು. ಅಧಿಕಾರವಿರಲಿ ಇಲ್ಲದಿರಲಿ, ನೀವು ಎಂದಿಗೂ ಜನರ ಮನಸ್ಸಿನ 'ನವ ನಕ್ಷತ್ರ'. ನಿಮ್ಮ ಸುದೀರ್ಘ ರಾಜಕೀಯ ಜೀವನ ಮತ್ತು ಜನಸೇವೆ ನಮಗೆಲ್ಲರಿಗೂ ಸ್ಫೂರ್ತಿ. ಈ ಪ್ರಶಸ್ತಿ ನಿಮ್ಮ ಜನಪ್ರಿಯತೆಗೆ ಸಂದ ಗೌರವ. ಜನರ ಸೇವೆಯನ್ನೇ ಪರಮಧರ್ಮ ಎಂದು ನಂಬಿದ ನಿಮಗೆ ಈ ಪ್ರಶಸ್ತಿ ಕೇವಲ ಒಂದು ಗೌರವವಲ್ಲ, ಇದು ಕೋಟ್ಯಂತರ ಕನ್ನಡಿಗರ ಪ್ರೀತಿಯ ಪ್ರತಿಬಿಂಬ'. ಅವರು ನೀಡಿರುವ ಕೆಲವು ಕೊಡುಗೆಗೆಳನ್ನು ಇಲ್ಲಿ ನೆನಪಿಸಲಿಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆ ಚಿರಸ್ಮರಣೀಯ:
ರೈತ ಬಜೆಟ್: ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ್ರತ್ಯೇಕ ರೈತ ಬಜೆಟ್ ಮಂಡಿಸಿ, ಕೃಷಿಕರ ಬದುಕಿಗೆ ಆಸರೆಯಾದವರು ನೀವು.
ಭಾಗ್ಯಲಕ್ಷಿ÷್ಮ ಯೋಜನೆ: ಹೆಣ್ಣುಮಕ್ಕಳ ಭವಿ ಷ್ಯಕ್ಕೆ ಭದ್ರತೆ ನೀಡಿದ ನಿಮ್ಮ ಯೋಜನೆ ಇಂದು ಕೋಟ್ಯಂತರ ಮನೆಗಳಲ್ಲಿ ಬೆಳಕಾಗಿದೆ.
ಮಠ-ಮಾನ್ಯಗಳ ಅಭಿವೃದ್ಧಿ: ನಾಡಿನ ಸಂಸ್ಕöÈತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಠ-ಮಾನ್ಯಗಳಿಗೆ ನೀವು ನೀಡಿದ ಸಹಕಾರ ಅನನ್ಯ.
ಮೂಲಸೌಕರ್ಯ: ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ರಸ್ತೆ, ನೀರಾವರಿ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ನೀವು ನೀಡಿದ ವೇಗ ಕರ್ನಾಟಕವನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ.
ಸೈಕಲ್ ವಿತರಣಾ ಯೋಜನೆ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ನೀವು ಜಾರಿಗೆ ತಂದ 'ಉಚಿತ ಸೈಕಲ್' ಯೋಜನೆ ಲಕ್ಷಾಂತರ ಹೆಣ್ಣುಮಕ್ಕಳ ಶಿಕ್ಷಣದ ಕನಸಿಗೆ ರೆಕ್ಕೆ ನೀಡಿತು.
ಸಂಧ್ಯಾ ಸುರಕ್ಷಾ: ವಯಸ್ಸಾದ ಕಾಲದಲ್ಲಿ ಯಾರ ಆಸರೆಯೂ ಇಲ್ಲದ ಹಿರಿಯರಿಗೆ ಗೌರವಯುತ ಜೀವನ ನೀಡಲು ನೀವು ತಂದ 'ಸಂಧ್ಯಾ ಸುರಕ್ಷಾ' ಮಾಸಾಶನ ಯೋಜನೆ ಲಕ್ಷಾಂತರ ಹಿರಿಯ ಜೀವಗಳಿಗೆ ಆಸರೆಯಾಗಿದೆ.
ಪಕ್ಷದ ಬಲವರ್ಧನೆಯಲ್ಲಿ ನಿಮ್ಮ ಪಾತ್ರ:
ಶೂನ್ಯದಿಂದ ಆರಂಭಿಸಿ, ರಾಜ್ಯದ ಪ್ರತಿ ಹಳ್ಳಿ-ಹಳ್ಳಿಯಲ್ಲೂ ಕಮಲವನ್ನು ಅರಳಿಸಿದ ಧೀಮಂತ ನಾಯಕ ನೀವು. ನಿಮ್ಮ ಹೋರಾಟದ ಹಾದಿ, ಸಂಘಟನಾ ಚತುರತೆ ಮತ್ತು ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೊದಲ ಸರ್ಕಾರವನ್ನು ರಚಿಸಿದ ಸಾಹಸ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿಯಲಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನೂ ಉನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ನಿಮ್ಮ ಜೀವನವೇ ಸಾಕ್ಷಿ. ಜನರ ಹೃದಯದಲ್ಲಿ ಜನಪ್ರಿಯ ನಾಯಕನಾಗಿ, ಕಾರ್ಯಕರ್ತರ ಪಾಲಿನ `ರಾಜಾಹುಲಿ' ಯಾಗಿ ನೀವು ಮಾಡಿರುವ ಸಾಧನೆ ಇಂದು `ನವ ನಕ್ಷತ್ರ' ವಾಗಿ ಮಿನುಗುತ್ತಿದೆ. ಈ ಗೌರವ ನಿಮ್ಮ ನಿರಂತರ ಸೇವೆಗೆ ಸಂದ ಪುರಸ್ಕಾರವಾಗಿದೆ. ಇದು ನಾಡಿನ ಪ್ರತಿ ಕಾರ್ಯಕರ್ತರಿಗೆ ಸ್ಫೂರ್ತಿ ಮತ್ತು ಪ್ರೇರಣೆ.
-ಉಮೇಶ ಇಟಗಿ, ಗಿರಿಯಾಲ ಕೆಬಿ, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು