LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಎಲ್ಲೂ ನೋಡಿರದ ಅಮೂಲ್ ಬೇಬಿ

ಇದೂವರೆಗೂ ಯಾವ ಭಾಷೆಯಲ್ಲೂ ತೆರೆಕಾಣದ ಅಂಶಗಳನ್ನು ಒಳಗೊಂಡ ಕಾಮಿಡಿ ಚಿತ್ರ ಅಮೂಲ್ ಬೇಬಿ ಪೋಸ್ಟರ್‍ನ್ನು ಮಾಜಿ ಶಾಸಕ ಎ.ಮಂಜುನಾಥ್ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಪಾನಿಪುರಿ, ಜಿಂಕೆಮರಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ಪಿ.ನವೀನ್ ಕುಮಾರ್ ಸಿನಿಮಾಕ್ಕೆ ಕಥೆ, ಚಿತ್ರಕಥೆ,ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ ಹಾಗೂ ರಾಗ ಸಂಯೋಜಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಮಾನಸ ಕಂಬೈನ್ಸ್ ಅಡಿಯಲ್ಲಿ ಮಾಗಡಿ ಮೂಲದ ಉದ್ಯಮಿ ಬಿ.ನರಸಿಂಹಮೂರ್ತಿ ಬಂಡವಾಳ ಹೂಡಿರುವುದು ಹೊಸ ಅನುಭವ.

ಸಂಪೂರ್ಣ ಹಾಸ್ಯ, ಪ್ರೀತಿ ಆಧಾರಿತ ಸನ್ನಿವೇಶಗಳು ಇರುವುದರಿಂದ ಹಿರಿಯ ನಟ ನರಸಿಂಹರಾಜು, ಚಾರ್ಲಿಚಾಪ್ಲಿನ್ ಮತ್ತು ಮಿ.ಬೀನ್ ಕಟ್‍ಔಟ್‍ಗಳು ಪೋಸ್ಟರ್‍ದಲ್ಲಿ ಕಾಣಿಸಿಕೊಂಡಿದೆ. ಮೂವರು ಹುಡುಗರು, ಒಬ್ಬಳ ಮಧ್ಯೆ ನಡೆಯುವ ಘಟನೆಗಳು ನೋಡುಗರನ್ನು ನಗಿಸುವಂತೆ ಮಾಡುತ್ತದೆ. ಅದು ಏನು ಎಂಬುದರ ಗುಟ್ಟನ್ನು ಬಿಟ್ಟುಕೊಡದೆ ನಿರ್ದೇಶಕರು ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಗೀತೆಗಳು ಚೆನ್ನಾಗಿ ಬಂದಿರುವುದರಿಂದ ಈಗಾಗಲೇ ಎ2 ಮ್ಯೂಸಿಕ್ ಸಂಸ್ಥೆಯು ಹಕ್ಕುಗಳನ್ನು ಪಡೆದುಕೊಂಡಿದೆ.

ಧಾರವಾಹಿ ಕಲಾವಿದರುಗಳಾದ ಭಗತ್, ಶಿವ ಹಾಗೂ ರಂಗಭೂಮಿ ಪ್ರತಿಭೆ ಆವಿನ್ ನಾಯಕರುಗಳು. ಗಂಗೆಗೌರಿ ಸೀರಿಯಲ್‍ನ ವಿದ್ಯಾಶಾಸ್ತ್ರೀ ನಾಯಕಿ. ಮತ್ತೋಂದು ಪ್ರಮುಖ ಪಾತ್ರದಲ್ಲಿ ಸೀತಾರಾಮ ಧಾರವಾಹಿ ಖ್ಯಾತಿಯ ಬೇಬಿ ರೀತುಸಿಂಗ್ ನಟಿಸಿದ್ದಾರೆ. ಇವರೊಂದಿಗೆ ಶ್ವೇತಾ.ಎಂ, ಪೂಜಿತ, ಪ್ರತಿಮ, ಮೈತ್ರಿಸತೀಶ್ ಮುಂತಾದವರು ಅಭಿನಯಿಸಿದ್ದಾರೆ.ಸಂಗೀತ ಮಾಥ್ಯೂಸ್‍ಮನು, ಛಾಯಾಗ್ರಹಣ ವೀನಸ್‍ಮೂರ್ತಿ, ನೃತ್ಯ ರಾಮು, ಸಾಹಸ ಚಂದ್ರುಬಂಡೆ ಅವರದಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು