LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಉದ್ಯಮವನ್ನು ಒಗ್ಗೂಡಿಸಿದ ಎನ್‌ಆರ್‌ಎಐ ಬೆಂಗಳೂರು ಸಭೆ

ಬೆಂಗಳೂರು: ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಬೆಂಗಳೂರು ಘಟಕವು, ಎಲ್‌ಪಿಜಿಗೆ ಸಂಬಂಧಿಸಿದ ಪ್ರಸ್ತುತ ಸವಾಲುಗಳನ್ನು ಎದುರಿಸಲು ಮತ್ತು ಆಹಾರ ಹಾಗೂ ಪಾನೀಯ ವಲಯಕ್ಕೆ ಪ್ರಾಯೋಗಿಕ ಪರ್ಯಾಯ ಇಂಧನ ಪರಿಹಾರಗಳನ್ನು ಹುಡುಕಲು `ಸ್ಕೆಡೆಕ್ ಬೈ ಶೆರ್ಲಾಕ್ಸ್’ ನಲ್ಲಿ ಪ್ರಮುಖ ರೆಸ್ಟೋರೆಂಟ್ ಮಾಲೀಕರು, ಸಾರ್ವಜನಿಕ ವಲಯದ ಪ್ರತಿನಿಧಿಗಳು ಮತ್ತು ತಾಂತ್ರಿಕ ಪರಿಹಾರ ಒದಗಿಸುವವರ ಸಭೆಯನ್ನು ನಡೆಸಿತು.
ಈ ಸಭೆಯು ಮುಖ್ಯವಾಗಿ ಪೂರೈಕೆಯ ಕೊರತೆಗಳು, ಹೆಚ್ಚುತ್ತಿರುವ ನಿರ್ವಹಣಾ ಒತ್ತಡಗಳು ಮತ್ತು ವ್ಯವಹಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ರೆಸ್ಟೋರೆಂಟ್‌ಗಳು ಕೇವಲ ಒಂದು ಇಂಧನ ಮೂಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯತೆಯ ಬಗ್ಗೆ ಗಮನಹರಿಸಿದೆ.
ಸಭೆಯನ್ನು ಪ್ರಾರಂಭಿಸಿದ `ನೋಹಿಯರ್ ಬಾರ್ ಅಂಡ್ ಕಿಚನ್’ನ ನಿರ್ದೇಶಕರಾದ ಶ್ರೀ ಧೀರಜ್ ಕುಮಾರ್ ಅವರು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆಗೆ ಪೀಠಿಕೆ ಹಾಕಿಕೊಟ್ಟರು. ನಂತರ ಎನ್‌ಆರ್‌ಎಐ ಬೆಂಗಳೂರು ಘಟಕದ ಮುಖ್ಯಸ್ಥರಾದ ಶ್ರೀ ಅನಂತ್ ನಾರಾಯಣ್ ಅವರು ಉದ್ಯಮವನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಎಲ್‌ಪಿಜಿ ಪರಿಸ್ಥಿತಿಯ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು ಮತ್ತು ತನ್ನ ಸದಸ್ಯರನ್ನು ಬೆಂಬಲಿಸಲು ಎನ್‌ಆರ್‌ಎಐ ಬೆಂಗಳೂರು ಘಟಕವು ನಡೆಸುತ್ತಿರುವ ಪ್ರಯತ್ನಗಳನ್ನು ವಿವರಿಸಿದರು.
ಬೆಂಗಳೂರು ಚಾಪ್ಟರ್ ಮುಖ್ಯಸ್ಥರಾದ ಶ್ರೀ ಅನಂತ್ ನಾರಾಯಣ್ ಅವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾ `ಎಲ್‌ಪಿಜಿ ಪರಿಸ್ಥಿತಿಯು ನಮ್ಮ ಸದಸ್ಯರಿಗೆ ನಿಜವಾದ ಸವಾಲಾಗಿದೆ, ಇದು ವೆಚ್ಚ ಮತ್ತು ದೈನಂದಿನ ಚಟುವಟಿಕೆಗಳೆರಡರ ಮೇಲೂ ಪರಿಣಾಮ ಬೀರುತ್ತಿದೆ. ರೆಸ್ಟೋರೆಂಟ್‌ಗಳು ಪಿಎನ್‌ಜಿ, ಬಯೋಗ್ಯಾಸ್ ಅಥವಾ ಇತರ ಪ್ರಾಯೋಗಿಕ ಪರ್ಯಾಯ ಮಾರ್ಗಗಳನ್ನು ಸಕ್ರಿಯವಾಗಿ ಹುಡುಕುವುದು ಮುಖ್ಯವಾಗಿದೆ. ಎನ್‌ಆರ್‌ಎಐ ಆಗಿ ನಮ್ಮ ಜವಾಬ್ದಾರಿಯೆಂದರೆ, ಇಡೀ ವ್ಯವಸ್ಥೆಯನ್ನು ಒಗ್ಗೂಡಿಸುವುದು ಮತ್ತು ನಮ್ಮ ಸದಸ್ಯರಿಗೆ ಸರಿಯಾದ ಮಾಹಿತಿ ಹಾಗೂ ಪಾಲುದಾರರ ಸಂಪರ್ಕ ಸಿಗುವಂತೆ ಮಾಡುವುದಾಗಿದೆ’ ಎಂದು ಹೇಳಿದರು.
ಗೇಲ್ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜಯ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಒಂದು ವಿಶೇಷ ಅಧಿವೇಶನವು ಪಿಎನ್‌ಜಿ ಮತ್ತು ಪೈಪ್ಡ್ ಗ್ಯಾಸ್ ಪರಿಹಾರಗಳ ಮೇಲೆ ಗಮನಹರಿಸಿತು. ಇದರಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಹಂತಗಳು, ಅದಕ್ಕೆ ಬೇಕಾದ ಮೂಲಸೌಕರ್ಯಗಳ ಸಿದ್ಧತೆ ಮತ್ತು ರೆಸ್ಟೋರೆಂಟ್ ಮಾಲೀಕರು ಗಮನಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಆ ಸಂಜೆಯ ಪ್ರಮುಖ ಆಕರ್ಷಣೆ ‘ಪರ್ಯಾಯ ಇಂಧನ ಮತ್ತು ಅಡುಗೆ ಪರಿಹಾರಗಳ ಪ್ರದರ್ಶನ’ವಾಗಿತ್ತು. ಇದು ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಭಾಗಿಗಳಿಗೆ ಪ್ರಾಯೋಗಿಕ ಅರಿವು ನೀಡಿತು. ಈ ಪ್ರದರ್ಶನದಲ್ಲಿ ಕಾರ್ಬನ್‌ಲೈಟ್ಸ್ನ ಶ್ರೀ ಋಷಿಕೇಶ್ ಅವರು ಬಯೋಗ್ಯಾಸ್ ಅನ್ನು ಒಂದು ಸುಸ್ಥಿರ ಪರ್ಯಾಯವಾಗಿ ಪರಿಚಯಿಸಿದರು; ಗೇಲ್‌ನ ಶ್ರೀ ಸಂಜಯ್ ಕುಮಾರ್ ಸಿಂಗ್ ಅವರು ವಾಣಿಜ್ಯ ಅಡುಗೆ ಮನೆಗಳಿಗಾಗಿ ಪಿಎನ್‌ಜಿ ಪರಿಹಾರಗಳನ್ನು ಪ್ರದರ್ಶಿಸಿದರು; ಗ್ರೀನ್‌ವೇ ಅಪಪ್ಲೈಯನ್ಸಸ್‌ನ ಶ್ರೀ ಗಣೇಶ್ ಅವರು ಸೌದೆ ಮತ್ತು ಕಲ್ಲಿದ್ದಲು ಆಧಾರಿತ ಒಲೆಗಳ ಪರಿಹಾರಗಳನ್ನು ತೋರಿಸಿಕೊಟ್ಟರು; ಗೋಲ್ಡನ್ ಕೋಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಂಬುಜ್ ಅವಸ್ಥಿ ಅವರು ಕಲ್ಲಿದ್ದಲಿನ ಸಮರ್ಥ ಬಳಕೆಗಳ ಬಗ್ಗೆ ಮಾಹಿತಿ ನೀಡಿದರು; ಮತ್ತು ಎusಣಃಟಡಿ ಮ್ಯಾಟ್ರಿಕ್ಸ್ನ ಶ್ರೀ ಝಾಕ್ ಅವರು ಎಲ್‌ಪಿಜಿ ಮುಕ್ತ ರೆಸ್ಟೋರೆಂಟ್ ಮತ್ತು ಸೆಂಟ್ರಲ್ ಕಿಚನ್ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸುವ ಎಐ ಆಧಾರಿತ ಆಟೋಮೇಷನ್ ತಂತ್ರಜ್ಞಾನವನ್ನು ಪ್ರಸ್ತುತಪಡಿಸಿದರು.
ಈ ಚರ್ಚೆಗಳು ಮತ್ತು ಪ್ರದರ್ಶನವು ಒಟ್ಟಾರೆಯಾಗಿ ವಿವಿಧ ರೀತಿಯ ಇಂಧನ ತಂತ್ರಗಳನ್ನು ಅನ್ವೇಷಿಸುವಲ್ಲಿ ಉದ್ಯಮ ಹೊಂದಿರುವ ಆಸಕ್ತಿಯನ್ನು ಎತ್ತಿ ತೋರಿಸಿವೆ. ಇದರಲ್ಲಿ ಪಿಎನ್‌ಜಿ, ಬಯೋಗ್ಯಾಸ್ ಮತ್ತು ಇಲೆಕ್ಟ್ರಿಕ್ ಪರಿಹಾರಗಳು ಪ್ರಮುಖವಾಗಿ ಪರಿಗಣಿಸಬಹುದಾದ ಕ್ಷೇತ್ರಗಳಾಗಿ ಹೊರಹೊಮ್ಮಿವೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು