LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಭಾರತದ ವನಿತೆಯರಿಗೆ ಏಕದಿನ ಸರಣಿ

ಬೆಂಗಳೂರು: ಬೃಹತ್ ಮೊತ್ತದ ಅಮೋಘ ಹೋರಾಟವೊಂದರಲ್ಲಿ ಭಾರತದ ವನಿತೆಯರು ದಕ್ಷಿಣ ಆಫ್ರಿಕಾವನ್ನು ನಾಲ್ಕೇ ನಾಲ್ಕು ರನ್ನಿನಿಂದ ಮಣಿಸಿ ಏಕದಿನ ಸರಣಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಬುಧವಾರದ ಬೆಂಗಳೂರು ಮುಖಾಮುಖೀಯಲ್ಲಿ ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಭಾರತ 3 ವಿಕೆಟಿಗೆ 325 ರನ್ ರಾಶಿ ಹಾಕಿದರೆ, ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 321 ರನ್ ಮಾಡಿ ಶರಣಾಯಿತು.

ಮೊದಲ ಪಂದ್ಯವನ್ನು ಭಾರತ 143 ರನ್ನುಗಳಿಂದ ಜಯಿಸಿತ್ತು. ಅಂತಿಮ ಪಂದ್ಯ ರವಿವಾರ ನಡೆಯಲಿದೆ.ನಾಯಕಿ, ಉಪನಾಯಕಿಯರ ಶತಕ: ಮೊದಲ ಪಂದ್ಯದಲ್ಲಿ 117 ರನ್ ಬಾರಿಸಿದ ಸ್ಮತಿ ಮಂಧನಾ, ಬುಧವಾರ ಇದೇ ಆಟದ ಮುಂದುವರಿದ ಭಾಗವೆಂಬಂತೆ ಬ್ಯಾಟ್ ಬೀಸಿ ಜೀವನಶ್ರೇಷ್ಠ 136 ರನ್ ಹೊಡೆದರು. ಮಂಧನಾ ಸತತ 2 ಏಕದಿನ ಪಂದ್ಯ?ಗಳಲ್ಲಿ ಸೆಂಚುರಿ ಹೊಡೆದ ಭಾರತದ ಮೊದಲ ಆಟಗಾರ್ತಿ. ರನ್ ಬರಗಾಲದಲ್ಲಿದ್ದ ನಾಯಕಿ ಹರ್ಮನ್‍ಪ್ರೀತ್ ಕೌರ್ ಕೊನೆಯ ಓವರ್‍ನಲ್ಲಿ ಅಬ್ಬರಿಸಿ ಶತಕ ಪೂರ್ತಿಗೊಳಿಸುವಲ್ಲಿ ಯಶಸ್ವಿಯಾದರು.

ಇವರಿಬ್ಬರ 3ನೇ ವಿಕೆಟ್ ಜತೆಯಾಟದಲ್ಲಿ 136 ಎಸೆತಗಳಿಂದ 171 ರನ್ ಹರಿದು ಬಂತು.ಬಹಳ ವಿಳಂಬವಾಗಿ, 18ನೇ ಎಸೆತದಲ್ಲಿ ರನ್ ಖಾತೆ ತೆರೆದ ಮಂಧನಾ 120 ಎಸೆತ ಎದುರಿಸಿ 136 ರನ್ ಬಾರಿಸಿದರು. ಇದು 18 ಬೌಂಡರಿ, 2 ಸಿಕ್ಸರ್‍ಗಳನ್ನು ಒಳಗೊಂಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧವೇ 2018ರ ಕಿಂಬರ್ಲಿ ಪಂದ್ಯದಲ್ಲಿ 135 ರನ್ ಹೊಡೆದದ್ದು ಮಂಧನಾ ಅವರ ಈವರೆಗಿನ ಸರ್ವಾಧಿಕ ಗಳಿಕೆ ಆಗಿತ್ತು. ಇದು ಮಂಧನಾ ಅವರ 7ನೇ ಶತಕ. ಮಿಥಾಲಿ ರಾಜ್ ಕೂಡ 7 ಶತಕ ಹೊಡೆದಿದ್ದು, ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಕೌರ್ 6ನೇ ಶತಕದ ಮೂಲಕ ಮಿಂಚಿದರು. ನಾಯಕಿಯ ಕೊಡುಗೆ 88 ಎಸೆತಗಳಿಂದ ಅಜೇಯ 103 ರನ್ (9 ಬೌಂಡರಿ, 3 ಸಿಕ್ಸರ್). ಅಂತಿಮ ಓವರ್‍ನಲ್ಲಿ ಕೌರ್ ಸೆಂಚುರಿಗೆ 12 ರನ್ ಅಗತ್ಯವಿತ್ತು. ಮಲಾಬಾ ಅವರ ಸತತ 3 ಎಸೆತಗಳಲ್ಲಿ 4, 6, 4 ರನ್ ಮಾಡಿ ಶತಕ ಸಂಭ್ರಮ ಆಚರಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು