LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಪರಾಕ್ ಟೀಸರ್ ಬಿಡುಗಡೆ

ಶ್ರೀಮುರಳಿ ಅವರ ಸಿನಿಮಾ ಪರಾಕ್. ಇದೀಗ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಹಾಲೇಶ್ ಮಾತನಾಡಿ, ಇದು ಜಸ್ಟ್ ಟೀಸರ್ ಅಷ್ಟೇ. ಸಿನಿಮಾದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಿದ್ದೇವೆ. ಶ್ರೀಮುರಳಿ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದರು.ನಟ ಶ್ರೀಮುರಳಿ ಮಾತನಾಡಿ, ಪರಾಕ್ ಟೀಸರ್ ನೋಡಿದ್ರೆ ಇದು ಸುಲಭವಾಗಿ ಆದ ಕೆಲಸ ಅಲ್ಲ. ಅದಕ್ಕೆ ಆದ ಶ್ರಮ. ಸಾಕಷ್ಟು ಮೀಟಿಂಗ್ ಆಯ್ತು. ಇದನ್ನು ತೆಗೆಯಲು ಎರಡೂವರೆ ವರ್ಷ ತೆಗೆದುಕೊಂಡೆವು. ಪರಾಕ್ ಸುಲಭವಾಗಿ ಶುರುವಾದ ಸಿನಿಮಾವಲ್ಲ. ಕಥೆಗೆ ಮೂರೂವರೆ ವರ್ಷ ಟೈಮ್ ಕೊಟ್ಟಿದ್ದೇವೆ. ಹೊಸಬರು, ಹೊಸ ಪ್ರೊಡಕ್ಷನ್ ಜೊತೆ ಯಾಕೆ ಸಿನಿಮಾ ಮಾಡಿದ್ದೇನೆ. ಅಂದರೆ ಅವರ ಜೊತೆ ಕೆಲಸ ಮಾಡಲು ನನಗೆ ಕಿಕ್ಕು. ನಾನು ಹೊಸಬರನ್ನು, ಅವರ ಆಲೋಚನೆಯನ್ನು, ಇಷ್ಟಪಡುತ್ತೇನೆ ನಂಬುತ್ತೇನೆ. ಪರಾಕ್ ಎಂಬ ಅದ್ಬುತ ಪ್ರಯತ್ನವನ್ನು ಎಲ್ಲರಿಗೂ ನೀಡಬೇಕು ಎಂಬ ಅಸೆ, ಹಠ, ಕಾಳಜಿಯಿಂದ ಮಾಡುತ್ತಿದ್ದೇವೆ. ಈ ಹೊಸತಂಡ ನಮ್ಮ ಚಿತ್ರರಂಗದ ಆಸ್ತಿಗಳು. ಚಿತ್ರದ ಬಗ್ಗೆ ಹೆಚ್ಚಿನದಾಗಿ ಹೇಳಲ್ಲ. ಇನ್ನೂ ಸಿನಿಮಾ ಚಿತ್ರೀಕರಣ ಮಾಡುವುದು ಇದೆ ಎಂದರು. ಚರಣ್ ರಾಜ್ ಮ್ಯೂಸಿಕ್, ಸಂದೀಪ್ ಕ್ಯಾಮೆರಾ ಇದೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಚಿತ್ರ ಸಿನಿಮಾ ನಿರ್ಮಾಣವಾಗುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು