LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಆಂಗ್ಲ ಹಾಗೂ ಇನ್ನಿತರ ನಾಮಫಲಕಗಳಿಗೆ ಕಪ್ಪು ಮಸಿ ಬಳಿದು ಪ್ರತಿಭಟನೆ

ಕನಕಪುರ: ತಾಲೂಕು ಕನ್ನಡ ಪರ ಸಂಘಟನೆಗಳಿಂದ ನಗರದ ಹಲವಾರು ಅಂಗಡಿ ಮಳಿಗೆಗಳ ಮೇಲೆ ಅಳವಡಿಸಿದ್ದ ಆಂಗ್ಲ ಹಾಗೂ ಇನ್ನಿತರ ನಾಮಫಲಕಗಳಿಗೆ ಕಪ್ಪು ಮಸಿ ಬಳೆದು ಪ್ರತಿಯೊಬ್ಬ ಅಂಗಡಿ ಮಳಿಗೆಯವರು ಕಡ್ಡಾಯವಾಗಿ ಕನ್ನಡದಲ್ಲೇ ನಾಮಫಲಕವನ್ನು ಹಾಕುವಂತೆ ಪ್ರತಿಭಟನೆ ನಡೆಸಿದರು.

ಸೋಮವಾರ ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಕುಮಾರಸ್ವಾಮಿ, ವೀರೇಶ್, ಭಾಸ್ಕರ್ ಸೇರಿದಂತೆ ಅನೇಕರು ನಗರದ ಪೇಟೆಕೆರೆ ಸಮೀಪದ ಪ್ರತಿಷ್ಟಿತ ಶೋ-ರೂಂ ಮಳಿಗೆ ಮೇಲೆ ನಾಮಫಲಕಗಳು ಸಂಪೂರ್ಣ ಆಂಗ್ಲಭಾಷೆಯಲ್ಲಿ ಇದುದ್ದನ್ನು ಕಂಡು ತಾವು ತಂದಿದ್ದ ಕರಿ ಬಣ್ಣವನ್ನು ನಾಮಫಲಕಗಳ ಮೇಲೆ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಅಂಗಡಿ ಮಾಲೀಕರಿಗೆ ನಾಮಫಲಕವನ್ನು ಕನ್ನಡದಲ್ಲೇ ಹಾಕುವಂತೆ ಎಚ್ಚರಿಕೆ ನೀಡಿದರು. ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕದ ಎಂ.ಜಿ ರಸ್ತೆಯ ಎಲ್ಲಾ ಅಂಗಡಿ ಮಾಲೀಕರಿಗೆ ಕಡೇ ಎಚ್ಚರಿಕೆಯನ್ನು ನೀಡಿ ಅವರ ವಿರುದ್ಧ ಧಿಕ್ಕಾರ ಕೂಗುತ್ತಾ ನಗರಸಭೆ ಮುಂದೆ ಜಮಾಯಿಸಿ ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳ ಲೈಸನ್ಸ್‍ನ್ನು ರದ್ದುಗೊಳಿಸಬೇಕೆಂದು ಪ್ರತಿಭಟನೆ ನಡೆಸಿದರು.

ಮನವಿ: ಪ್ರತಿಭಟನಾ ಮುಖಂಡರುಗಳು ನಗರಸಭಾ ಆಯುಕ್ತ ಎಂ.ಎಸ್.ಮಹದೇವ್‍ರವರಿಗೆ ಮನವಿ ಪತ್ರವನ್ನು ನೀಡಿ ನಗರದಲ್ಲಿ ಕೆಲವು ಅಂಗಡಿಗಳ ಮಾಲೀಕರು ಎಷ್ಟೇ ಎಚ್ಚರಿಕೆ ನೀಡಿದರು ಕನ್ನಡದಲ್ಲಿ ನಾಮಫಲಕ ಹಾಕುತ್ತಿಲ್ಲ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಎಂದು ರಾಜ್ಯ ಸರ್ಕಾರ ಆದೇಶ ಹೊರಬಿದಿದ್ದರು ಸಹ ಕೆಲವು ಅಂಗಡಿ ಮಾಲೀಕರು ಇದನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಂತಹ ಅಂಗಡಿಗಳ ಲೈಸೆನ್ಸ್‍ಗಳನ್ನು ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕನ್ನಡ ಪರ ವೇದಿಕೆ ಮುಖಂಡರುಗಳಾದ ಜಯಸಿಂಹ, ಕೆ.ಆರ್.ಸುರೇಶ್, ಶೇಖರ, ರೈತ ಮುಖಂಡರಾದ ಚೀಲೂರು ಮುನಿರಾಜು, ಶ್ರೀನಿವಾಸ್, ಕೆಬ್ಬಳ್ಳಿ ಶಿವರಾಜು ಸೇರಿದಂತೆ ಕನ್ನಡ ಪರ ಸಂಗಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು