LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ರೈ ರೈ ರೈ ರೈಮಿಂಗ್! ಆಪರೇಷನ್ ಲಂಡನ್ ಕೆಫೆಯಲ್ಲಿ ಮೇಘಾ ಶೆಟ್ಟಿ ಮಿಂಚಿಂಗ್!

ಇದೇ ನವೆಂಬರ್ ೨೮ ಕ್ಕೆ ಕನ್ನಡ ಮರಾಠಿ ಮತ್ತು ಹಿಂದಿ ಮೂರೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯ ಸಂಭ್ರಮ ಕಾಣುತ್ತಿರುವ `ಅಪರೇಷನ್ ಲಂಡನ್ ಕೆಫೆ' (ಓ. ಎಲ್. ಸಿ)
ಚಿತ್ರದ ಮೊದಲ ಹಾಡು ಬಿಡುಗಡೆಗೊಂಡು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ! ತರ್ಲೆ ತುಂಟ ಲಂಗದಾವಣಿ ತೊಟ್ಟ ಅಪ್ಪಟ ಬಜಾರಿ ಬಾಯಿ ಬಡಕಿ ಹಳ್ಳಿ ಹುಡುಗಿಯಂತೆ ಮೇಘಾ ಶೆಟ್ಟಿ ಹಿಂದೆಂದಿಗಿಂತಲೂ ಲವಲವಿಕೆಯಿಂದ ಕಾಣಿಸಿಕೊಂಡು `ರೈ ರೈ ರೈʼ ಈ ಪ್ರೀತಿ ಶ್ಯಾನೆ ಮಜವಾಗುತೈತಿ, ಮನಸಾಗ ಎಲಿಯಡಿಕಿ ಆಗಿಯಾಕತೈತಿ' ಎನ್ನುತ್ತಾ ತನ್ನ ಅಭಿಮಾನಿಗಳಿಗೆ ಮತ್ತು ಸಿನಿಪ್ರಿಯರಿಗೆ ರಸಗವಳ ಬಡಿಸಿದ್ದಾರೆ. ನಕ್ಸಲೈಟ್ ಗೆಟಪ್ಪಿನಲ್ಲಿ ಮೀಸೆ ತಿರುವುತ್ತಾ ಖರ‍್ರಾಗಿ ಕಾಣುವ ನಾಯಕ ಕವೀಶ್ ಶೆಟ್ಟಿಯ ಸಿದ್ಧಾಂತ ಬದ್ಧ ಬಿಗುಮಾನವನ್ನು ಅಣಕಿಸಿ, ಗೋಳು ಹುಯ್ದುಕೊಳ್ಳುತ್ತಾ ಪ್ರಕೃತಿ ಮತ್ತು ಮಾನವ ಸಹಜ ಪ್ರೀತಿ ಸಂಬಂಧಗಳ ಬಗ್ಗೆ ಸುಂದರವಾಗಿ ವರ್ಣಿಸುತ್ತಾ ಚಿತ್ರದ ತುಂಬಾ ಇಂತದ್ದೇ
ತರಲೇ ತಂಟೆ ತಕರಾರು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುವ ಮೇಘಾ ಶೆಟ್ಟಿ ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಮರಾಠಿ ಚಿತ್ರರಂಗಕ್ಕೂ ಲಗ್ಗೆಯಿಟ್ಟಿದ್ದಾರೆ.

ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ನೇರವಾಗಿ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸಿ ಈ ಹಾಡಿಗೆ ಸಾಹಿತ್ಯವನ್ನೂ ಬರೆದಿದ್ದಾರೆ.
ಛಾಯಾಗ್ರಾಹಕ ಆರ್. ಡಿ. ನಾಗಾರ್ಜುನ್ ಹಾಡಿಗೆ ತಕ್ಕ ಹಾಗೆ ಪ್ರಕೃತಿಯ ಸುಂದರ ದೃಶ್ಯಗಳನ್ನು ತನ್ನ ಕ್ಯಾಮೆರಾದಲ್ಲಿ ಅದ್ಬುತವಾಗಿ ಸೆರೆ ಹಿಡಿದಿದ್ದಾರೆ. ವಿನಾದ್ ಮ್ಯೂಸಿಕ್ ಲೇಬಲ್ನ ಅಡಿಯಲ್ಲಿ ಮೂರೂ ಭಾಷೆಯಲ್ಲಿ ಬಿಡುಗಡೆಗೊಂಡ ಈ ಹಾಡಿಗೆ ಸಂಗೀತ ನಿರ್ದೇಶಕ ಪ್ರಾಂಶು ಝಾ ಜಿಲ್ಕಾ ಚಿತ್ರದ ನಂತರ ೨ನೇ ಬಾರಿ ತಮ್ಮ ವಿಶೇಷ ವಿಶಿಷ್ಟ ಸಂಗೀತ
ಸಂಯೋಜನೆಯ ಮೂಲಕ ಮತ್ತೊಮ್ಮೆ ಕನ್ನಡಕ್ಕೂ ಜೈ ಎಲ್ಲದಕ್ಕೂ ಸೈ ಎನ್ನಿಸಿಕೊಂಡಿದ್ದಾರೆ. ತನ್ನ ಮಾದಕ ಮತ್ತು ಮೋಹಕ ಧ್ವನಿಯಿಂದ ಈಗಾಗಲೇ ಕನ್ನಡಿಗರ ಮನ
ಸೂರೆಗೊಳಿಸಿದ ಗಾಯಕಿ ಐಶ್ವರ್ಯ ರಂಗರಾಜನ್ ಈ ಮೂಲಕ ಮತ್ತೊಂದು ಹಿಟ್ ಹಾಡನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ. ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಸಂಸ್ಥೆಯಿಂದ ಅದ್ಧೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.

ಈಗಾಗಲೇ ಮಾಸ್ ಆಕ್ಷನ್ ಪೋಸ್ಟರ್ಸ್ ಮೂಲಕ ಗಮನ ಸೆಳೆದಿದ್ದ ಅಪರೇಷನ್ ಲಂಡನ್ ಕೆಫೆ ಮತ್ತೆ ಈ ಹಾಡಿನ ಮೂಲಕ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಇನ್ನೂ ಹೆಚ್ಚಿನ ಕುತೂಹಲ ಹುಟ್ಟಿಸಿದೆ. ಈ ಚಿತ್ರ ಇದೇ ತಿಂಗಳು ಇಪ್ಪತ್ತೆಂಟಕ್ಕೆ ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು