LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಬಾಲಿವುಡ್ ಬದುಕಿಗೆ ಹೊಸ ಅಡಿಗಲ್ಲು ಹಾಕಿದ ರಶ್ಮಿಕಾ ಮಂದಣ್ಣ: ಯಾಕಂತೀರಾ?

ರಶ್ಮಿಕಾ ಮಂದಣ್ಣ ಆಕಾಶದಲ್ಲಿ ತೇಲಾಡುತ್ತಿದ್ದಾರೆ. 'ಅನಿಮಲ್' ಸಿನಿಮಾ ಮೊದಲ ದಿನ ನೂರಾ ಹದಿನಾರು ಕೋಟಿ ಗಳಿಸಿದೆ. ಸಾನ್ವಿ ಸಂತಸಕ್ಕೆ ಕಾರಣ ಅದಲ್ಲ. ಈ ಚಿತ್ರದಲ್ಲಿ ಗೀತಾಂಜಲಿಯಾಗಿ ಜನರ ಮನಸನ್ನು ರಶ್ಮಿಕಾ ಕದ್ದ ರೀತಿ ಇದೆಯಲ್ಲ.ಅದೇ ಶ್ರೀವಲ್ಲಿ ಬಾಲಿವುಡ್ ಬದುಕಿಗೆ ಹೊಸ ಅಡಿಗಲ್ಲು ಹಾಕಿದೆ. ರಶ್ಮಿಕಾ ಹವಾ ಜೋರಾಗಿದೆ.

ರಶ್ಮಿಕಾ ಬಾಲಿವುಡ್‍ಗೆ ಕಾಲಿಟ್ಟು ಹಲವು ವರ್ಷ ಕಳೆದಿದೆ. 'ಮಿಷನ್ ಮಜ್ನೂ' ಹಾಗೂ 'ಗುಡ್‍ಬೈ' ಸಿನಿಮಾ ಬಂದಿತ್ತು. ಅಷ್ಟೇ ಬೇಗ ಸಿನಿಮಾ ಮಕಾಡೆ ಮಲಗಿತ್ತು. ರಶ್ಮಿಕಾ ಸುದ್ದಿಯಾದರು. ಆದರೆ ಸದ್ದು ಮಾಡಲಿಲ್ಲ. ಕಾರಣ ಅದರಲ್ಲಿ ಇದ್ದದ್ದೇ ಅಷ್ಟು ಅವಕಾಶ. ಅಷ್ಟೇ ಪಾತ್ರ. ಇನ್ನೇನು ಮಾಡೋಕಾಗುತ್ತೆ ಸಾನ್ವಿ ಸೈಲೆಂಟ್ ಸುನಾಮಿಯಂತಿದ್ದರು. ಆದರೆ 'ಅನಿಮಲ್' ಸಿನಿಮಾ ನೋಡಿದವರು ಮಾತ್ರ, ದಿಸ್ ಈಸ್ ಕ್ರಶ್ಮಿಕಾ ಪಕ್ಕಾ ರಶ್ಮಿಕಾ. ರಿಯಲ್ ಟ್ಯಾಲೆಂಟೆಡ್ ಗರ್ಲ್ ಹೀಗೆ ಶಹಬ್ಬಾಶ್‍ಗಿರಿ ಕೊಡುತ್ತಿದ್ದಾರೆ. ರಣ್‍ಬೀರ್ ಪತ್ನಿ ಆಲಿಯಾ ಭಟ್ ಕೂಡ ಶ್ರೀವಲ್ಲಿ ನಟನೆ ನೋಡಿ ಬೆರಗಾಗಿದ್ದಾರೆ. ರಶ್ಮಿಕಾ ಮಂದಣ್ಣಗೆ ಭೇಷ್ ಎಂದಿದ್ದಾರೆ.

ಸ್ಯಾಂಡಲ್‍ವುಡ್, ಕಾಲಿವುಡ್, ಟಾಲಿವುಡ್‍ನಿಂದ ನೇರ ಬಾಲಿವುಡ್‍ಗೆ ಹೋದ ಹುಡುಗಿಗೆ ಗೆಲುವು ದಕ್ಕಿರಲಿಲ್ಲ. ಈಗ ಒಂದೇ ಸಲಕ್ಕೆ ಜಾಕ್‍ಪಾಟ್ ಹೊಡೆದಿದೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಣಬೀರ್ ಹೀರೋ ಬಂಪರ್ ಹಿಟ್. 'ಕಿರಿಕ್ ಪಾರ್ಟಿ' ಸಾನ್ವಿ ಈಗ ಅನಿಮಲ್ ಗೀತಾಂಜಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

'ಅನಿಮಲ್' ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಬಾಲಿವುಡ್‍ನಲ್ಲಿ ಗಟ್ಟಿ ನೆಲೆ ಸಿಕ್ಕಿದೆ. ಈ ಒಂದು ಸಿನಿಮಾ ಇಷ್ಟೊಂದು ಸುದ್ದಿ ಮಾಡಿದ ಮೇಲೆ ಬಾಲಿವುಡ್ ಸ್ಟಾರ್ ನಟರಿಗೆ ನಾಯಕಿಯಾಗೋದ್ರಲ್ಲಿ ಅನುಮಾನವಿಲ್ಲ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು