LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಕಾಳಗಕ್ಕೆ ಸಜ್ಜಾಗಿದ್ದ ರೆಡ್ಡಿ ಬಳಗ

ರೆಡ್ಡಿ ಮನೆ ಆವರಣದಲ್ಲಿ ದೊಣ್ಣೆ ರಾಶಿ ಪತ್ತೆ | ಬಾಂಬ್ ನಿಷ್ಕಿçಯ ದಳದಿಂದ ಶೋಧ
ಬಳ್ಳಾರಿ/ಬೆಂಗಳೂರು; ಈ ತಿಂಗಳ ೧ನೇ ತಾರೀಖು ಬಳ್ಳಾರಿಯಲ್ಲಿ ನಡೆದ ಗಲಭೆಗೆ ಸಂಬAಧಪಟ್ಟAತೆ ಮಾಜಿ ಸಚಿವ ಜನಾರ್ದನರೆಡ್ಡಿ ಮತ್ತು ಅವರ ಆಪ್ತರು ಸಜ್ಜಾಗಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬAತೆ ಗಲಭೆ ನಡೆದ ಜನಾರ್ದನರೆಡ್ಡಿ ಮನೆ ಆವರಣದಲ್ಲಿ ದೊಣ್ಣೆ ರಾಶಿ ಪತ್ತೆಯಾಗಿದೆ.
ಜನಾರ್ದನರೆಡ್ಡಿ ಮತ್ತು ಸಚಿವ ಶ್ರೀರಾಮುಲು ಆಪ್ತರು ದೊಣ್ಣೆಗಳನ್ನು ಹಿಡಿದು ಓಡಾಡುತ್ತಿದ್ದರು ಎಂದು ಹೇಳಲಾಗಿದೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ(ಬುಡಾ) ಮಾಜಿ ಅಧ್ಯಕ್ಷ ಶ್ರೀರಾಮುಲು ಆಪ್ತ ಎನ್ನಲಾದ ಪಾಲಣ್ಣ ಎಂಬಾತ ದೊಣ್ಣೆ ಹಿಡಿದು ಓಡಾಡುತ್ತಿದ್ದ ಎನ್ನಲಾಗಿದೆ.
ಇದರ ಮಧ್ಯೆ ಇಂದು ಬಾಂಬ್ ನಿಷ್ಕಿçಯ ದಳದವರು ಗುಂಡಿನ ದಾಳಿ ನಡೆದ ಜನಾರ್ದನರೆಡ್ಡಿ ಅವರ ಅಹಂಬಾವಿ, ನಿವಾಸ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಬಾಂಬ್ ನಿಷ್ಕಿçಯ ದಳದವರೊಂದಿಗೆ ಎಫ್‌ಎಸ್‌ಎಲ್ ತಂಡದವರು ಕೂಡ ಆಗಮಿಸಿ ಈ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟಾರೆ ಗುಂಡಿನ ಪ್ರಕರಣದ ತನಿಖಾ ಕಾರ್ಯ ಮುಂದುವರೆದಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ಹಲವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳು ಬೆಂಗಳೂರಿಗೆ
ಬೆAಗಳೂರು: ಬಳ್ಳಾರಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬAಧಪಟ್ಟAತೆ ಬಂಧಿಸಲಾಗಿರುವ ೨೬ ಮಂದಿ ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಾಗಿದೆ.
೨೬ ಮಂದಿಯನ್ನು ಬೆಂಗಳೂರಿಗೆ ಕರೆತಲಾಗಿದ್ದು, ಈ ಪೈಕಿ ಗುಂಡಿನ ದಾಳಿ ಪ್ರಮುಖ ಆರೋಪಿ ಎನ್ನಲಾದ ಶಾಸಕ ನಾ.ರಾ. ರೆಡ್ಡಿಯ ಆಪ್ತ ಸತೀಶ್ ರೆಡ್ಡಿ ಅಂಗರಕ್ಷಕ ಗುರುಚರಣ್ ಸಿಂಗ್ ಸೇರಿದಂತೆ ೧೦ ಮಂದಿ ಕಾಂಗ್ರೆಸ್‌ನವರು, ೧೫ಮಂದಿ ಬಿಜೆಪಿಯವರು ಇದ್ದಾರೆ. ಇವರನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸುತ್ತ ೨ಕೆಎಸ್‌ಆರ್‌ಪಿ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ರಾತ್ರಿಯೇ ಆರೋಪಿಗಳನ್ನು ಬೆಂಗಳೂರಿಗೆ ಕರೆತಂದು ಬೆಳಗ್ಗಿನಿಂದಲೇ ವಿಶೇಷ ನ್ಯಾಯಾಲಯದ ಬಳಿ ಅವರನ್ನು ಇರಿಸಲಾಗಿದೆ. ೧೧ಗಂಟೆ ಸುಮಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು