LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ರಾಜಸ್ಥಾನಕ್ಕೆ ಶರಣಾದ ರಾಯಲ್ ಚಾಲೆಂಜರ್

ಅಹ್ಮದಾಬಾದ್: ಆರ್‍ಸಿಬಿಯ ಮತ್ತೊಂದು ಕಪ್ ಗೆಲವಿನ ಕನಸು ಛಿದ್ರಗೊಂಡಿದೆ. ಲೀಗ್ ಹಂತದಲ್ಲಿ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಸಂಭ್ರಮದಲ್ಲಿದ್ದ ಬೆಂಗಳೂರು ತಂಡ ಬುಧವಾರದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‍ಗೆ 4 ವಿಕೆಟ್‍ಗಳಿಂದ ಮಂಡಿಯೂರಿ ಕೂಟದಿಂದ ನಿರ್ಗಮಿಸಿತು.

ಶುಕ್ರವಾರದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದರಾಬಾದ್-ರಾಜಸ್ಥಾನ್ ಮುಖಾಮುಖಿ ಆಗಲಿವೆ.ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಆರ್‍ಸಿಬಿ 8 ವಿಕೆಟಿಗೆ 172 ರನ್ ಗಳಿಸಿತು. ರಾಜಸ್ಥಾನ್ 19 ಓವರ್‍ಗಳಲ್ಲಿ 6 ವಿಕೆಟಿಗೆ 174 ರನ್ ಬಾರಿಸಿ ಜಯಭೇರಿ ಮೊಳಗಿಸಿತು.ರಾಜಸ್ಥಾನ್ ಚೇಸಿಂಗ್ ಬಿರುಸಿನಿಂದಲೇ ಕೂಡಿತ್ತು. ಜೈಸ್ವಾಲ್ (45)-ಕ್ಯಾಡ್‍ಮೋರ್ (20) 46 ರನ್ ಜತೆಯಾಟ ನಿಭಾಯಿಸಿದರು.

ಜೈಸ್ವಾಲ್-ಸ್ಯಾಮ್ಸನ್ ಜತೆಯಾಟದಲ್ಲಿ 35 ರನ್ ಒಟ್ಟುಗೂಡಿತು. 112ಕ್ಕೆ 4 ವಿಕೆಟ್ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್-ಹೆಟ್‍ಮೈರ್ ಸಿಡಿದು ನಿಂತು 45 ರನ್ ಜತೆಯಾಟ ನಿಭಾಯಿಸಿದರು.ಆರ್‍ಸಿಬಿ ಆಸೆಯೆಲ್ಲ ನೆಲಸಮವಾಯಿತು.ಆರ್‍ಸಿಬಿ ನಿಧಾನ ಆರಂಭ: ಆರ್‍ಸಿಬಿ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಬೌಲ್ಟ್ ಎಸೆತಗಳು ಆರಂಭದಲ್ಲೇ ಭಾರೀ ಸ್ವಿಂಗ್ ಆಗುತ್ತಿದ್ದವು.

ಹೀಗಾಗಿ ರನ್ ಗಳಿಕೆ, ದೊಡ್ಡ ಹೊಡೆತ ಸುಲಭವಾಗಿರಲಿಲ್ಲ. ಕೊಹ್ಲಿ-ಫಾ ಡು ಪ್ಲೆಸಿಸ್ ಬಹಳ ಎಚ್ಚರಿಕೆಯಿಂದ ಆಡುತ್ತ 4.4 ಓವರ್‍ಗಳನ್ನು ನಿಭಾಯಿಸಿದರು. 37 ರನ್ ಒಟ್ಟುಗೂಡಿತು. ಆಗ ರೋವ¾ನ್ ಪೊವೆಲ್ ಪಡೆದ ಅದ್ಭುತ ಕ್ಯಾಚ್‍ಗೆ ಡು ಪ್ಲೆಸಿಸ್ (17) ವಿಕೆಟ್ ಉರುಳಿತು. ಬೌಲ್ಟ್ ಮೊದಲ ಯಶಸ್ಸು ತಂದಿತ್ತರು.
ಕ್ಯಾಮರಾನ್ ಗ್ರೀನ್ ಮತ್ತು ರಜತ್ ಪಾಟಿದಾರ್ ಕೂಡ ರಾಜಸ್ಥಾನ್ ಬೌಲಿಂಗ್ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸತೊಡಗಿದರು.

ಅರ್ಧ ಹಾದಿ ಕ್ರಮಿಸುವಾಗ ಆರ್‍ಸಿಬಿ 2 ವಿಕೆಟಿಗೆ 76 ರನ್ ಮಾಡಿತ್ತು. 13ನೇ ಓವರ್‍ನಲ್ಲಿ ಅಶ್ವಿನ್ ಆರ್.ಸಿಬಿಗೆ ಅವಳಿ ಆಘಾತವಿಕ್ಕಿದರು. ಸತತ ಎಸೆತಗಳಲ್ಲಿ ಗ್ರೀನ್ ಮತ್ತು ಮ್ಯಾಕ್ಸ್ ವೆಲ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಗ್ರೀನ್ ಗಳಿಕೆ 27 ರನ್.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು