LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಪ್ರಫುಲ್, ಸಕಿಬ್ ದಾಳಿಗೆ ಸಿಲುಕಿ ಹೆಂಗೆಂಗೋ ಆಡಿದ ಆರ್.‌ ಆರ್ !

ಇದಕ್ಕೇ ಹೇಳುವುದು ಐಪಿಎಲ್ ಎಂದರೆ ಅಚ್ಚರಿಗಳ ಮೂಟೆ ಎಂದು! ಸೀಸನ್ ನಲ್ಲಿ ಆಡಿದ್ದ ನಾಲ್ಕೂ ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಘಾತ ನೀಡಿದ್ದು ಸನ್ ರೈಸರ್ಸ್ ತಂಡದ ಪರವಾಗಿ ಪದಾರ್ಪಣೆ ಪಂದ್ಯವನ್ನಾಡಿದ ಅಬ್ಬಾ ಪ್ರಫುಲ್ ಕುಮಾರ್ ಹಿಂಗೆ(34ಕ್ಕೆ 4) ಮತ್ತು ಸಕಿಬ್ ಹುಸೇನ್(24ಕ್ಕೆ 2)! ಇಬ್ಬರು ಮಧ್ಯಮವೇಗಿಗಳ ಬಿಗು ದಾಳಿಗೆ ನಿರುತ್ತರವಾದ ರಿಯಾನ್ ಪರಾಗ್ ಬಳಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಮುಂದೆ 57 ರನ್ ಗಳ ಸೋಲೊಪ್ಪಿಕೊಂಡಿತು.
ಈ ಗೆಲುವಿನ ಮೂಲಕ ಆಡಿರುವ 5 ರಪದ್ಯಗಳಲ್ಲಿ 2 ಗೆಲುವು ಮತ್ತು 3 ಸೋಲಿನೊಂದಿಗೆ 4 ಅಂಕ ಸಂಪಾದಿಸಿರುವ ಸನ್ ರೈಸರ್ಸ್ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ಸೀಸನ್ ನಲ್ಲಿ ಮೊದಲ ಸೋಲಾಗಿದ್ದರೂ 5 ಪಂದ್ಯಗಳಲ್ಲಿ 4ನ್ನು ಗೆದ್ದು 8 ಅಂಕ ಹೊಂದಿರುವ ರಾಜಸ್ಥಾನ ರಾಯಲ್ಸ್ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಏಪ್ರಿಲ್ 13ರ ಸೋಮವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ರಾಜಸ್ಥಾನ ರಾಯಲ್ಸ್ ತಂಡ 19 ಓವರ್ ಗಳಲ್ಲಿ 159 ರನ್ ಗಳಿಗೆ ಆಲೌಟ್ ಆಯಿತು. ಪದಾರ್ಪಣೆ ಪಂದ್ಯದಲ್ಲೇ 4 ವಿಕೆಟ್ ಪಡೆದ ಪ್ರಫುಲ್ ಕುಮಾರ್ ಹಿಂಗೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮೊದಲ ಓವರ್ ನಲ್ಲೇ ಹೊಡೆತ ನೀಡಿದ್ದು ಪ್ರಫುಲ್ ಹಿಂಗೆ. ವೈಭವ್ ಸೂರ್ಯವಂಶಿ, ಧ್ರುವ್ ಜ್ಯುರೆಲ್ ಮತ್ತು ಲೌನ್ ಡ್ರೆ ಪ್ರೆಟೋರಿಯಸ್ ಅವರನ್ನು ಓವರ್ ಮುಗಿಯುವುದರೊಳಗೆ ಪೆವಿಲಿಯನ್ ಗೆ ಅಟ್ಟಿದ್ದು ರಾಜಸ್ಥಾನ ರಾಯಲ್ಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅಂದರೆ ರಾಜಸ್ಥಾನ ರಾಯಲ್ಸ್ 1 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಇಷ್ಟೂ ಸಾಲದೆಂಬಂತೆ 2ನೇ ಓವರ್ ನಲ್ಲಿ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಅನ್ನೂ ಕಿತ್ತ ಸಕಿಬ್ ಹುಸ್ಸೇನ್ ಅದಾಗಲೇ ರಾಜಸ್ಥಾನ ರಾಯಲ್ಸ್ ಗೆ ಆಗಿದ್ದ ಗಾಯದ ಮೇಲೆ ಬರೆ ಎಳೆದರು. ಅಲ್ಲಿಗೆ
ತಂಡ 2 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಂತಾಯಿತು. ಇದು ಇಲ್ಲಿಗೇ ನಿಲ್ಲಲಿಲ್ಲ. 3ನೇ ಓವರ್ ಎಸೆದ ಪ್ರಫುಲ್ ಹಿಂಗೆ ನಾಯಕ ರಿಯಾನ್ ಪರಾಗ್ ಅವರನ್ನೂ ಔಟ್ ಮಾಡಿದರು. ಸಕಿಬ್ ಹುಸೇನ್ ಕಮಾಲ್ 15ನೇ ಓವರ್ ನಲ್ಲಿ ಮತ್ತೆ ದಾಳಿಗೆ ಇಳಿದ ಸಕಿಬ್ ಹುಸೇನ್ ಅವರು ಸೆಟ್ ಆಗಿದ್ದ ಫೆರೇರಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮುಂದಿನ ಓವರ್ ನಲ್ಲೇ ಇಶಾನ್ ಮಾಲಿಂಗ ಅವರು ರವೀಂದ್ರ ಜಡೇಜಾ ಅವರನ್ನು ಪೆವಿಲಿಯನ್ ಗೆ ಅಟ್ಟಿದರು. ಅಲ್ಲಿಗೆ ರಾಜಸ್ಥಾನ ತಂಡದ ಹೋರಾಟ ಮುಗಿಯಿತು. ಅಂತಿಮ ಹಂತದಲ್ಲಿ ತುಷಾರ್ ದೇಶಪಾಂಡೆ(11 ಎಸೆತದಲ್ಲಿ 25) ಗುಡುಗಿದರೂ ಪ್ರಯೋಜನ ಆಗಲಿಲ್ಲ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು