LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಸವಾಲು ಗೆದ್ದ ಸಂಜು ಸ್ಯಾಮ್ಸನ್

ಪಾರ್ಲ್: ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಮೇಲೆ ಸದಾ ದೊಡ್ಡದೊಂದು ಅಪವಾದ ಇರುತ್ತಿತ್ತು. ಇವರು ಲಭಿಸಿದ ಅವಕಾಶವನ್ನು ಉಪಯೋಗಿಸಿಕೊಳ್ಳುವುದಿಲ್ಲ, ಸುಲಭದಲ್ಲಿ ವಿಕೆಟ್ ಕೈಚೆಲ್ಲುತ್ತಾರೆ, ಅಗ್ಗಕ್ಕೆ ಔಟಾಗುತ್ತಾರೆ ಹೀಗೆ. ಈ ಕಾರಣಕ್ಕಾಗಿ ವಿಶ್ವಕಪ್ ತಂಡದಲ್ಲೂ ಇವರಿಗೆ ಸ್ಥಾನ ತಪ್ಪಿತ್ತು.

ಆದರೆ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗುವುದರೊಂದಿಗೆ ಅಜ್ಞಾತವಾಸದಿಂದ ಮುಕ್ತರಾದರು. ಇದೀಗ ನಿರ್ಣಾಯಕ ಏಕದಿನದಲ್ಲಿ ಸೆಂಚುರಿ ಬಾರಿಸಿ ಭಾರತದ ಸರಣಿ ಗೆಲುವಿನ ಹೀರೋ ಆಗಿ ಮೂಡಿಬಂದಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ಸಂಜು ಸ್ಯಾಮ್ಸನ್, ಕಳೆದ 3-4 ತಿಂಗಳು ನನ್ನ ಪಾಲಿಗೆ ದೊಡ್ಡ ಮಾನಸಿಕ ಸವಾಲಾಗಿ ಪರಿಣಮಿಸಿತ್ತು.

ಈ ಒತ್ತಡವನ್ನೆಲ್ಲ ನಿಭಾಯಿಸಿ ಈ ಪ್ರವಾಸಕ್ಕೆ ಅಣಿಯಾದೆ. ಈಗ ನಿರಾಳನಾಗಿದ್ದೇನೆ, ಮಾನಸಿಕ ಸವಾಲು ಗೆದ್ದಿದ್ದೇನೆ. ಬಹಳ ಸಂತೋಷವಾಗಿದೆ ಎಂಬುದಾಗಿ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ ಸಂಜು ಸ್ಯಾಮ್ಸನ್ ಹೇಳಿದರು.
ಸಂಜು ಅವರ 108 ರನ್ ಸಾಹಸದಿಂದ ಪಾರ್ಲ್ ಪಂದ್ಯದಲ್ಲಿ ಭಾರತ 8 ವಿಕೆಟಿಗೆ 296 ರನ್ ಬಾರಿಸಿತು.

ಜವಾಬಿತ್ತ ದಕ್ಷಿಣ ಆಫ್ರಿಕಾ 45.5 ಓವರ್‍ಗಳಲ್ಲಿ 218ಕ್ಕೆ ಕುಸಿಯಿತು. ಭಾರತ 2-1 ಅಂತರದಿಂದ ಸರಣಿ ಜಯಿಸಿತು. ಸಂಜು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನನ್ನ ಜೀನ್ಸ್‍ನಲ್ಲೇ ಕ್ರೀಡೆ ಇದೆ. ತಂದೆ ಕೂಡ ಕ್ರೀಡಾಪಟು. ಎಷ್ಟೇ ಹಿನ್ನಡೆಯಾದರೂ ಬೌನ್ಸ್ ಬ್ಯಾಕ್ ಒಂದೇ ನಮ್ಮ ಮುಂದಿರುವ ಹಾದಿ ಎಂಬುದಾಗಿ ಹೇಳಿದರು.ನಾನು ಸ್ಕೋರ್‍ಬೋರ್ಡ್ ಕಡೆ ನೋಡಲೇ ಇಲ್ಲ. ಮೊದಲು ಇನ್ನಿಂಗ್ಸ್ ಬೆಳೆಸಬೇಕಿತ್ತು. ತಿಲಕ್ ಜತೆಗೂಡಿದ ಬಳಿಕ ಬ್ಯಾಟಿಂಗ್ ಸರಾಗವಾಗಿ ಸಾಗಿತು ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು