LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಭದ್ರತಾ ಲೋಪ: 8 ಸಿಬ್ಬಂದಿ ಅಮಾನತು

ದೆಹಲಿ: ಸಂಸತ್ತಿನಲ್ಲಾದ ಭದ್ರತಾ ಲೋಪದ ಹಿನ್ನೆಲೆಯಲ್ಲಿ 8 ಸಿಬ್ಬಂದಿಯನ್ನು ಲೋಕಸಭೆ ಕಾರ್ಯಾಲಯ ಅಮಾನತುಗೊಳಿಸಿದೆ. ಬುಧವಾರ ಸಂಸತ್ತಿನ ಭದ್ರತೆಯಲ್ಲಿ ಭಾರೀ ಲೋಪವಾಗಿತ್ತು, ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಸಂಸದರಿದ್ದ ಸ್ಥಳಕ್ಕೆ ಆಗಮಿಸಿ ಅಶ್ರುವಾಯು ಸಿಡಿಸಿದ್ದರು.

ಈ ಘಟನೆ ಕುರಿತು ಲೋಕಸಭೆ ಸೆಕ್ರಟರಿಯೇಟ್ ಮಹತ್ವದ ಕ್ರಮ ಕೈಗೊಂಡಿದೆ. ಭದ್ರತಾ ಉಲ್ಲಂಘನೆಗಾಗಿ 8 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಂಸತ್ತಿನ ಭದ್ರತಾ ಲೋಪದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಾಗರ್ ಶರ್ಮಾ, ಮನೋರಂಜನ್, ನೀಲಂ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಯೋಜನೆಯನ್ನು 6 ಮಂದಿ ಒಟ್ಟಾಗಿ ಯೋಜಿಸಿದ್ದರು, ನಾಲ್ಕು ಜನರು ಒಂದೇ ಗುಂಪಿನ ಭಾಗವಾಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ 120 ಬಿ(ಕ್ರಿಮಿನಲ್ ಪಿತೂರಿ), 452(ಅನುಮತಿ ಇಲ್ಲದೆ ಪ್ರವೇಶ), 153(ಗಲಭೆಗೆ ಪ್ರಚೋದನೆ), 186(ಸಾರ್ವಜನಿಕ ಸೇವೆಗೆ ಅಡ್ಡಿಪಡಿಸುವುದು)ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST