ಆನೇಕಲ್: ರಾಜ್ಯ ರಾಜಧಾನಿಯಲ್ಲಿ ಅಕ್ರಮ ಗನ್ ಡೀಲಿಂಗ್ ನಡೆಸುತ್ತಿದ್ದ ಗ್ಯಾಂಗನ್ನ ಆನೇಕಲ್ ಪೊಲೀಸರು ಬೇಟೆಯಾಡಿದ್ದಾರೆ. ಗನ್ ಡೀಲಿಂಗ್ ನಡೆಸುತ್ತಿದ್ದ 7 ಆರೋಪಿಗಳನ್ನ ಆನೇಕಲ್ ಪೊಲೀಸರು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಬಂಧಿಸಿದ 7 ಮಂದಿ ಪೈಕಿ 6 ಮಂದಿ ನಟೋರಿಯಸ್ ರೌಡಿ ಶೀಟರ್‌ಗಳಾಗಿದ್ದಾರೆ. ಬಂಧಿತರನ್ನ ಪ್ರದೀಪ್ ರಮೇಶ್, ಮನೋಜ್ @ ಜಾಕಿ, ರಿಜ್ವಾನ್ ಪಾಷ @ ಕುಳ್ಳ ರಿಜ್ವಾನ್, ನಂಜಪ್ಪ @ ಡೆಡ್ಲಿ ನಂಜ, ವೆಂಕಟರಾಜು @ ತುಕಡಿ, ಗೋಪಿ @ ಸುಣವಾರ ಗೋಪಿ, ಶಿವರಾಜ್ ಎಂದು ಗುರುತಿಸಲಾಗಿದೆ.