LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

"ಮೋದಿಯನ್ನು ತೆಗಳಿ, ರಾಹುಲ್ ಗಾಂಧಿಯನ್ನು ಹೊಗಳಿದ: ಶಹೀದ್ ಅಫ್ರಿದಿ"

ಪಾಕಿಸ್ತಾನ ತಂಡ, ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ದ ಹೀನಾಯವಾಗಿ ಸೋಲುಂಡಿತ್ತು. ಮ್ಯಾಚೂ ಹೋಯಿತು, ಮರ್ಯಾದೆಯೂ ಹೋಯಿತು
ಎನ್ನುವ ಹಾಗೇ, ಭಾರತದ ಆಟಗಾರರು, ಪಾಕಿಸ್ತಾನದ ಆಟಗಾರರ ಹಸ್ತಲಾಘವವೂ ಮಾಡದೇ ಡ್ರೆಸ್ಸಿಂಗ್ ರೂಮಿಗೆ ಹೋಗಿದ್ದರು. ಅಂತರರಾಷ್ಟಿçÃಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ
ಭಾರತ ತಂಡ ಮಾಡಿದ ಉದ್ದೇಶಪೂರ್ವಕ ಅವಮಾನವಿದು ಎಂದು ಪಾಕಿಸ್ತಾನದವರು ಬೊಬ್ಬೆ ಇಡುತ್ತಿದ್ದಾರೆ. ಇದರ ಭಾಗವಾಗಿ, ಪಾಕಿಸ್ತಾನ ತಂಡದ ಮಾಜಿ ನಾಯಕ ಶಹೀದ್
ಅಫ್ರಿದಿ, ಭಾರತದ ವಿರುದ್ದ, ಅದರಲ್ಲೂ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದ್ದಾರೆ.

ಪಾಕಿಸ್ತಾನದ ಹೆಚ್ಚಿನ ಮಾಜಿ ಆಟಗಾರರು, ಭಾರತವನ್ನು ಟೀಕಿಸುವ ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ. ಆದರೆ, ಅವರ ಟೀಕೆಗಳು ಕ್ರೀಡೆಗೆ ಸೀಮಿತವಾಗಿದ್ದರೆ, ಅಫ್ರಿದಿ
ಅಧಿಕ ಪ್ರಸಂಗ ತುಸು ಜಾಸ್ತಿಯೇ. ಕ್ರೀಡೆ ಜೊತೆಗೆ ರಾಜಕೀಯ ಬೆರೆಸಿ ಮಾತನಾಡುವ ವ್ಯಕ್ತಿ ಈತ. "ಕೊಳಕು ಮನಸ್ಥಿತಿಯ ಮೈಂಡ್ ಸೆಟ್ ಇರುವವರು ಇಂತಹ ಕೆಲಸವನ್ನು ಮಾಡುತ್ತಾರೆ.
ಅವರು (ನರೇಂದ್ರ ಮೋದಿ) ಯಾವತ್ತಿನವರೆಗೆ ಅಧಿಕಾರದಲ್ಲಿ ಇರುತ್ತಾರೋ, ಈ ರೀತಿಯ ವಿದ್ಯಮಾನಗಳು ಮುಂದುವರಿಯುತ್ತಲೇ ಇರುತ್ತದೆ" ಎಂದು ಅಫ್ರಿದಿ ಹೇಳಿದ್ದಾರೆ. ಪಾಕಿ ಸ್ತಾನದ ಟಿವಿಯ ಸಂವಾದದಲ್ಲಿ ಮಾತನಾಡುತ್ತಾ, ಅಫ್ರಿದಿ ಈ ಮಾತನ್ನು ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡುವುದಾದರೆ, ಅವರೊಬ್ಬ ಪಾಸಿಟಿವ್ ಮೈಂಡ್ ಸೆಟ್ ಇರುವ ರಾಜಕಾರಣಿ. ಮಾತುಕತೆಯ ಮೂಲಕ, ಎಲ್ಲರ ಜೊತೆ ಬೆರೆತು ಮುಂದಕ್ಕೆ ಹೋಗಲು ಬಯಸುತ್ತಾರೆ. ಆದರೆ, ಅವರು (ಮೋದಿ) ಪಾಕಿಸ್ತಾನವನ್ನು ಇಸ್ರೇಲ್ ಅಥವಾ ಗಾಜಾದ ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಶಹೀದ್ ಅಫ್ರಿದಿ ಕಿಡಿಕಾರಿದ್ದಾರೆ. ಇನ್ನು, ಭಾರತದ ವಿರುದ್ದ ಸೋತಿದ್ದಕ್ಕೆ, ಪಾಕಿಸ್ತಾನದಲ್ಲಿ ಟಿವಿ ಒಡೆದು ಹಾಕುವ ಸಂಪ್ರದಾಯ ಮುಂದುವರಿದಿದೆ. ಇನ್ನು, ಅಫ್ರಿದಿ ಹೇಳಿಕೆಯ ಟ್ವೀಟಿಗೆ ಹಲವು ಕಾಮೆಂಟುಗಳು ಬAದಿವೆ. ರಾಹುಲ್ ಗಾಂಧಿ ಕೂಡಾ ಭಾರತ ವಿರೋಧಿಗಳು ಮಾತನಾಡುವ ರೀತಿಯಲ್ಲಿ ಮಾತನಾಡುತ್ತಾರೆ. ಹಾಗಾಗಿ, ಅಫ್ರಿದಿಗೆ ರಾಹುಲ್ ರಾಜಕಾರಣ, ಸರಿ ಅನಿಸಿರಬಹುದು ಎನ್ನುವ ವ್ಯಂಗ್ಯ ಕಾಮೆಂಟೂ ಬಂದಿವೆ.

ಹಫೀಜ್ ಸಯೀದ್ ನಂತರ ಶಹೀದ್ ಅಫ್ರಿದಿ, ಈಗ ರಾಹುಲ್ ಗಾಂಧಿಯವರನ್ನು ಹೊಗಳುತ್ತಿದ್ದಾರೆ, ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಭಾರತ ವಿರೋಧಿಗಳು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಜೊತೆ ಒಡನಾಟವನ್ನು ಹೊಂದಿರುತ್ತಾರೆ ಎಂದು ಬಿಜೆಪಿಯ ವಕ್ತಾರ ಶೆಹಜಾದ್ ಪೂನಾವಾಲ ವ್ಯಂಗ್ಯವಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು