LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಆತ್ಮ ಸತ್ಯ, ದೇಹ ಸುಳ್ಳು: ಕೈವಾರದಲ್ಲಿ ಶಿವರಾತ್ರಿ ಪ್ರವಚನ

ಚಿಂತಾಮಣಿ: ಶಿವರಾತ್ರಿ ಎಂದರೇ ಪರಮಾತ್ಮ ಶಿವ ಅಜ್ಞಾನವನ್ನು ದೂರಮಾಡಿ ಜ್ಞಾನದ ಬೆಳಕನ್ನು ನೀಡಲು ಬರುತ್ತಾರೆ. ಶಿವನ ರೂಪ ಜ್ಯೋತಿ ರೂಪ ಅಂದರೆ ಬಿಂದು ಸ್ವರೂಪ ಶಂಕರ ಆಕಾರ ರೂಪದಲ್ಲಿ ಅದರಿಂದ ಶಿವ ಕಲ್ಯಾಣಕಾರಿ ಶಂಕರ ವಿನಾಶಕರೀ ಎಂದು ಹೇಳುತ್ತಾರೆ.
ಶಿವ ಜ್ಞಾನವನ್ನು ಕೊಟ್ಟು ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತಾನೆ. ಆತ್ಮನು ಜ್ಞಾನ ಯೋಗದಿಂದ ಸಂಪನ್ನ ಮಾಡಲು ಬರುವುದರಿಂದ ಶಿವರಾತ್ರಿ ಎಂದು ಹೇಳುತ್ತಾರೆ. ಆತ್ಮ ಸತ್ಯ, ದೇಹ ಸುಳ್ಳು , ಮನುಷ್ಯ ಮರಣ ಹೊಂದಿದಾಗ ಸತ್ಯ ಆತ್ಮದ ಜೊತೆ ಹೋಗುತ್ತದೆ. ಸುಳ್ಳು ದೇಹದ ಜೊತೆನಾಶ ಹೊಂದುತ್ತದೆ. ಭಗವಂತನಿಗೆ ನಾವು ಏನಾದ್ರೂ ಕೊಡುಗೆ ನೀಡಬೇಕಾದರೆ ಶಿವನ ಸ್ಮರಣೆಗೆ ಸಮಯವನ್ನು ನೀಡಿರಿ. ನರಕವಾಗಿರುವ ಭೂಮಿಯನ್ನು ಸ್ವರ್ಗ ಮಾಡಲು ಭಗವಂತನು ಅವತರಿಸಿದ ದಿನವನ್ನು ಶಿವರಾತ್ರಿ ಎಂದು ಕರೆಯುತ್ತಾರೆ. ಎಂದು ಕೈವಾರ ಶಾಖೆಯ ಸಂಚಾಲಕಿ ಬಿ ಕೆ ಸರೋಜಾ ಅಕ್ಕನವರು ಶಿವರಾತ್ರಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಚಿಂತಾಮಣಿ ತಾಲೂಕಿನ ಕೈವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಶ್ರದ್ದಾ ಭಕ್ತಿಯಿಂದ ಶಿವರಾತ್ರಿ ಆಚರಣೆ ಮಾಡಲಾಯಿತು. ಶಿಕ್ಷಕ ಶ್ರೀಧರ ಹಿರೇಮಠ್ ಮಾತನಾಡಿ ಶಿವರಾತ್ರಿ ಅಂದು ಶಿವನಿಗೆ ಪ್ರಿಯವಾದ ಹೃದಯದ ಆಕಾರ ಇರುವ ಬಿಲ್ವ ಪತ್ರಿಯನ್ನು ಶಿವನಿಗೆ ಅರ್ಪಿಸುವದರಿಂದ ಆತ್ಮ ಪರಮಾತ್ಮ ಒಂದಾಗುತ್ತಾರೆ. ಆಗ ಮನಸ್ಸು ಪ್ರಶಾಂತವಾಗಿ ಏಕಾಗ್ರತೆಯಿಂದ ಶಿವನ ಸ್ಮರಣೆ ಮಾಡಬಹುದು. ಬಿಲ್ವ ಪತ್ರಿಯಲ್ಲಿ ಆಮ್ಲಜನಕ ಹೆಚ್ಚಾಗಿರುವುದರಿಂದ ಉಸಿರಾಟ ಕ್ರಿಯೆ ಉತ್ತಮಗೊಳ್ಳುವುದು ಮತ್ತು ಶಿವರಾತ್ರಿ ಸಮಯದಲ್ಲಿ ಉಪವಾಸ ಮತ್ತು ಜಾಗರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬ ವೈಜ್ಞಾನಿಕ ಕಾರಣ ಒಳಗೊಂಡಿದೆ ಎಂದು ಹೇಳಿದರು. ಕೃಷ್ಣಪ್ಪ ಅವರು ಮಾತನಾಡಿ ಸತ್ಯ ಶಿವರಾತ್ರಿ ಬಗ್ಗೆ ತಿಳಿಸಿ ಕೊಟ್ಟರು. ಮುಂಜಾನೆ ಶಿವಲಿಂಗವನ್ನು ಸ್ಥಾಪನೆ ಮಾಡಿ ವಿಶೇಷ ಪೂಜೆ ಮಾಡಲಾಯಿತು. ಶಿವನ ಸಾಕ್ಷಾತಕಾರ ಕ್ಕೆ ಧ್ವಜಾರೋಹಣ ಮಾಡಲಾಯಿತು.
ವಾಹನದ ಮೇಲೆ ಶಿವಲಿಂಗವನ್ನು ಸ್ಥಾಪಿಸಿ ಕೈವಾರ ಸುತ್ತ ಮುತ್ತ ಗ್ರಾಮಗಳಲ್ಲಿ ಸಂಚರಿಸಿ ಶಿವನ ವಾಣಿಯನ್ನು ತಿಳಿಸುತ್ತ ಮೆರವಣಿಗೆ ಮೂಲಕ ರಥ ಯಾತ್ರೆ ಮಾಡಲಾಯಿತು. ಸಂಜೆ ಶಿವರಾತ್ರಿ ಪ್ರವಚನ, ಮಕ್ಕಳಿಂದ ಭರತ ನಾಟ್ಯ, ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಮಾದೇವಿ, ಸುಜಾತಾ, ಶಾರದಕ್ಕ, ಕೃಷ್ಣಪ್ಪ, ಪುಷ್ಪಕ್ಕ, ಲೊಕೇಶಪ್ಪ, ಸುನೀತಾ, ಶ್ರೀನಿವಾಸ್, ಸೋಮು, ಅರುಣಾ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು