LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಮಹಾ ಮೋಸಗಾರ ಸಿದ್ದರಾಮಯ್ಯ: ಗೋವಿಂದ ಕಾರಜೋಳ

ಬೆಂಗಳೂರು: ಬಡವರ ಮನಸ್ಸನ್ನು ಕದ್ದು ಅಧಿಕಾರಕ್ಕೆ ಬರುವುದು ಅಷ್ಟೇ ನಿಮ್ಮ ಧ್ಯೇಯ. ಮಹಾ ಮೋಸಗಾರ ಸಿದ್ಧರಾಮಯ್ಯ. ನಿಮ್ಮ ಖುರ್ಚಿ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದೀರಿ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ದಲಿತ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾರಜೋಳ ಮಾತನಾಡಿ, ನಿನ್ನೆ ದಿನ ಬೆಟ್ಟ ಅಗೆದು ಇಲಿ ಹುಡುಕಿದ್ದಾರೆ. ಅವರ ಬೆನ್ನನ್ನು ಅವರೇ ತಟ್ಟಿಕೊಂಡಿದ್ದಾರೆ. ಸಿಎಂಗೆ ನನ್ನ ಪ್ರಶ್ನೆ. ನೀವೇ ರಚನೆ ಮಾಡಿದ ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕ ಎಂದಿದ್ದೀರಾ? ಶಾಲಿನಿ ರಜನೀಶ್ ಅವರ ವರದಿ ಸರಿ ಇದೆ ಅಂದಿದ್ದೀರಾ? ನಾಗಮೋಹನ್ ದಾಸ್ 17% ಇತ್ತು. 15% ಗೆ ಅದನ್ನು ಸಿಮೀತ ಮಾಡಬಹುದಿತ್ತು. ಏಕೆ ಮಾಡಲಿಲ್ಲ? ಪ್ರಶ್ನಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ದಲಿತ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಎಂ ಅವರೇ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅಂತೀರಾ. ನೀವು ಸಾವಿರಾರು ಕೋಟಿ ವೆಚ್ಚ ಮಾಡಿ ವರದಿ ತರಿಸುತ್ತೀರಿ. ಅಹಿಂದ ವರ್ಗದ ಬಗ್ಗೆ ಬದ್ಧತೆ ಇದ್ದರೆ, ಕೆಂಪರಾಜು ಆಯೋಗದ ವರದಿ ಮೂಲೆಗುಂಪು ಮಾಡಿದ್ರಿ. ಜಯಪ್ರಕಾಶ್ ಹೆಗ್ಡೆ ವರದಿ ಮೂಲೆಗುಂಪು. ಮಧುಸೂದನ್ ನಾಯಕ್ ವರದಿ ಮೂಲೆಗುಂಪು. ಎಲ್ಲಿದೆ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಹೇಳುತ್ತಾರೆ. ಇತ್ತೀಚೆಗೆ ಸಿದ್ಧರಾಮಯ್ಯನವರು ರಾಜಕಾರಣಿ ಆಗಿದ್ದಾರೆ ಅಂತಾರೆ. ಕೆ.ಎನ್.ರಾಜಣ್ಣ ಅವರು ಹೇಳುತ್ತಾರೆ ಸಿದ್ಧರಾಮಯ್ಯರಿಗೆ ಬದ್ಧತೆ ಇಲ್ಲ ಅಂತಾರೆ. ಇದನ್ನು ನಾವು ಹೇಳುತ್ತಿಲ್ಲ, ಅವರ ಪಕ್ಷ ನಾಯಕರೇ ಹೇಳುತ್ತಾರೆ ಎಂದರು.
ನಾನು ಎಲ್ಲ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಸೇರಿದಂತೆ ಎಲ್ಲರಿಗೂ ಮನವಿ ಮಾಡುತ್ತೇನೆ. ಸಿದ್ಧರಾಮಯ್ಯನವರು ನಿಮ್ಮನ್ನು ಯಾವುದೇ ಕಮಿಷನ್‌ಗೆ ಅಧ್ಯಕ್ಷರಾಗಿ ನೇಮಕ ಮಾಡಿದ್ರೆ, ದಯಮಾಡಿ ಒಪ್ಪಿಕೊಳ್ಳಬೇಡಿ. ನಿಮಗೆ ಅವಮಾನ ಮಾಡುವ ಕೆಲಸ ಸಿದ್ಧರಾಮಯ್ಯ ಮಾಡುತ್ತಾರೆ. ಮೀಸಲಾತಿ ವಿಚಾರದಲ್ಲಿ ಅವರು ಮಾಡಿರುವುದು ಯಾರೂ ಒಪ್ಪುವುದಿಲ್ಲ. ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗ, ಸುಪ್ರೀಂಕೋರ್ಟ್ ಆದೇಶ ಯಾವುದೂ ಇಲ್ಲದೇ ತೀರ್ಮಾನ ಮಾಡಿದ್ದಾರೆ. ಕೆಲವರನ್ನು ಸಾಕಿದ್ದಾರೆ ಸಿದ್ಧರಾಮಯ್ಯನವರು. ಸಿದ್ಧರಾಮಯ್ಯರನ್ನು ಅಂಬೇಡ್ಕರ್ ಗೆ ಹೋಲಿಸುತ್ತಾರೆ. ಸಿದ್ಧರಾಮಯ್ಯರಿಗೆ ಹಾಲು ತುಪ್ಪದ ಸ್ನಾನ ಮಾಡಿಸುತ್ತಾರೆ. ಅವರಿಗೆ ಗಂಡನ ಮನೆ, ತವರು ಮನೆ ವ್ಯತ್ಯಾಸ ಗೊತ್ತಿಲ್ಲ. ಅಂತಹವರು ಇದನ್ನು ಒಪ್ಪುತ್ತಾರೆ ಎಂದರು.
ನಾವು ಮಾಡಿದ್ದು ವೈಜ್ಞಾನಿಕವಾಗಿತ್ತು. 17% ಗೆ ನಾವು ಮಾಡಿದ್ದೇವೆ. ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವರದಿ ತೆಗೆದುಕೊಂಡು, 17% ಹಂಚಿಕೆ ಮಾಡಿದ್ದೇವೆ. 6% ಎ ಗುಂಪಿಗೆ ಮಾದಿಗರು ಮತ್ತು ಉಪಜಾತಿಗಳಿಗೆ. 1% ಅಲೆಮಾರಿಗಳಿಗೆ ಕೊಟ್ಟಿದ್ದೇವೆ. ನೀವು ಅಲೆಮಾರಿಗಳಿಗೆ ಹಾಳು ಮಾಡಿದ್ರಿ. ಮೊದಲು ಮೋಸ ಮಾಡುವುದನ್ನು ನಿಲ್ಲಿಸಿ. ಇಲ್ಲಿ ಅನುಷ್ಠಾನ ಮಾಡುವುದು. ಆಮೇಲೆ ಕೋರ್ಟ್ನಲ್ಲಿ ಬಿದ್ದು ಹೋಗುವುದು. ನಾನೇನು ಮಾಡುವುದು ಅಂತಾ ಕೈ ಚೆಲ್ಲುವುದು. ಇಂತಹ ಮೋಸದಾಟ ಬಿಟ್ಟು ಬಿಡಿ ಎಂದ ಗೋವಿಂದ ಕಾರಜೋಳ ಸಲಹೆ ನೀಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು