LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಸಿದ್ಧಾಂತ ಸೇತುವೆ-ಸಾವರ್ಕರ್ ಮತ್ತು ಸಮಕಾಲೀನ ರಾಜಕೀಯ ಚಿಂತನೆ

ಭಾರತೀಯ ರಾಷ್ಟ್ರಚಿಂತನೆಯ ಅಧ್ಯಯನ ದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ವಿನಾಯಕ ದಾಮೋ ದರ ಸಾವರ್ಕರ್ ಎಂಬ ಇಬ್ಬರನ್ನು ಸಾಮಾನ್ಯವಾಗಿ ಪರಸ್ಪರ ವಿರುದ್ಧ ಧ್ರುವಗಳಂತೆ ಚಿತ್ರಿಸುವ ಪ್ರವೃತ್ತಿ ಹೆಚ್ಚು ಕಾಣುತ್ತದೆ. ಆದರೆ, ಡಾ.ಬಿ.ಆರ್. ಅಂಬೇಡ್ಕರ್ ದೃಷ್ಟಿಕೋನದಿಂದ ಸಾವರ್ಕರ್ ಚಿಂತನೆಗಳನ್ನು ಗಮನಿಸಿದರೆ ಚಿತ್ರ ಇನ್ನಷ್ಟು ಸೂಕ್ಷ್ಮವಾಗುತ್ತದೆ.
ಡಾ. ಬಿ.ಆರ್.ಅಂಬೇಡ್ಕರ್, ಸಾವರ್ಕರ್‌ರ ರಾಜಕೀಯ ತತ್ವಗಳಿಗೆ ಸಂಪೂರ್ಣ ಒಪ್ಪಿಗೆ ಸೂಚಿಸಿದವರಲ್ಲ ಆದರೆ ಅವರು ರಾಷ್ಟ್ರೀಯ ಸಂಘಟನೆ, ಸಾಮಾಜಿಕ ದುರ್ಬಲತೆ ಮತ್ತು ರಾಜ್ಯದ ಬಲ ಕುರಿತ ಸಾವರ್ಕರ್ ಒತ್ತಿಹೇಳಿದ ಕೆಲವು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ಚಿಂತಕರಾಗಿದ್ದರು. ಇದೇ ಅಂಶವನ್ನು ಸಮ ತೋಲನದಿಂದ ಓದಿದಾಗ ಭಾರತೀಯ ರಾಷ್ಟ್ರಚಿಂತನೆಯ ಒಳಗಿನ ಸಂವಾದ ಸ್ಪಷ್ಟವಾಗುತ್ತದೆ.
ಡಾ.ಅಂಬೇಡ್ಕರ್ ಅವರ ಮೂಲ ಚಿಂತನೆ ಸಾಮಾಜಿಕ ನ್ಯಾಯದ ಮೇಲೆ ನೆಲೆಯೂರಿತ್ತು. ಅವರ ಅನುಭವವೇ ಅವರಿಗೆ ತಿಳಿಸಿತು. ಜಾತಿ ಆಧಾರಿತ ಅವಮಾನ ಅನುಭವಿಸುತ್ತಿರುವ ಸಮಾಜ ರಾಷ್ಟ್ರದೊಂದಿಗೆ ಆತ್ಮೀಯತೆ ಬೆಳೆಸಲು ಸಾಧ್ಯವಿಲ್ಲ. ಆದ್ದರಿಂದ ಅವರು ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಪ್ರಜಾಸತ್ತಾತ್ಮಕತೆಯನ್ನು ಹೆಚ್ಚು ಮೂಲಭೂತವೆಂದು ಕಂಡರು. ಇದೇ ಸ್ಥಳದಲ್ಲಿ ಸವಾರ್ಕರ್ ಚಿಂತನೆಯೊಂದಿಗೆ ಅವರ ಪ್ರಮುಖ ಭಿನ್ನತೆ ಕಾಣುತ್ತದೆ. ಸಾವರ್ಕರ್ ಸಾಂಸ್ಕೃತಿಕ ಏಕೀಕರಣದ ಮೂಲಕ ಸಮಾಜವನ್ನು ಸಂಘಟಿಸಲು ಒತ್ತಿಹೇಳಿದರೆ, ಡಾ.ಅಂಬೇಡ್ಕರ್ ಪ್ರಶ್ನಿಸಿದರು.
`ಸಮಾನತೆ ಇಲ್ಲದೆ ಆ ಏಕೀಕರಣ ಶಾಶ್ವತವಾಗಬಹುದೇ -ಆದರೆ ಈ ಭಿನ್ನತೆಗಳ ನಡುವೆಯೂ ಡಾ.ಅಂಬೇಡ್ಕರ್, ಸಾವರ್ಕರ್ ಚಿಂತನೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದವರಲ್ಲ ಎಂಬುದು ಗಮನಾರ್ಹ. ಇಬ್ಬರೂ ಒಪ್ಪಿಕೊಂಡ ಒಂದು ಮಹತ್ವದ ವಿಚಾರವೆಂದರೆ, ಅಸ್ಪೃಶ್ಯತೆ ಮತ್ತು ಸಾಮಾಜಿಕ ವಿಭಜನೆ ರಾಷ್ಟ್ರದ ದುರ್ಬಲತೆ. ಅಂಬೇಡ್ಕರ್ ಇದನ್ನು ಕಾನೂನು ಮತ್ತು ಸಂವಿಧಾನದ ಮೂಲಕ ನಿರ್ಮೂಲಗೊಳಿಸಲು ಪ್ರಯತ್ನಿಸಿದರೆ, ಸಾವರ್ಕರ್ ಹಿಂದೂ ಸಮಾಜದ ಒಳಗಿನ ಅಸ್ಪೃಶ್ಯತೆ ವಿರುದ್ಧ ಸಾರ್ವಜನಿಕವಾಗಿ ಮಾತನಾಡಿ ದೇವಸ್ಥಾನ ಪ್ರವೇಶಕ್ಕೆ ಬೆಂಬಲ ನೀಡಿದರು. ವಿಧಾನಗಳಲ್ಲಿ ವ್ಯತ್ಯಾಸ ಇದ್ದರೂ, ಸಮಸ್ಯೆಯ ರಾಷ್ಟ್ರೀಯ ಗಂಭೀರತೆಯನ್ನು ಇಬ್ಬರೂ ಗುರುತಿಸಿದ್ದರು.
ಡಾ.ಅಂಬೇಡ್ಕರ್ ಅವರ ಬರಹಗಳಲ್ಲಿ ಒಂದು ಸ್ಪಷ್ಟ ಲಕ್ಷಣ ಕಂಡುಬರುತ್ತದೆ. ಅವರು ಯಾವ ಚಿಂತಕರನ್ನೂ ಭಾವನಾತ್ಮಕವಾಗಿ ಅಲ್ಲ, ತಾತ್ವಿಕವಾಗಿ ಮೌಲ್ಯಮಾಪನ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಾವರ್ಕರ್ ಕುರಿತು ಅವರ ಪರೋಕ್ಷ ಓದು ಗಮನಾರ್ಹ. ಅಂಬೇಡ್ಕರ್ ಹಲವು ಸಂದರ್ಭಗಳಲ್ಲಿ ದುರ್ಬಲ ಸಮಾಜ ಮತ್ತು ದುರ್ಬಲ ರಾಜ್ಯವು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು. ಇದೇ ಸಮಯದಲ್ಲಿ ಸಾವರ್ಕರ್ ಕೂಡ ಸಂಘಟಿತ ಮತ್ತು ಆತ್ಮಸಜ್ಜಿತ ಸಮಾಜದ ಅಗತ್ಯವನ್ನು ಒತ್ತಿಹೇಳಿದರು. ಈ ಮೂಲ ಚಿಂತೆಯಲ್ಲಿ ಒಂದು ಮಟ್ಟದ ಸಿದ್ಧಾಂತ ಸಮೀಪತೆ ಕಾಣುತ್ತದೆ.
ಆ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧಿ, ಸಾವರ್ಕರ್ ಮತ್ತು ಅಂಬೇಡ್ಕರ್ ನಡುವಿನ ತ್ರಿಕೋನ ವಾದಗಳು ಭಾರ ತೀಯ ರಾಜಕೀಯದ ದಿಕ್ಕನ್ನು ನಿರ್ಧರಿಸಿದವು. ಗಾಂಧಿ ಅಹಿಂಸಾತ್ಮಕ ನೈತಿಕ ರಾಷ್ಟ್ರತೆಯನ್ನು ಮುಂದಿಟ್ಟರೆ, ಸಾವರ್ಕರ್ ಸಿದ್ಧತೆ ಮತ್ತು ಸಾಂಸ್ಕೃತಿಕ ಆತ್ಮಗೌರವವನ್ನು ಒತ್ತಿಹೇಳಿದರು. ಅಂಬೇಡ್ಕರ್ ಈ ಎರಡರ ನಡುವೆ ನಿಂತು ಸಾಮಾಜಿಕ ನ್ಯಾಯವನ್ನು ರಾಷ್ಟ್ರದ ನೈತಿಕ ಆಧಾರವೆಂದು ಪ್ರತಿಪಾದಿಸಿದರು. ಅವರು ಗಾಂಧಿಯವರೊAದಿಗೆ ಕಠಿಣ ವಾದ ನಡೆಸಿದಂತೆಯೇ, ಸಾವರ್ಕರ್ ರೀತಿಯ ಸಾಂಸ್ಕೃತಿಕ ರಾಷ್ಟ್ರತೆಯ ಮೇಲೂ ಮೌನ ವಿಮರ್ಶಾತ್ಮಕ ದೃಷ್ಟಿಯನ್ನು ಕಾಯ್ದುಕೊಂಡಿದ್ದರು.
ಅAಬೇಡ್ಕರ್ ದೃಷ್ಟಿಯಲ್ಲಿ ಯಾವುದೇ ರಾಷ್ಟ್ರತೆಯ ಯೋಜನೆ ಮಾನವ ಗೌರವವನ್ನು ಕೇಂದ್ರದಲ್ಲಿಟ್ಟಾಗ ಮಾತ್ರ ಸ್ಥಿರವಾಗುತ್ತದೆ. ಅವರು ಎಚ್ಚರಿಸಿದರು. ಸಾಮಾಜಿಕ ಅಸಮಾನತೆ ಉಳಿದಿರುವ ಸಮಾಜದಲ್ಲಿ ಕೇವಲ ಸಾಂಸ್ಕೃತಿಕ ತಿಕ ಏಕತೆ ಸಾಕಾಗುವುದಿಲ್ಲ. ಇದೇ ಕಾರಣಕ್ಕೆ ಅವರು ಜಾತಿ ನಿರ್ಮೂಲನೆಗೆ ಸಂವಿಧಾನಾತ್ಮಕ ಭದ್ರತೆ ಅಗತ್ಯವೆಂದು ಒತ್ತಿಹೇಳಿದರು. ಈ ನಿಲುವು ಸಾವರ್ಕರ್ ಒತ್ತಿಹೇಳಿದ ಸಾಂಸ್ಕೃತಿಕ ಏಕೀಕರಣಕ್ಕೆ ಒಂದು ಗಂಭೀರ ತಾತ್ವಿಕ ಸವಾಲಾಗಿತ್ತು. ಆದಾಗ್ಯೂ, ಅಂಬೇಡ್ಕರ್ ಸಾವರ್ಕರ್ ಅನ್ನು ಕೇವಲ ರಾಜಕೀಯ ಪ್ರತಿಸ್ಪರ್ಧಿಯಾಗಿ ಚಿತ್ರಿಸಿಲ್ಲ ಬದಲಾಗಿ ಭಾರತೀಯ ಸಮಾಜದ ಸಂಘಟನೆ ಕುರಿತ ಅವರ ಚಿಂತೆಯನ್ನು ಗಮನಿಸಿದ ಬೌದ್ಧಿಕ ನಿಲುವು ಹೊಂದಿದ್ದರು.
ಸವಾರ್ಕರ್ ಅವರ ರಾಷ್ಟ್ರಭದ್ರತೆ ಕುರಿತ ಅಂಬೇಡ್ಕರ್ ಸಂಪೂರ್ಣ ವಿರೋಧಿಯಾಗಿರಲಿಲ್ಲ ಎಂಬುದನ್ನು ಕೆಲವು ಸಂವಿಧಾನ ಚರ್ಚೆಗಳು ಸೂಚಿಸುತ್ತವೆ. ಸ್ವತಂತ್ರ ಭಾರತ ಬಲಿಷ್ಠವಾಗಿರಬೇಕು, ರಾಜ್ಯದ ಏಕತೆ ಕಾಪಾಡಬೇಕು ಎಂಬ ಅಂಬೇಡ್ಕರ್ ನಿಲುವು, ರಾಷ್ಟ್ರದ ದುರ್ಬಲತೆಯ ಬಗ್ಗೆ ಸಾವರ್ಕರ್ ವ್ಯಕ್ತಪಡಿಸಿದ ಆತಂಕದೊAದಿಗೆ ಒಂದು ಮಟ್ಟದಲ್ಲಿ ಸಂವಾದ ನಡೆಸುವಂತಿದೆ. ಸಮಕಾಲೀನ ನಾಯಕರ ಬಗ್ಗೆ ಅಂಬೇಡ್ಕರ್ ಅವರ ನಿಲುವು ನೋಡಿ ದಾಗ ಅವರ ವಿಮರ್ಶಾತ್ಮಕ ಪ್ರಾಯೋಗಿಕತೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಜವಾಹರಲಾಲ್ ನೆಹರು ಅವರ ಸಮಾಜ ವಾದದ ಬಗ್ಗೆ ಅವರು ಕೆಲವೊಮ್ಮೆ ಸಂಶಯ ವ್ಯಕ್ತಪಡಿಸಿದರೂ, ಸಂವಿಧಾನ ನಿರ್ಮಾಣದಲ್ಲಿ ಸಹಕಾರ ನೀಡಿದರು. ಗಾಂಧಿಯವರೊAದಿಗೆ ತೀವ್ರ ಭಿನ್ನಾಭಿಪ್ರಾಯಗಳಿದ್ದರೂ ರಾಷ್ಟ್ರೀಯ ಹಿತದ ವಿಷಯದಲ್ಲಿ ಅವರು ಹಿಂದೆ ಸರಿಯಲಿಲ್ಲ. ಇದೇ ಮನೋಭಾವದಲ್ಲಿ ಸಾವರ್ಕರ್ ಚಿಂತನೆಗಳನ್ನು ಕೂಡ ಅಂಬೇಡ್ಕರ್ ತಾತ್ವಿಕ ದೂರದಿಂದ ಗಮನಿಸಿದರೆಂಬ ಓದು ಅನೇಕ ಸಂಶೋಧಕರಲ್ಲಿ ಕಾಣುತ್ತದೆ.
ಇಂದಿನ ಕಾಲಘಟ್ಟದಲ್ಲಿ ಅಂಬೇಡ್ಕರ್ ದೃಷ್ಟಿಯಿಂದ ಸಾವರ್ಕರ್ ಮರುಪರಿಶೀಲನೆಗೆ ಹೊಸ ತಿರುವು ಬಂದಿದೆ. ರಾಷ್ಟ್ರತೆ ಕುರಿತ ಚರ್ಚೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಇವರಿಬ್ಬರನ್ನು ಸರಳ ವಿರೋಧದ ಚೌಕಟ್ಟಿನಲ್ಲಿ ಹಾಕುವುದು ಇತಿಹಾಸದ ಸಂಕೀರ್ಣತೆಯನ್ನು ಕುಗ್ಗಿಸುತದೆ. ಅಂಬೇಡ್ಕರ್ ನೀಡಿದ ಮಹತ್ವದ ಪಾಠವೆಂದರೆ- ರಾಷ್ಟ್ರ ಬಲವಾಗಬೇಕಾದರೆ ಸಾಮಾಜಿಕ ನ್ಯಾಯ ಅನಿವಾರ್ಯ. ಸಾವರ್ಕರ್ ಒತ್ತಿಹೇಳಿದ ಅಂಶವೆAದರೆ’ ರಾಷ್ಟ್ರ ಬಲವಾಗಬೇಕಾದರೆ ಸಂಘಟಿತ ಸಾಂಸ್ಕೃತಿಕ ಆತ್ಮವಿಶ್ವಾಸ ಅಗತ್ಯ. ಈ ಎರಡು ಅಂಶಗಳ ನಡುವಿನ ಸಮತೋಲನವೇ ಭಾರತೀಯ ರಾಷ್ಟ್ರಚಿಂತನೆಯ ವಿಶಿಷ್ಟತೆ. ಹೀಗಾಗಿ ಅಂಬೇಡ್ಕರ್ ದೃಷ್ಟಿಕೋನದಿಂದ ಸಾವರ್ಕರ್ ಮತ್ತು ಸಮಕಾಲೀನ ರಾಜಕೀಯ ಚಿಂತನೆಗಳನ್ನು ಓದಿದಾಗ ಒಂದು ಸ್ಪಷ್ಟ ಸಂದೇಶ ಎದುರಾಗುತ್ತದೆ ಭಾರತದ ಬೌದ್ಧಿಕ ಪರಂಪರೆ ವಿರೋಧಗಳ ಕಥೆಯಷ್ಟೇ ಅಲ್ಲ ಅದು ಸಂವಾದಗಳ ಪರಂಪರೆ. ಈ ಸಂವಾದವನ್ನು ಸಮತೋಲನದಿಂದ ಅರಿತಾಗ ಮಾತ್ರ ಭಾರತದ ರಾಷ್ಟ್ರತೆಯ ಆಳ ಮತ್ತು ವ್ಯಾಪ್ತಿ ಸಂಪೂರ್ಣವಾಗಿ ಅನಾವರಣಗೊಳ್ಳುತ್ತದೆ.
ಲೇಖಕರು
ವಿವಾನ್‌ ಅಕ್ಷಯ್

*********************************

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು