LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

"ವಿಜಯಪುರ ಪೊಲೀಸರಿಂದ ಚಡಚಣ ಎಸ್ ಬಿ ಅಯ್ ಬ್ಯಾಂಕ್ ದರೋಡೆ"

ಕೋರರ ಬಂಧನ.: ಎಡಿಜಿಪಿ (ಕಾ.ಸು) ಆರ್.ಹಿತೇಂದ್ರ ಶ್ಲಾಘನೆ ವಿಜಯಪುರ (ಚಡಚಣ): ರಾಜ್ಯವೇ ಬೆಚ್ಚಿ ಬಿಳಿಸುವ ಚಡಚಣ ದ ಬ್ಯಾಂಕ್ ದರೋಡೆ, ದರೋಡೆ
ಕೊರರನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟುವಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಒಳ್ಳೆಯ ಕಾರ್ಯ ಮಾಡಿದೆ ಎಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಎಡಿಜಿಪಿ (ಕಾ.ಸು) ಆರ್.ಹಿತೇಂದ್ರ ತಿಳಿಸಿದರು. ಚಡಚಣ ಪಟ್ಟಣದ ಎಸ್‌ಬಿಐ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಭಾಗಿಯಾದ ಮಹಾರಾಷ್ಟç- ಬಿಹಾರ ಮೂಲದ ನಾಲ್ವರು ಆರೋಪಿಗಳನ್ನು ಒಳಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣ ಬೇಧಿಸುವಲ್ಲಿ ವಿಜಯಪುರ ಪೊಲೀಸರು ಉತ್ತಮ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳಾದ ಬಿಹಾರದ ಸಮಸ್ತಿಪುರ ನಿವಾಸಿಗಳಾದ ರಾಕೇಶ ಕುಮಾರ ಶಿವಾಜಿ ಸಹಾನಿ (೨೨), ರಾಜಕುಮಾರ ರಾಮಲಾಲ್   ಪಾಸ್ವಾನ (೨೧) ಹಾಗೂ ರಕ್ಷಕುಮಾರ ಮದನ ಮಾತೋ (೨೧) ಎಂದು ಗುರುತಿಸಲಾಗಿದೆ. ಮಹಾರಾಷ್ಟç ಮೂಲದ ಆರೋಪಿಯ ಹೆಸರು ಪೊಲೀಸರು ತನಿಖೆಯ ದೃಷ್ಟಿಯಿಂದ ಆತನ ಹೆಸರು ಬಹಿರಂಗೊಳಿಸಲು ಸಧ್ಯ ಆಗದು ಎಂದರು.

ಬ್ಯಾAಕ್ ದರೋಡೆ ಪ್ರಕರಣದಲ್ಲಿ ಒಟ್ಟಾರೆಯಾಗಿ ೯.೦೧ ಕೆಜಿ ಬಂಗಾರ ಹಾಗೂ ೮೬,೩೧,೨೨ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಉಳಿದ ಚಿನ್ನಾಭರಣ, ನಗದು ಹಣವನ್ನು ಅಧಿಕಾರಿಗಳು ಶೀಘ್ರವೇ ಪತ್ತೆ ಹಚ್ಚಲಿದ್ದಾರೆ ಎಂದರು. ಕಳೆದ ತಿಂಗಳ ಸೆ.೧೬ ರಂದು ಸಂಜೆ ೭.೨೦ ರ ಸುಮಾರಿಗೆ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್ ಶಾಖೆಗೆ ನುಗ್ಗಿದ ಮೂವರು ಮುಸುಕುಧಾರಿಗಳು ಸುಮಾರು ೧.೦೪ ಕೋಟಿ ರೂ.ನಗದು ಹಾಗೂ ೨೦ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು..

ಆರೋಪಿತರು ಕೃತ್ಯ ಎಸಗಿ ಪರಾರಿಯಾಗಲು ಬಳಸಿದ್ದ ಮಾರುತಿ ಇಕೋ ಕಾರು, ಮಹಾರಾಷ್ಟç ರಾಜ್ಯದ ಸೊಲ್ಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿತ್ತು. ಅಲ್ಲಿ ಸಾರ್ವಜನಿಕರು ಸೇರಿ ಸುತ್ತು ವರೆಯುತ್ತಿದ್ದಂತೆ ಕಾರಿನ ಚಾಲಕನು ಪಿಸ್ತೂಲ್ ತೋರಿಸಿ, ಸಾರ್ವಜನಿಕರನ್ನು ಬೆದರಿಸಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ, ಈ ಸುಳಿವು ಆಧರಿಸಿ ತನಿಖಾ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿದ್ದ ೮೮೮.೩೩ ಗ್ರಾಂ ಚಿನ್ನದ ಆಭರಣಗಳಿದ್ದ ೨೧ ಪ್ಯಾಕೇಟ್ ಹಾಗೂ ೧,೦೩,೧೬೦ ರೂ. ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಆರೋಪಿಗಳು ಹುಲಜಂತಿ ಗ್ರಾಮದ ಒಂದುಪಾಳುಬಿದ್ದ ಮನೆಯ ಮೇಲ್ಪಾವಣಿಯ ಮೇಲೆ ಒಂದು ಬ್ಯಾಗನ್ನು ಎಸೆದು ಹೋಗಿದ್ದು ಅದರಲ್ಲಿ ೬.೫೪ ಕೆಜಿ ಚಿನ್ನಾಭರಣಗಳು ಹಾಗೂ ೪೧,೦೩,೦೦೦ರೂ. ನಗದು ಸಹ ಪತ್ತೆಯಾಗಿತ್ತು, ಕಾರಿನಲ್ಲಿದ್ದ ಚಿನ್ನ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದ ಹುಲಜಂತಿಯ ೧೫ ಜನ-ರಿಂದ ೧.೫೮೭ ಕೆ.ಜಿ ಬಂಗಾರ ಹಾಗೂ ೪೪,೨೫,೦೬೦ ರೂ. ನಗದುಹಣ ಜಪ್ತಿ ಮಾಡಲಾಗಿದೆ ಎಂದರು ಜಿಲಾ ್ಲ¥Çೆ ಲೀಸ್ ªರಿÀ ಷಾದ್ಠಿ Pü Áರಿ ಲPಣ್ಷÀ ನಿಂಬgಗಿÀ ನೇತೃತ್ವದಲ್ಲಿ ಎ ಎಸ್ ಪಿ ರಾಮನಗೌಡ ಹಟ್ಟಿ ಮಾರ್ಗದರ್ಶ ನದಲ್ಲಿ ಡಿವೈಎಸ್‌ಪಿಗಳಾದ ಜಗದೀಶ ಎಚ್.ಎಸ್., ಸುನೀಲ ಕಾಂಬಳೆ, ಅಧಿಕಾರಿಗಳಾದ ಸುರೇಶ ಬೆಂಡೆ ಗುAಬಳ, ಎಂ.ಎA. ಡಪ್ಪಿನ್, ರಮೇಶ ಅವಜಿ, ರಾಕೇಶ ಬಗಲಿ, ಶ್ರೀಕಾಂತ ಕಾಂಬ್ಳೆ, ಮನಗೂಳಿ, ಎನ್.ಜಿ. ಅಪನಾಯ್ಕರ, ಸೋಮೇಶ ಗೆಜ್ಜಿ, ಮಂಜುನಾಥ ತಿರಕನ್ನವರ, ಅರವಿಂದ ಅಂಗಡಿ, ದೇವರಾಜ ಉಳಾಗಡ್ಡಿ ಒಳಗೊಂಡ ೭ ವಿಶೇಷ ತನಿಖಾ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆಮತ್ತು ಈ ಕಾರ್ಯಾಚರಣೆ ಮುಂದುವರೆಯಲಿದೆ ಎAದು ಎಡಿಜಿಪಿ ಹಿತೇಂದ್ರ ಅವರು ಶ್ಲಾಘಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಥೋಡ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ÷್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಮುಂತಾದವರು ಒಳಗೊಂಡಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು