LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಪಾಕ್ ವಿರುದ್ಧ ಅಮೆರಿಕಾಗೆ ‘ಸೂಪರ್’ ಜಯ

ಡಲ್ಲಾಸ್: ಅಂತರಾಷ್ಟೀಯ ಮಟ್ಟದ ಕ್ರಿಕೆಟ್‍ಗೆ ಹೊಸದಾಗಿ ಸೇರಿ ಐಸಿಸಿ ವಿಶ್ವಕಪ್ ಟಿ-20 ಪಂದ್ಯಾವಳಿಯಲ್ಲಿ ಅದ್ಬುತ ಆಟ ತೋರುತ್ತಿರುವ ಅಮೆರಿಕ ತಂಡ ರೋಚಕ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನವನ್ನು ಮಣಿಸಿದೆ. ಇಲ್ಲಿ ನಡೆದ ಗ್ರೂಪ್ ಎ ತಂಡಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಆರಂಭಿಕ ಆಘಾತ ಅನುಭವಿಸಿದರೂ ಅಂತಿಮವಾಗಿ 20ಒವರ್‍ನಲ್ಲಿ 7 ವಿಕೆಟ್ ಕಳೆದು 159 ರನ್ ಗಳಿಸಿತು ಭಾರತ ಮೂಲದ ಅಮೆರಿಕ ತಂಡ ಎಡಗೈ ಸ್ಪಿನ್ನರ್ ನೊಸ್ತುಶ್ ಕೆಂಜಿಗೆ 30 ರನ್‍ಗಳಿಗೆ ಮೂರು ವಿಕೆಟ್‍ಗಳನ್ನು ಕಬಳಿಸಿ ಗಮನ ಸೆಳೆದರು.

ಅಲ್ಪ ಮೊತ್ತ ಬೆನ್ನಟ್ಟಿದ ಅಮೆರಿಕ ಬ್ಯಾಟ್‍ಸಮನ್‍ಗಳು ತಾಳಯ ಆಟ ಪ್ರದರ್ಶಿಸಿದರು ನಾಯಕ ಮೊನಾಂಕ್ ಪಟೇಲ್ (50), ಆರೋನ್ ಜೋನ್‍ಸ(36) ಮತ್ತು ಆಂಡ್ರೀಸ್ ಗೌಸ್ ( 35) ಅವರ ಅದ್ಬುತ ಸಮಯೋಚಿತ ಆಟದಿಂದ ರೋಚಕ ಸನ್ನಿವೇಶಕ್ಕೆ ಸಾಕ್ಷಿಯಾಗಿ 3 ವಿಕೆಟ್‍ಗೆ 159 ರನ್ ಗಳಿಸಿತು ಸಮಬಲ ಕಂಡಿತು.
ನಂತರ ನಡೆದ ಸೂಪರ್ ಓವರ್ ಒತ್ತಡ ಎರಡೂ ತಂಡದ ಮೇಲಿತ್ತು.

ಮೊದಲು ಪಾಕ್‍ನ ಮೊಹಮ್ಮದ್ ಅಮೀರ್ ಬೌಲಿಂಗ್ ಮಾಡಿ ಸೂಪರ್ ಓವರ್‍ನಲ್ಲಿ, ಅಮೆರಿಕ 18 ರನ್ ಪೇರಿಸಿತು. ಶಾಂತಚಿತ್ತದಿಂದ ಅಮೆರಿಕ ಪರವಾಗಿ ಬೌಲ್ ಮಾಡಿದ ಸೌರಭ್ ನೇತ್ರಾವಲ್ಕರ್ ಅದ್ಭುತ ಎಸೆತದ ಗತಿ ಅರಿಯದೆ ಬ್ಯಾಟ್ ಬೀಸಿದ ಪಾಕ್ ಕೇವಲ13ರನ್ ಕಲೆ ಹಾಕಲು ಮಾತ್ರ ಸಾಧ್ಯವಾಗಿ ಸೋಲು ಒಪ್ಪಿಕೊಂಡಿತು .

ಟಿ20 ವಿಶ್ವಕಪ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಪಾಕಿಸ್ತಾನಕ್ಕೆ ಸೂಪರ್ ಓವರ್ ಮೂಲಕ ಅಮೆರಿಕದ ಹೊಸಬರ ತಂಡ ಆಘಾತ ನೀಡಿ ಅತಿ ದೊಡ್ಡ ಗೆಲುವು ದಾಖಲಿಸಿ ಪಂಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.ಈ ಫಲಿತಾಂಶವು ವೆಸ್ಟ್ ಇಂಡೀಸ್‍ನಲ್ಲಿ ನಡೆದ 2007 ರ ವಿಶ್ವಕಪ್‍ನಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಮೂರು ವಿಕೆಟ್‍ಗಳ ಸೋಲನ್ನು ನೆನಪಿಸುತ್ತದೆ, ಅದು ಅವರನ್ನು ಆಪಂದ್ಯಾವಳಿಯಿಂದ ಹೊರಹಾಕಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು