LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ನೂರು ವರ್ಷ ನೆರಳು, ಬದುಕು ಕಟ್ಟಿಕೊಟ್ಟ ಆಲದಮರ ಧರೆಗುರುಳಿದೆ: ದೈವೀ ಶಕ್ತಿ ಕಾಪಾಡಿದೆ!!

ಶಿಡ್ಲಘಟ್ಟ: ರಾತ್ರಿಯಿಡೀ ಸುರಿದು ಭಾರೀ ಮಳೆಗೆ ತಾಲೂಕಿನಲ್ಲಿ ರ‍್ಷಧಾರೆಯಾಗಿದೆ. ಅಬ್ಲೂಡು ಬಳಿ ನೂರು ರ‍್ಷದ ಬೃಹತ್ ಆಲದ ಮರ ಸಂಪರ‍್ಣ ನೆಲಕಚ್ಚಿದ್ದು,ಇದರಡಿ ಇದ್ದ ಅಂಗಡಿ ಮುಂಗಟ್ಟುಗಳು,ಜನರು,ವಾಹನಗಳು ಅಪಾಯದಿಂದ ಪಾರಾಗಿವೆ. ಇಂದು ದೈವೀಶಕ್ತಿ ಪವಾಡ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಾತ್ರಿ ರಭಸದಿಂದ ಆರಂಭವಾದ ಮಳೆ ಮುಂಜಾನೆಯವರಿಗೂ ನಿಂತಿರಲಿಲ್ಲ. ಗಾಳಿ ಇಲ್ಲದ ಕಾರಣ ಒಂದೇ ಸಮನೆ ಬಿದ್ದ ಮಳೆಗೆ ಹಳ್ಳಿಗಳಲ್ಲಿ ಇದ್ದ ಚರಂಡಿಗಳಲ್ಲಿ ಕಸ ಕಡ್ಡಿ ಕೊಚ್ಚಿ ಹೋಗಿದೆ. ಗೌಡನ ಕೆರೆಯ ಕಾಲುವೆಯಲ್ಲಿ ನೀರು ಹರಿದಿದೆ. ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿ ಹೋಗುವ ರಸ್ತೆ ರಿಪೇರಿ ನಡೆಯುತ್ತಿತ್ತು. ಅಬ್ಲೂಡು ಬಳಿ ಬೃಹತ್ ಆಲದ ಮರ ನೂರಾರು ವರ್ಷ ಗಳಿಂದ   ಎಕರೆಯಷ್ಟು ವಿಶಾಲವಾಗಿ ಹರಡಿಕೊಂಡಿತ್ತು. ಇದರ ಅಡಿಯಲ್ಲಿಯೇ ತರಕಾರಿ ಅಂಗಡಿಗಳು, ಪೆಟ್ಟಿಗೆ ಅಂಗಡಿಗಳು, ಬಸ್ ನಿಲ್ದಾಣ, ಹಾಗೂ ಸಪ್ಲಮ್ಮ ದೇವಿ, ಪಿಳೇಕಕಮ್ಮದೇವಿ, ದೇವಾಲಯ ಸೇರಿದಂತೆ ಶನಿಮಹಾತ್ಮ ದೇವಾಲಯ ಇತ್ತು. ನೂತನವಾಗಿ ದೇವಾಲಯ ಕಟ್ಟಡವನ್ನು ಕಟ್ಟಲಾಗುತ್ತಿತ್ತು. ಹೋಟೆಲ್ ಗಳು ಇದ್ದವು. ರಾತ್ರಿ ಮಳೆ ಸುರಿಯುವಾಗ ಜನರು ಮನೆ ಸೇರಿಕೊಂಡಿದ್ದರು.

ರಸ್ತೆ ಸಂಚಾರ ಇರಲಿಲ್ಲ. ರಸ್ತೆ ರಿಪೇರಿ ಆಗುತ್ತಿದ್ದರಿಂದ ವಾಹನಗಳು ಸಂಚಾರ ಕಡಿಮೆ ಇತ್ತು. ಜನ ಮುಂಜಾನೆ ಬಂದು ನೋಡುವಷ್ಟರಲ್ಲಿ ನೂರು ರ‍್ಷದ ಆಲದ ಮರ ಸಂಪರ‍್ಣವಾಗಿ ಧರೆಗೆ ಉರುಳಿತ್ತು. ಮರದ ಬಳಿ ಇದ್ದ ವ್ಯಕ್ತಿ "ತಾನು ರಾತ್ರಿ ಮರ ಬಿದ್ದಿದ್ದನ್ನು ನೋಡಿದೆ. ದೇವರುಗಳೇ ಜನರನ್ನು ಕಾಪಾಡಿದ್ದಾರೆ". ಎಂದು ಸಾವಾರಿಸಿಕೊಂಡ ಹೇಳಿದ. ಪತ್ರಿಕೆ ವರದಿಗಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಜನರು ಸೇರಿದ್ದರು. ರಸ್ತೆ ಅಗಲೀಕರಣದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಮುಂಚೆ ಮರ ತೆಗೆಯುವಂತೆ ಹೇಳಲಾಗಿತ್ತು.ಆದರೆ ಈ ರಾತ್ರಿ ದೇವರೇ ಯಾರಿಗೂ ತೊಂದರೆಯಾಗದಂತೆ ತೆಗೆದಿದ್ದಾರೆ ಎಂದು ಹೇಳಿದರು. ಅಂತೂ ದೇವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ರಾತ್ರಿ ರಭಸದಿಂದ ಬಿದ್ದ ಮರ ಯಾವುದೇ ಅಪಾಯವಿಲ್ಲದಂತೆ ಕಾಪಾಡಿದ್ದಾರೆಂಬುದು ನಿತ್ಯ ಸತ್ಯವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು